
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 61 ಕೈದಿಗಳಿಗೆ ಬಿಡುಗಡೆ ಭಾಗ್ಯ – ಸನ್ನಡತೆ ಆಧಾರದಲ್ಲಿ ರಿಲೀಸ್ ಹೇಗೆ? ಏನೆಲ್ಲಾ ನಿಯಮಗಳಿವೆ?
- ಕರ್ನಾಟಕ
- September 8, 2023
- No Comment
- 37
ನ್ಯೂಸ್ ಆ್ಯರೋ : ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷಯನ್ನು ಅನುಭವಿಸುತ್ತಿದ್ದ 61 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಒಪ್ಪಿಗೆಯಂತೆ ಬಿಡುಗಡೆ ಮಾಡಲಾಗಿದೆ.
ಗೃಹ ಇಲಾಖೆಯು ಸನ್ನಡತೆ ಆಧಾರದ ಮೇಲೆ 64 ಕೈದಿಗಳ ರಿಲೀಸ್ಗೆ ಪಟ್ಟಿ ತಯಾರಿಸಿತ್ತು. ಬಳಿಕ ಈ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿತ್ತು. ಈ ಪೈಕಿ ಮೊದಲು 57 ಕೈದಿಗಳ ರಿಲೀಸ್ಗೆ ರಾಜ್ಯಪಾಲರ ಒಪ್ಪಿಗೆ ಸೂಚಿಸಿದ್ದರು. 7 ಕೈದಿಗಳ ಹೆಸರನ್ನು ವಾಪಸ್ ಕಳುಹಿಸಿದ್ದರು.
ಮರುಪರಿಶೀಲನೆ ಮಾಡಿ 7 ಕೈದಿಗಳಲ್ಲಿ ನಾಲ್ವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. 3 ಕೈದಿಗಳ ವಿರುದ್ಧ ಗಂಭೀರವಾದ ಕೇಸ್ ದಾಖಲಾಗಿದ್ದರಿಂದ ಬಿಡುಗಡೆಗೆ ನಿರಾಕರಿಸಲಾಗಿದೆ.
ಸನ್ನಡತೆ ಆಧಾರ ಎಂದರೇನು? ಸಾಮಾನ್ಯವಾಗಿ ಸನ್ನಡತೆ ಎಂದರೆ ಇತರರಿಗೆ ಉಪಕಾರಿಯಾಗಿ, ತಲೆ ಬಾಗಿ ನಡೆದುಕೊಳ್ಳುವುದು. ನೀತಿ-ನಿಯಮಗಳನ್ನು ಪಾಲಿಸುವುದು. ಇನ್ನೂ ಜೈಲು ಶಿಕ್ಷೆ ಅನುಭವಿಸುತ್ತಿರುವವರು ಕೂಡ ಶಿಕ್ಷಾವಧಿಯಲ್ಲಿ ಬದಲಾಗಿ ಜೈಲಿನಲ್ಲಿ ಈ ಬಗೆಯ ಸನ್ನಡತೆಯನ್ನು ತೋರಿದರೆ ಅವರಿಗೆ ಅವಧಿಪೂರ್ವ ಬಿಡುಗಡೆಯನ್ನು ದಯಪಾಲಿಸುವ ರಿವಾಜು ನಮ್ಮ ಕಾನೂನಿನಲ್ಲಿದೆ.
ಇನ್ನೂ ಶಿಕ್ಷಾವಧಿಯಲ್ಲೂ ಯಾವುದೇ ಬಗೆಯ ಸುಧಾರಣೆಯನ್ನು ತೋರದಿದ್ದರೆ ಅವಧಿಪೂರ್ವ ಬಿಡುಗಡೆಗೆ ಅರ್ಹರಾಗುವುದೇ ಇಲ್ಲ. ಅದರಲ್ಲೂ ಅತ್ಯಾಚಾರ, ಕೊಲೆ, ದೇಶದ್ರೋಹ ಇತ್ಯಾದಿ ಅಪರಾಧಗಳನ್ನು ಎಸಗಿರುವ ಅಪರಾಧಿಗಳನ್ನು ಸನ್ನಡತೆಯಾಧಾರಿತ ಬಿಡುಗಡೆಗೆ ಪರಿಗಣಿಸಲೇ ಬಾರದೆಂದು ಕೇಂದ್ರ ಸರಕಾರ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ರೂಪಿಸಲಾದ ನಿಯಮಾವಳಿಗಳು ಸ್ಪಷ್ಟಪಡಿಸಿತ್ತು.