Sonu Gowda : ಹನಿಮೂನ್ ಪ್ಯಾಕೇಜ್ ನಲ್ಲಿ ಮಾಲ್ಡೀವ್ಸ್ ಟೂರ್ – ಒಂದು ಪ್ಯಾಕ್ ಗೆ 1600 ರೂಪಾಯಿ ಕೊಟ್ಟು ಸಿಗರೇಟ್ ಸೇದಿದ್ಲಂತೆ‌ ಸೋನು.!

Sonu Gowda : ಹನಿಮೂನ್ ಪ್ಯಾಕೇಜ್ ನಲ್ಲಿ ಮಾಲ್ಡೀವ್ಸ್ ಟೂರ್ – ಒಂದು ಪ್ಯಾಕ್ ಗೆ 1600 ರೂಪಾಯಿ ಕೊಟ್ಟು ಸಿಗರೇಟ್ ಸೇದಿದ್ಲಂತೆ‌ ಸೋನು.!

ನ್ಯೂಸ್ ಆ್ಯರೋ : ಮಾಲ್ಡೀವ್ಸ್ ನಲ್ಲಿ ಜಾಲಿ ಟ್ರಿಪ್‌ನಲ್ಲಿರುವ ಸೋನು ಗೌಡ ( Sonu Gowda) ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ಇನ್ನೂ ಸೋನು ಶೇರ್ ಮಾಡಿರುವ ಬಿಕಿನಿ ವಿಡಿಯೋ 19 ಮಿಲಿಯನ್‌ಗೂ ಅಧಿಕ ಅಂದರೆ 1 ಕೋಟಿ 90 ಲಕ್ಷ ವ್ಯೂವ್ ಕಂಡಿದೆ. 10 ಲಕ್ಷ ಇನ್ಸ್ಟಾಗ್ರಾಮ್ ಫಾಲೋವರ್ಸ್‌ ಪಡೆದಿರುವ ಸೋನು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ.

ಅದಲ್ಲದೆ ಮಾಧ್ಯಮಗಳಲ್ಲೂ ತನ್ನ ಪ್ರವಾಸದ ಬಗ್ಗೆ ಮಾತನಾಡಿರುವ ಸೋನು, ₹ 2 ಲಕ್ಷದ ಹನಿಮೂನ್ ಪ್ಯಾಕೇಜ್‌ನಲ್ಲಿ ನನ್ನ ಸ್ನೇಹಿತೆ ಜತೆ ಮಾಲ್ಡೀವ್ಸ್‌ಗೆ ಬಂದಿದ್ದೇನೆ. ಆದರೆ ಈ ಪ್ಯಾಕೇಜ್‌ನಲ್ಲಿ ಒಂದು ಜ್ಯೂಸ್ ಕೂಡ ಸಿಗುವುದಿಲ್ಲ. ಕಾಫಿ ಬೇಕೆಂದು ಕೇಳಿದರೆ ಹಾಲಿನ ಪೌಡರ್ ಕೊಡ್ತಾರೆ. ಸ್ಮೋಕ್ ಮಾಡಕ್ಕೆ ಹೋದರೆ ಒಂದು ಸಿಗರೇಟ್ ಪ್ಯಾಕೇಟ್ ಬೆಲೆ 20 ಡಾಲರ್ (₹1600) ಎಂದು ಹೇಳಿಕೊಂಡಿದ್ದಾರೆ.

ದಿನಚರಿ ಬಗ್ಗೆ ಪ್ರತಿಯಿಸಿದ ಇವರು, ಮಾಲ್ಡೀವ್ಸ್‌ಗೆ ಬಂದ ಮೇಲೆ ಇಷ್ಟೊಂದು ವೈರಲ್ ಆಗುತ್ತೇನೆಂದು ತಿಳಿದಿರಲಿಲ್ಲ. ನನ್ನ ಖುಷಿಗೆ ಬಿಕಿನಿ ಹಾಕಿದ್ದು, ನಮ್ಮ ಇಚ್ಛೆ ಪ್ರಕಾರ ಬದುಕಬೇಕು ಎಂದರು. ಇನ್‌ಸ್ಟಾಗ್ರಾಂನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಆಗಿರುವುದಕ್ಕೆ ಯಾವುದೇ ಸಂಭ್ರಮಾಚರಣೆ ಮಾಡುವುದಿಲ್ಲ. ಮಾಲ್ಡೀವ್ಸ್‌ನಲ್ಲಿ ಫೋಟೋ ಶೂಟ್ ಮಾಡೋದು ಸ್ವಿಮ್ಮಿಂಗ್ ಮಾಡುವುದು, ತಿನ್ನೋದು, ಮಲಗೋದು ಅಷ್ಟೇ ಆಗ್ಬಿಟ್ಟಿದೆ ಎಂದು ಖುಷಿ ವ್ಯಕ್ತಪಡಿಸಿದರು.

ಈ ಹಿಂದೆ ಇವರ ಖಾಸಗಿ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿ, ಸೋನು ಗೌಡಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದಾದ ಬಳಿಕ ಟಿಕ್‌ ಟಾಕ್ ಮೂಲಕ ಮತ್ತೆ ಪ್ರಚಾರ ಪಡೆದುಕೊಂಡರು.

ಬಳಿಕ ಬಿಗ್‌ಬಾಸ್‌ನಲ್ಲೂ ಅವಕಾಶವನ್ನು ಪಡೆದು, ದೊಡ್ಮನೆಯಲ್ಲಿ ಗುರುತಿಸಿಕೊಂಡಿದ್ದರು. ಅದಲ್ಲದೆ ತನ್ನ ಯೂಟ್ಯೂಬ್‌ನಲ್ಲಿ ಆಕ್ಟೀವ್‌ ಆಗಿರುವ ಸೋನು ಕೆಲವೊಂದು ವಿಡಿಯೋ ಮಾಡಿದ್ದಾರೆ. ಈಚೆಗೆ ಒಳಉಡುಪಿನ ಬಗ್ಗೆ ಮಾಡಿದ ವಿಡಿಯೋಗೆ ಭಾರೀ ನೆಗೆಟಿವ್ ಕಮೆಂಟ್ ಬಂದಿದೆ.

ಇದಾ‌ದ ಬಳಿಕ ಮತ್ತೆ ಕ್ಯಾಮೆರಾ ಮುಂದೆ ಅತ್ತು, ಕೆಟ್ಟ ಕಮೆಂಟ್‌ಗಳಿಂದ ನನ್ನ ಕುಟುಂಬಕ್ಕೆ ತೊಂದರೆಯಾಗುತ್ತಿದೆ ಎಂದು ಅಳಲನ್ನು ತೊಡಿಕೊಂಡಿದ್ದರು. ಇದಾದ ಕೆಲ ತಿಂಗಳಲ್ಲೇ ಇದೀಗ ಮತ್ತೆ ಬಿಕಿನಿ ತೊಟ್ಟು ಟ್ರೋಲ್‌ ಆಗಿದ್ದಾರೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *