Tamanna Bhatia : ಆತ ನನಗೆ ತುಂಬಾ ವಿಶೇಷ ವ್ಯಕ್ತಿ – ಕೊನೆಗೂ ಲವ್ವಲ್ಲಿ ಬಿದ್ದ ವಿಷ್ಯ ಒಪ್ಕೊಂಡ ಮಿಲ್ಕಿ ಬ್ಯೂಟಿ..!!

Tamanna Bhatia : ಆತ ನನಗೆ ತುಂಬಾ ವಿಶೇಷ ವ್ಯಕ್ತಿ – ಕೊನೆಗೂ ಲವ್ವಲ್ಲಿ ಬಿದ್ದ ವಿಷ್ಯ ಒಪ್ಕೊಂಡ ಮಿಲ್ಕಿ ಬ್ಯೂಟಿ..!!

ನ್ಯೂಸ್ ಆ್ಯರೋ‌ : ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲ ಬಾಲಿವುಡ್ ನಲ್ಲೂ ಜನಪ್ರಿಯ ತಾರೆ. ಸದ್ಯ ಆಕೆಯ ‘ಲಸ್ಟ್ ಸ್ಟೋರಿಸ್ 2’ ಹಿಂದಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಕಷ್ಟು ಚರ್ಚೆ ಹುಟ್ಟು ಹಾಕುತ್ತಿದೆ. ಈ ಮಧ್ಯೆ ಇವರ ನಿಜವಾದ ಲವ್ ಸ್ಟೋರಿ ಕೂಡ ಸುದ್ದಿ ಮಾಡುತ್ತಿದೆ. ಮೊದಲ ಬಾರಿ ತಮನ್ನಾ ತಮ್ಮ ಪ್ರೀತಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ನಟ ವಿಜಯ್ ವರ್ಮ ಜೊತೆಗಿನ ಸಂಬಂಧದ ಕುರಿತು ಮೌನ ಮುರಿದ ತಮನ್ನಾ, ”ನಾನು ನಿಜವಾಗಿಯೂ ಎದುರು ನೋಡುತ್ತಿರುವ ವ್ಯಕ್ತಿಯೇ ಈತ. ಈತ ನನಗೆ ತುಂಬಾ ವಿಶೇಷ ವ್ಯಕ್ತಿ. ಆತನೊಂದಿಗೆ ನನ್ನ ಬಾಂಧವ್ಯ ಉತ್ತಮವಾಗಿದೆ” ಎಂದಿದ್ದಾರೆ.

ಪ್ರೀತಿ ಅರಳಿಸಿದ ‘ಲಸ್ಟ್ ಸ್ಟೋರಿಸ್ 2’

ತಮನ್ನಾ ಮತ್ತು ವಿಜಯ್ ವರ್ಮಾ ಒಟ್ಟಾಗಿ ನಟಿಸುತ್ತಿರುವ ಲಸ್ಟ್ ಸ್ಟೋರೀಸ್ 2 ಸೆಟ್ ನಲ್ಲಿ ಇವರಿಬ್ಬರ ಪ್ರೀತಿ ಅರಳಿತ್ತು ಎನ್ನುವುದು ವಿಶೇಷ. ”ನಾನು ನನಗಾಗಿ ಒಂದು ಜಗತ್ತನ್ನು ಸೃಷ್ಟಿಸಿಕೊಂಡಿದ್ದೇನೆ. ನಾನು ಏನನ್ನೂ ಹೇಳದೆಯೇ ಆತ ಆ ಜಗತ್ತನ್ನು ಅರ್ಥ ಮಾಡಿಕೊಂಡಿದ್ದಾನೆ” ಎಂದು ಬಾಹುಬಲಿ ನಟಿ ಹೇಳಿದ್ದಾರೆ.

ಈ ಹಿಂದೆ ಇವರಿಬ್ಬರು ತಮ್ಮ ಸಂಬಂಧದ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಗೋವಾದಲ್ಲಿ ನಡೆದ ಹೊಸ ವರ್ಷ ಪಾರ್ಟಿಯಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡ ಫೋಟೋ ವೈರಲ್ ಆಗಿತ್ತು. ಮಾತ್ರವಲ್ಲ ಡಿನ್ನರ್ ಪಾರ್ಟಿ, ಹಲವು ಕಾರ್ಯಕ್ರಮಗಳಲ್ಲಿ ಈ ಜೋಡಿ ಜೊತೆಯಾಗಿ ಕ್ಯಾಮರಾ ಕಣ್ಣಿಗೆ ಬಿದ್ದಿತ್ತು. ಆಗ ಇವರು ತಮ್ಮ ಸಂಬಂಧದ ಬಗ್ಗೆ ಏನೂ ಹೇಳಿರಲಿಲ್ಲ. ಇದೀಗ ಅಭಿಮಾನಿಗಳ ಊಹೆ ನಿಜವಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *