90 ವರ್ಷಗಳ ಬಳಿಕ ಗ್ರಂಥಾಲಯ ಸೇರಿದ ಪುಸ್ತಕ !

90 ವರ್ಷಗಳ ಬಳಿಕ ಗ್ರಂಥಾಲಯ ಸೇರಿದ ಪುಸ್ತಕ !

ನ್ಯೂಸ್ ಆ್ಯರೋ: ಬರೋಬ್ಬರಿ 90 ವರ್ಷಗಳ ಬಳಿಕ ಗ್ರಂಥಾಲಯದ ಪುಸ್ತಕವೊಂದು ಮರಳಿ ಗ್ರಂಥಾಲಯಕ್ಕೆ ಬಂದಿದೆ. ಇದರ ಹಿಂದೆ ಒಂದು ಕಥೆಯೇ ಇದೆ.

ಸಾಮಾನ್ಯವಾಗಿ ಸಾರ್ವಜನಿಕ ಬಳಕೆಗೆ ಲಭ್ಯವಿರುವ ಗ್ರಂಥಾಲಯಗಳಲ್ಲಿ ಹೋಗಿ ಪುಸ್ತಕ ಓದಬಹುದು. ಒಂದು ವೇಳೆ ಗ್ರಂಥಾಲಯದ ಸದಸ್ಯರಾಗಿದ್ದಾರೆ ಪುಸ್ತಕ ಎರವಲು ಪಡೆದುಕೊಂಡು ಮನೆಗೆ ಹೋಗಬಹುದು. ಆದರೆ ಸಮಯಕ್ಕೆ ಸರಿಯಾಗಿ ಅದನ್ನು ಹಿಂದಿರುಗಿಸುವುದು ಕೂಡ ಮುಖ್ಯ. ಇಲ್ಲವಾದರೆ ದಂಡ ವಿಧಿಸಲಾಗುತ್ತದೆ.

ಇಲ್ಲೊಬ್ಬರು ಬರೋಬ್ಬರಿ 90 ವರ್ಷಗಳ ಕಾಲ ಗ್ರಂಥಾಲಯದ ಪುಸ್ತಕವನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದರು. ಅದನ್ನು ಇತ್ತೀಚೆಗೆ ಅವರ ಮಗಳು ಗ್ರಂಥಾಲಯಕ್ಕೆ ಒಪ್ಪಿಸಿ ಸುದ್ದಿ ಮಾಡಿದ್ದಾರೆ.

ಇದು ನ್ಯೂಯಾರ್ಕ್‌ನ ಲಾರ್ಚ್‌ಮಾಂಟ್ ಪಬ್ಲಿಕ್ ಲೈಬ್ರರಿಯ ಕಥೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿ 90 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ತೆಗೆದುಕೊಂಡು ಹೋಗಿದ್ದ ಪುಸ್ತಕ ಮರಳಿ ಗ್ರಂಥಾಲಯ ಸೇರಿದೆ ಎಂದು ಹೇಳಿದ್ದಾರೆ. ಈ ಸುದ್ದಿ ಈಗ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆಯೂ ಹರಿದು ಬರುತ್ತಿದೆ.

ಜೋಸೆಫ್ ಕಾನ್ರಾಡ್ ಅವರು 1925ರಲ್ಲಿ ಪ್ರಕಟಿಸಿದ “ಯೂತ್ ಅಂಡ್ ಟು ಅದರ್ ಸ್ಟೋರೀಸ್” ಎಂಬ ಪುಸ್ತಕವನ್ನು 1933ರ ಅಕ್ಟೋಬರ್ ನಲ್ಲಿ ಜಿಮ್ಮಿ ಎಲ್ಲಿಸ್ ಎಂಬುವವರು ಗ್ರಂಥಾಲಯದಿಂದ ಎರವಲು ಪಡೆದುಕೊಂಡಿದ್ದರು. ಆದರೆ ಅದನ್ನು ಮರಳಿಸಲು ಸಾಧ್ಯವಾಗದೇ ಅದು ಅವರ ಬಳಿಯೇ ಉಳಿದಿತ್ತು.

ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಹಳ್ಳಿಯಲ್ಲಿ ವಾಸವಾಗಿದ್ದ ಜಿಮ್ಮಿ ಎಲ್ಲಿಸ್ 1978 ರಲ್ಲಿ ನಿಧನರಾದರು. ಹೀಗಾಗಿ ಗ್ರಂಥಾಲಯದ ಪುಸ್ತಕ ಅವರ ಮನೆಯಲ್ಲೇ
ಉಳಿದುಹೋಗಿತ್ತು.

ಜಿಮ್ಮಿ ಎಲ್ಲಿಸ್ ಮಗಳು ವರ್ಜೀನಿಯಾದ ಜೋನಿ ಮೋರ್ಗನ್ ಇತ್ತೀಚೆಗೆ ತಂದೆಯ ಹಳೆಯ ವಸ್ತುಗಳ ಪೆಟ್ಟಿಗೆಯಲ್ಲಿ ಈ ಪುಸ್ತಕವನ್ನು ನೋಡಿದ್ದಾರೆ. ಅದರಲ್ಲಿ ಗ್ರಂಥಾಲಯದ ಹೆಸರು, ದಿನಾಂಕವನ್ನು ಗಮನಿಸಿದ್ದಾರೆ. ಕೂಡಲೇ ಅವರು ನ್ಯೂಯಾರ್ಕ್‌ನ ಲಾರ್ಚ್ಮಾಂಟ್ ಗ್ರಂಥಾಲಯವನ್ನು ಸಂಪರ್ಕಿಸಿ ಮಾಹಿತಿ, ವಿಳಾಸ ಪಡೆದುಕೊಂಡು ಗ್ರಂಥಾಲಯಕ್ಕೆ ಪುಸ್ತಕವನ್ನು ಮರಳಿಸಿದ್ದಾರೆ.

ಅವಧಿ ಮುಗಿದರೂ ಪುಸ್ತಕ ವಾಪಸ್ ಕೊಡದೇ ಇದ್ದರೆ ದಂಡ ವಿಧಿಸಲಾಗುತ್ತದೆ. ಪುಸ್ತಕ ತೆಗೆದುಕೊಂಡ ದಿನದಿಂದ ಲೆಕ್ಕ ಹಾಕಿದರೆ ಸುಮಾರು 89 ವರ್ಷ ಮತ್ತು 11 ತಿಂಗಳಿಗೆ 6,400 ಡಾಲರ್ ಗಿಂತ ಹೆಚ್ಚು ದಂಡ ವಿಧಿಸಬೇಕಿತ್ತು. ಆದರೆ ಗ್ರಂಥಾಲಯವು ಜೋನಿ ಮೋರ್ಗನ್‌ಗೆ ಭಾರೀ ದಂಡ ವಿಧಿಸಿಲ್ಲ. ಬದಲಾಗಿ ಕೇವಲ 5 ಡಾಲರ್ ಹಣ ಪಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಗ್ರಂಥಪಾಲಕ ಕ್ಯಾರೋಲಿನ್ ಕನ್ನಿಂಗ್ ಹ್ಯಾಮ್ , ಸಾಮಾನ್ಯವಾಗಿ ಗ್ರಂಥಾಲಯದ ಪುಸ್ತಕವನ್ನು 30 ದಿನಗಳೊಳಗೆ ಹಿಂದಿರುಗಿಸಬೇಕು. ಇಲ್ಲವಾದರೆ ಅದು ಕಳೆದುಹೋಗಿದೆ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಪುಸ್ತಕದ ವೆಚ್ಚವನ್ನು ಪಾವತಿಸಬೇಕಾಗುತ್ತದೆ. ಆದರೆ ಪುಸ್ತಕ ಮರಳಿ ಸಿಕ್ಕಿದ ಮೇಲೆ ಹಿಂದಿರುಗಿಸಿದರೆ ಅದರ ದಂಡ ಗರಿಷ್ಠ 5 ಡಾಲರ್ ಆಗುತ್ತದೆ ಎಂದು ತಿಳಿಸಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *