
G. Marimutthu : ದೂರದರ್ಶನಕ್ಕೆ ಡಬ್ಬಿಂಗ್ ನೀಡುತ್ತಿದ್ದ ವೇಳೆ ಹೃದಯಾಘಾತ – ತಮಿಳಿನ ಖ್ಯಾತ ನಟ ‘ಜಿ.ಮಾರಿಮುತ್ತು’ ನಿಧನ
- ಮನರಂಜನೆ
- September 8, 2023
- No Comment
- 46
ನ್ಯೂಸ್ ಆ್ಯರೋ : ತಮಿಳಿನ ಖ್ಯಾತ ನಟ, ನಿರ್ದೇಶಕ ಜಿ ಮಾರಿಮುತ್ತು (58) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ ದೂರದರ್ಶನದ ‘ಎಥಿರ್ ನೀಚಲ್’ ಎಂಬ ಧಾರಾವಾಹಿಗೆ ಡಬ್ಬಿಂಗ್ ನೀಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಚೆನ್ನೈನ ವಡಪಳನಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಅವರು ಈಚೆಗೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಜೈಲರ್ ಸಿನಿಮಾದಲ್ಲೂ ಅಭಿನಯಿಸಿದ್ದರು. ಇದೀಗ ಇವರ ಹಠಾತ್ ನಿಧನ ಸಿನಿಮಾರಂಗಕ್ಕೆ ದೊಡ್ಡ ಆಘಾತವನ್ನು ಕೊಟ್ಟಿದೆ. ಇವರು ಪತ್ನಿ ಬ್ಯಾಕಿಯಲಕ್ಷ್ಮೀ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆ್ಯಕ್ಟೀವ್ ಆಗಿದ್ದ ಮಾರಿಮುತ್ತು ಅವರು ಕೆಲ ವಿಷಯಗಳನ್ನು ನೇರವಾಗಿ ಚರ್ಚೆಗೆ ತರುತ್ತಿದ್ದರು. ಅವರ ಪಾರ್ಥಿವ ಶರೀರವನ್ನು ಅವರ ಚೆನ್ನೈನ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಅವರ ಹುಟ್ಟೂರು ಥೇನಿಗೆಯಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇವರು 2008 ರಲ್ಲಿ ‘ಕಣ್ಣುಮ್ ಕಣ್ಣುಮ್’ ಚಿತ್ರದ ಮೂಲಕ ಚಲನಚಿತ್ರ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದರು. ಚಲನಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ, ಅವರು ತಮಿಳು ಚಲನಚಿತ್ರಗಳಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ಅವರು ಗೀತರಚನೆಕಾರ ವೈರಮುತ್ತು ಜತೆಗೆ ಹಾಗೂ ತಮಿಳು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ಹಿಟ್ ಸಿನಿಮಾಗಳಾದ ‘ವಾಲಿ’, ‘ಜೀವ’, ‘ಪರಿಯೇರುಂ ಪೆರುಮಾಳ್’ ಮತ್ತು ‘ಜೈಲರ್’ ಸಿನಿಮಾದಲ್ಲಿ ಇವರ ಅಭಿನಯಿಸಿದ್ದಾರೆ. 2022 ರಿಂದ, ಅವರು ತಮಿಳು ದೂರದರ್ಶನ ಧಾರಾವಾಹಿ ‘ಎಥಿರ್ ನೀಚಲ್’ ನ ಭಾಗವಾಗಿದ್ದರು. ಮಾರಿಮುತ್ತು ಅವರು ಯೂಟ್ಯೂಬ್‌ನಲ್ಲಿ ತುಂಬಾನೇ ಆಕ್ಟೀವ್ ಆಗಿದ್ದು, ಕೆಲ ವಿಷಯಗಳನ್ನು ನೇರ ನೇರ ಚರ್ಚೆಗೆ ತಂದು ತುಂಬಾ ವೈರಲ್ ಆಗಿದ್ದರು.
2010ರಿಂದ ನಟನೆಯತ್ತ ಒಲವು ತೋರಿದ್ದ ಮಾರಿಮುತ್ತು:
ನಟನೆ ಬಗ್ಗೆ 2010ರಿಂದ ಒಲವು ತೋರಿದ್ದ ಮಾರಿಮುತ್ತು ಅವರು ನಂತರ ದಿನಗಳಲ್ಲಿ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಲು ಆರಂಭಿಸಿದರು. ‘ಯುದ್ಧಮ್ ಸೇ’ (2011) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದ ಯಶಸ್ಸಿನ ಬಳಿಕ ಆರೋಹಣಂ (2012), ನಿಮಿರಂದು ನಿಲ್ (2014), ಕೊಂಬನ್ (2015)ನಂತಹ ಸೂಪರ್ಹಿಟ್ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದರು. ಇವರ ನೈಜ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನೂ 2016ರಲ್ಲಿ ಬಿಡುಗಡೆಯಾದ ‘ಮರುದು’ ಸಿನಿಮಾದಲ್ಲಿ ಇವರು ನಿರ್ವಹಿಸಿದ ಪಾತ್ರ ನಟ ವಿಶಾಲ್ ಅವರ ಗಮನ ಸೆಳೆಯಿತು. ಆದಾದ ಬಳಿಕ ಕತ್ತಿ ಸಂದೈ (2016) ಚಿತ್ರದಲ್ಲಿ ನಟಿಸಿದರು. ಕ್ರಮೇಣ ಧಾರವಾಹಿಗಳಲ್ಲೂ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ‘ಎಥಿರ್ ನೀಚಲ್’ ಧಾರವಾಹಿಯಲ್ಲಿ ಇವರ ಪಾತ್ರ ಅಪಾರ ಅಭಿಮಾನಗಳನ್ನು ಹೊಂದಿದೆ.