
ಹೊರಕ್ಕೆ ಬಂದ್ಮೇಲೆ ಬಿಗ್ ಬಾಸ್ ಪ್ರಪಂಚ ತುಂಬಾನೇ ಚಿಕ್ಕದೆಂದು ಗೊತ್ತಾಯ್ತು..! – ಹೀಗಾಂತ ಗೊತ್ತಿದ್ರೆ ಬಿಗ್ ಬಾಸ್ ಗೆ ಹೋಗ್ತಿರ್ಲಿಲ್ಲ ಎಂದಾ ರಕ್ಷಕ್ ಬುಲೆಟ್
- ಮನರಂಜನೆ
- November 16, 2023
- No Comment
- 63
ನ್ಯೂಸ್ ಆ್ಯರೋ : ಹೀಗಾಂತ ಗೊತ್ತಿದ್ರೆ ನಾನು ಬಿಗ್ ಬಾಸ್‌ಗೆ ಹೋಗ್ತಾನೆ ಇರಲಿಲ್ಲ ಎಂದು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ರಕ್ಷಕ್ ಬುಲೆಟ್ ಅವರು ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡುವಾಗ ಹೇಳಿಕೊಂಡಿದ್ದಾರೆ.
24 ಗಂಟೆಯ ಚಟುವಟಿಕೆಗಳಲ್ಲಿ ಕೆಲವೊಂದನ್ನು ಮಾತ್ರ ಆಯ್ಕೆ ಮಾಡಿ ಎಡಿಟ್ ಮಾಡಿ ಟೆಲಿಕಾಸ್ಟ್ ಮಾಡುತ್ತಾರೆ. ನಾವು ಅಲ್ಲಿ ಎಷ್ಟೊಂದು ಮಾತನಾಡಿರುತ್ತೇವೆ, ಎಷ್ಟೋ ಡಾನ್ಸ್ ಮಾಡಿರುತ್ತೇವೆ. ಆದರೆ, ಜನರಿಗೆ ತೋರಿಸುವುದು ಸ್ವಲ್ಪ ಮಾತ್ರ ಎಂದು ಹೇಳಿಕೆ ನೀಡಿದ್ದಾರೆ.
ಬಿಗ್ ಬಾಸ್‌ಗೆ ಹೋದ ಮೇಲೆ ನಾನು ಯಾವ ವಾರವೂ ಎಲಿಮಿನೇಟ್ ಆಗಿರಲಿಲ್ಲ. ಆದರೆ ನಾಲ್ಕನೇ ವಾರ ಅದ್ಯಾಕೆ ನಾಮಿನೇಟ್ ಆಗಿ ತಕ್ಷಣಕ್ಕೆ ಎಲಿಮಿನೇಟ್ ಮಾಡಿದರೋ ಗೊತ್ತಿಲ್ಲ. ವೋಟಿಂಗ್ ಪೋಲ್ ಬಗ್ಗೆ ನನಗೆ ಗೊತ್ತಿಲ್ಲ, ನಾನು ಅದನ್ನು ನೋಡಿಲ್ಲ. ಹೀಗಾಂತ ಗೊತ್ತಿದ್ದರೆ ನಾನು ಬಿಗ್ ಬಾಸ್ ಶೋಗೆ ಹೋಗುತ್ತಲೇ ಇರಲಿಲ್ಲ ಎಂದರು.
ಹೊರಕ್ಕೆ ಬಂದ ಮೇಲೆ, ಅಲ್ಲಿಯ ಪ್ರಪಂಚ ತುಂಬಾ ಚಿಕ್ಕದು, ಹೊರಗಡೆ ಪ್ರಪಂಚ ತುಂಬಾ ದೊಡ್ಡದು ಎನಿಸುತ್ತಿದೆ. ನಾನು ಹೊರಕ್ಕೆ ಬಂದಿರುವುದು ಬೇಸರದ ಜತೆಜತೆಗೆ ಖುಷಿ ಕೊಟ್ಟಿದೆ ಎಂದರು.
ಬಿಗ್ ಬಾಸ್ ಮನೆಯಲ್ಲಿ ಜೀವನ ಹೊರಗಡೆ ಅಂದುಕೊಂಡಷ್ಟು ಸುಲಭ ಅಲ್ಲ. ನಮ್ಮ ನಮ್ಮ ಮನೆಗಳಲ್ಲಿ ಇಷ್ಟಪಟ್ಟಿದ್ದು ಸಿಗುವಂತೆ ಅಲ್ಲಿ ಬೇಕಾಗಿದ್ದು ತಕ್ಷಣಕ್ಕೆ ಸಿಗುವುದಿಲ್ಲ. ಪ್ರತಿಯೊಂದಕ್ಕೂ ಕಷ್ಟಪಡಬೇಕು.
ಅನ್ನದ ಬೆಲೆ ತಿಳಿಸಿ ಕೊಟ್ಟಿದ್ದೆ ಬಿಗ್ ಬಾಸ್:
ಅಲ್ಲಿ ಹೋದ ಮೇಲೆಯೇ ನನಗೆ ಅನ್ನದ ಬೆಲೆ ತಿಳಿದಿದ್ದು. ನನ್ನ ಮನೆಯಲ್ಲಿ ನಾನು ಮಾತನಾಡುವುದು ಕಡಿಮೆಯೇ. ಆದರೆ, ಬಿಗ್ ಬಾಸ್ ಮನೆಯಲ್ಲಿ ಬಹಳಷ್ಟು ಮಾತನಾಡಿದ್ದೇನೆ. ಮನೆಯಲ್ಲಿ ಇದ್ದಂತೆ ನಾನು ಇರಲಿಲ್ಲ, ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಚೆನ್ನಾಗಿಯೇ ಆಟ ಆಡಿದ್ದೇನೆ. ಆದರೆ, ಯಾಕೆ ಎಲಿಮಿನೇಟ್ ಮಾಡಿದ್ರು ಅಂತಾ ಗೊತ್ತಾಗ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.