
ಅಮಿತಾಭ್ ಬಚ್ಚನ್ ಗೆ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ನೋಡ್ಬೇಡಿ ಅಂದ ನೆಟ್ಟಿಗರು – ಇದಕ್ಕೆ ಬಿಗ್ ಬಿ ಅವರೇ ನೇರ ಕಾರಣ : ಏನದು?
- ಮನರಂಜನೆ
- November 16, 2023
- No Comment
- 40
ನ್ಯೂಸ್ ಆ್ಯರೋ : ಐಸಿಸಿ ವಿಶ್ವಕಪ್ ನ ಫೈನಲ್ ನತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದೆ. ಇದಕ್ಕೆ ಮುಖ್ಯ ಕಾರಣ ಬುಧವಾರ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಭಾರತ ಈಗಾಗಲೇ ಫೈನಲ್ ಗೆ ಲಗ್ಗೆ ಇಟ್ಟಿದೆ.
ಎಲ್ಲರೂ ಭಾನುವಾರ ಬಿಡುವು ಮಾಡಿಕೊಂಡು ಪಂದ್ಯ ನೋಡುವ ತಯಾರಿ ನಡೆಸುತ್ತಿದ್ದರೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಗೆ ಅವರ ಅಭಿಮಾನಿಗಳು ನೀವು ಐಸಿಸಿ ವರ್ಲ್ಡ್ ಕಪ್ ನ ಫೈನಲ್ ಪಂದ್ಯವನ್ನು ವೀಕ್ಷಿಸಬೇಡಿ ಎಂದು ಮನವಿ ಮಾಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಸೆಮಿಫೈನಲ್ ನಲ್ಲಿ ಕೊಹ್ಲಿ, ಅಯ್ಯರ್, ಗಿಲ್ ಅವರ ಅಮೋಘ ಬ್ಯಾಟಿಂಗ್ ಜೊತೆಗೆ ಶಮಿ ಅವರ ಬೌಲಿಂಗ್ ದಾಳಿಯನ್ನು ಮೆಚ್ಚಿ ಸಾವಿರಾರು ಅಭಿಮಾನಿಗಳು, ನಟ ರಜಿನಿಕಾಂತ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ವೀಕ್ಷಿಸಿದ್ದಾರೆ. ಇಂಡಿಯಾ ತಂಡಕ್ಕೆ ಸಾಕಷ್ಟು ಮೆಚ್ಚುಗೆಯೂ ಹರಿದು ಬರುತ್ತಿದೆ.
ಈ ನಡುವೆ ನಟ ಅಮಿತಾಭ್ ಅವರೂ ಭಾರತ ಕ್ರಿಕೆಟ್ ತಂಡವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅವರ ಅಭಿಮಾನಿಗಳು ನೀವು ಫೈನಲ್ ಪಂದ್ಯವನ್ನು ನೋಡಬೇಡಿ ಎಂದು ಎಚ್ಚರಿಸಿದ್ದಾರೆ.
ಇದಕ್ಕೆ ಮುಖ್ಯ ಕಾರಣವೂ ಇದೆ. ಅಮಿತಾಭ್ ತಮ್ಮ ಟ್ವಿಟ್ ನಲ್ಲಿ ನಾನು ಯಾವಾಗ ಮ್ಯಾಚ್ ನೋಡುವುದಿಲ್ಲವೋ ಆ ದಿನವೇ ಭಾರತ ತಂಡ ಪಂದ್ಯವನ್ನು ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಇದನ್ನು ನೋಡಿರುವ ಅವರ ಅಭಿಮಾನಿಗಳು, ದಯಮಾಡಿ ನೀವು ಫೈನಲ್ ಪಂದ್ಯವನ್ನು ನೋಡಬೇಡಿ ಸರ್ ಎಂದು ಒಬ್ಬರು ಹೇಳಿದ್ದರೆ ಇನ್ನೊಬ್ಬರು ನಮ್ಮಗಾಗಿ ಇದೊಂದು ತ್ಯಾಗ ಮಾಡಿ, ದಯವಿಟ್ಟು ಫೈನಲ್ ಪಂದ್ಯವನ್ನು ನೋಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಈಗ ವೈರಲ್ ಆಗಿದೆ.