Retired Hurt Rules : ಕ್ರಿಕೆಟ್ ನಲ್ಲಿ ರಿಟೈರ್ಡ್ ಹರ್ಟ್ ಅಂದ್ರೆ ಏನು ಗೊತ್ತಾ..? – ಇದರ ರೂಲ್ಸ್ ಏನು ಹೇಳುತ್ತೆ ಅಂದ್ರೆ….

Retired Hurt Rules : ಕ್ರಿಕೆಟ್ ನಲ್ಲಿ ರಿಟೈರ್ಡ್ ಹರ್ಟ್ ಅಂದ್ರೆ ಏನು ಗೊತ್ತಾ..? – ಇದರ ರೂಲ್ಸ್ ಏನು ಹೇಳುತ್ತೆ ಅಂದ್ರೆ….

ನ್ಯೂಸ್ ಆ್ಯರೋ : ಕ್ರಿಕೆಟ್ ನಲ್ಲಿ ಅನೇಕ ನಿಯಮಗಳಿರುತ್ತದೆ. ಈ ಎಲ್ಲಾ ನಿಯಮಗಳ ಬಗ್ಗೆ ಸರಿಯಾಗಿ ಅರಿತುಕೊಂಡವನು ಮಾತ್ರ ಒಬ್ಬ ಉತ್ತಮ ಕ್ರಿಕೆಟಿಗನಾಗಲು ಸಾಧ್ಯ.

ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಗೆದ್ದು ಸೆಮಿಫೈನಲ್ ಪ್ರವೇಶಿಸಿತು. ಆದರೆ ಪಂದ್ಯದಲ್ಲಿ ಟೀಮ್ ಇಂಡಿಯಾ 23ಓವರ್ ಗಳಲ್ಲಿ 1ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದ್ದಾಗ ಆರಂಭಿಕ ಆಟಗಾರ ಶುಭ್ಮನ್ ಗಿಲ್ ತಮ್ಮ ಎಡಕಾಲಿನ ಸೆಳೆತದಿಂದ ಗಾಯಗೊಂಡು ರಿಟೈರ್ಡ್ ಹರ್ಟ್ ಆದರು. ಆಗ ಅವರು ಗಳಿಸಿದ್ದು 79ರನ್.

  1. ರಿಟೈರ್ಡ್ ಹರ್ಟ್ ಎಂದರೇನು? ಈ ಬಗ್ಗೆ ನಿಯಮ ಏನು ಹೇಳುತ್ತೆ..?

ಇನ್ನಿಂಗ್ಸ್ ನಲ್ಲಿ ಬಾಲ್ ಡೆಡ್ ಆಗಿರುವಾಗ ಮೈದಾನದಲ್ಲಿರುವ ಬ್ಯಾಟರ್ ತನ್ನ ಇನ್ನಿಂಗ್ಸ್ ನಲ್ಲಿ ಯಾವುದೇ ಸಮಯದಲ್ಲಿ ರಿಟೈರ್ಡ್ ಹರ್ಟ್ ಅಥವಾ ನಿವೃತ್ತಿಯಾಗಿ ಮೈದಾನದಿಂದ ಹೊರಗೆ ಹೋಗಬಹುದು. ಆದರೆ ಅಂಪೈರ್ ಗಳು ಆಟವನ್ನು ಮುಂದುವರೆಸಲು
ಮೊದಲು ರಿಟೈರ್ಡ್ ಔಟ್ ಆಗುತ್ತಿರಲು ಕಾರಣವನ್ನು ಆ ಬ್ಯಾಟರ್ ತಿಳಿಸಬೇಕು.

  1. ಅವರು ಚೇತರಿಸಿಕೊಂಡ ನಂತರ ಮತ್ತೆ ಆಡಲು ಅವಕಾಶವಿದೆಯೇ..?

ಒಂದು ವೇಳೆ ಬ್ಯಾಟರ್ ಯಾವುದೇ ಅನಾರೋಗ್ಯ, ಗಾಯ ಅಥವಾ ಇತರ ಯಾವುದೇ ಅನಿವಾರ್ಯ ಕಾರಣದಿಂದ ರಿಟೈರ್ಡ್ ಹರ್ಟ್ ಆದರೆ ಅವರು ತಮ್ಮ ಇನ್ನಿಂಗ್ಸ್ ನ್ನು ಮತ್ತೆ ಪುನರಾರಂಭಿಸಲು ಅರ್ಹನಾಗಿರುತ್ತಾರೆ. ಒಂದು ವೇಳೆ ಒಂದು ಬಾರಿ ರಿಟೈರ್ಡ್ ಹರ್ಟ್ ಆದ ಬ್ಯಾಟರ್ ಮತ್ತೆ ಬ್ಯಾಟಿಂಗ್ ಮಾಡದಿದ್ದರೆ ಆ ಬ್ಯಾಟರ್ ನನ್ನು ‘ರಿಟೈರ್ಡ್ ನಾಟ್ ಔಟ್’ ಎಂದು ಘೋಷಿಸಲಾಗುತ್ತದೆ.

  1. ಯಾವಾಗ ರಿಟೈರ್ಡ್ ಔಟ್ ಎಂದು ಘೋಷಿಸಲಾಗುತ್ತದೆ?

ಮೇಲಿನ ಎರಡು ಕಾರಣಗಳನ್ನು ಹೊರತುಪಡಿಸಿ ಇತರ ಯಾವುದೇ ಕಾರಣಗಳಿಂದ ಬ್ಯಾಟ್ಸ್ ಮೆನ್ ನಿವೃತ್ತರಾದರೆ ಎದುರಾಳಿ ನಾಯಕನ ಒಪ್ಪಿಗೆಯೊಂದಿಗೆ ಮಾತ್ರ ಆ ಬ್ಯಾಟರ್ ನ ತನ್ನ ಇನ್ನಿಂಗ್ಸ್ ಮತ್ತೆ ಆರಂಭಿಸಬಹುದು. ಒಂದು ವೇಳೆ ಬ್ಯಾಟರ್ ಮತ್ತೆ ತನ್ನ ಆಟವನ್ನು ಆರಂಭಿಸಲು ಸಾಧ್ಯವಾಗದಿದ್ದಾಗ ಆ ಬ್ಯಾಟರ್ ನ್ನು ‘ರಿಟೈರ್ಡ್ ನಾಟ್ ಔಟ್’ ಎಂದು ಘೋಷಿಸಲಾಗುತ್ತದೆ.

  1. ಅವರ ಬದಲು ಮತ್ತೊಬ್ಬರಿಗೆ ಅವಕಾಶ ಲಭಿಸುತ್ತದೆಯೇ..?

ಇಲ್ಲ. ಒಬ್ಬ ಬ್ಯಾಟರ್ ರಿಟೈರ್ಡ್ ಆದರೆ ಅವರ ಬದಲಿಗೆ ಮತ್ತೊಬ್ಬ ಆಟಗಾರ ಬ್ಯಾಟಿಂಗ್, ಬೌಲಿಂಗ್ ಅಥವಾ ನಾಯಕನಾಗಿ ಆಡುವಂತಿಲ್ಲ. ಬದಲಿ ಆಟಗಾರ ಫೀಲ್ಡಿಂಗ್ ಮಾಡಲು ಮಾತ್ರ ಅವಕಾಶವಿದೆ.

  1. ರಿಟೈರ್ಡ್ ಹರ್ಟ್ ಆದ ಬ್ಯಾಟರ್ ಮತ್ತೆ ಯಾವಾಗ ಬ್ಯಾಟಿಂಗ್ ಮಾಡಬಹುದು?

ಒಂದು ಬಾರಿ ಬ್ಯಾಟರ್ ರಿಟೈರ್ಡ್ ಹರ್ಟ್ ಆಗಿ ಮತ್ತೆ ಇನ್ನಿಂಗ್ಸ್ ಪುನರಾರಂಭಿಸಬೇಕಾದರೆ ತಂಡದ ಯಾವುದಾದರೂ ವಿಕೆಟ್ ಪತನವಾಗಬೇಕು. ತಂಡದ ಮತ್ತೊಬ್ಬ ಬ್ಯಾಟರ್ ಔಟಾದ ಸಮಯದಲ್ಲಿ ಅಥವಾ ಇನ್ನೊಬ್ಬ ಬ್ಯಾಟರ್ ರಿಟೈರ್ಡ್ ಹರ್ಟ್ ಆದ ಸಮಯದಲ್ಲಿ ಮಾತ್ರ ಮತ್ತೆ ಇನ್ನಿಂಗ್ಸ್ ಆರಂಭಿಸಬಹುದು. ಯಾರೂ ಔಟಾಗದ ಹೊರತು ನಡುವೆ ಬ್ಯಾಟ್ ಬೀಸಲು ಅವಕಾಶವಿಲ್ಲ.

  1. ವಿಶ್ವಕಪ್ 2023ರಲ್ಲಿ ಯಾರೆಲ್ಲಾ ರಿಟೈರ್ಡ್ ಹರ್ಟ್ ಆಗಿದ್ದಾರೆ ಗೊತ್ತಾ..?

ಬಾಂಗ್ಲಾದೇಶ ವಿರುದ್ಧದ ಲೀಗ್ ಪಂದ್ಯದಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸ್ ತಮ್ಮ ಬೆರಳಿನ ಗಾಯದ ನೋವಿನಿಂದ ರಿಟೈರ್ಡ್ ಹರ್ಟ್ ಆಗಿದ್ದರು. ನಂತರ ಅವರು ಇನ್ನಿಂಗ್ಸ್ ಆಡಲೇ ಇಲ್ಲ. ಪಂದ್ಯದಲ್ಲಿ ಅವರು ನಾಟ್ ಔಟ್ ಆಗಿ ಉಳಿದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *