
ಆಯತಪ್ಪಿ ಜಾರಿ ಬಿದ್ದ ‘ಬಿಂಕದ ಮದನಾರಿ’ ಹನಿರೋಸ್ – ಕಾಲು ಜಾರಿದ ಹಾಟ್ ನಟಿಯ ವಿಡಿಯೋ ವೈರಲ್ ಆಯ್ತು ನೋಡಿ..!!
- ಮನರಂಜನೆ
- September 9, 2023
- No Comment
- 176
ನ್ಯೂಸ್ ಆ್ಯರೋ : ಸೆಲೆಬ್ರಿಟಿಗಳು ಅದರಲ್ಲೂ ಚಿತ್ರ ನಟ-ನಟಿ ಎಂದರೇನೇ ಹಾಗೆ. ಅವರ ಪ್ರತಿಯೊಂದು ನಡೆ ನುಡಿ ಗಮನಿಸಲ್ಪಡುತ್ತವೆ. ಅವರು ಹೋದಲ್ಲಿ ಬಂದಲ್ಲಿ ಕ್ಯಾಮರಾ ಹಿಂಬಾಲಿಸುತ್ತಿರುತ್ತದೆ. ಕೆಲವೊಮ್ಮೆ ಆಕಸ್ಮಿಕವಾಗಿ ಜರಗುವ ಸಣ್ಣ ಘಟನೆಗಳೂ ವೈರಲ್ ಆಗುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಮಾಲಿವುಡ್ ನಟಿ ಹನಿರೋಸ್.
ವೈರಲ್ ಆದ ಪುಟ್ಟ ವೀಡಿಯೋ
ಮಾಲಿವುಡ್ ನಟಿ ಹನಿರೋಸ್ ಇತ್ತೀಚೆಗೆ ಕಾರ್ಯಕ್ರಮ ಮುಗಿಸಿ ಕಾರು ಹತ್ತುವಾಗ ಜಾರಿ ಬಿದ್ದರು. ಸದ್ಯ ಈ ಕೆಲವೇ ಸೆಕೆಂಡ್ ಗಳ ದೃಶ್ಯ ವೈರಲ್ ಆಗುತ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ ಮಾಧ್ಯಮ ಸಂಸ್ಥೆಯೊಂದು ಪೋಸ್ಟ್ ಮಾಡಿರುವ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜಾರಿ ಬಿದ್ದ ಪ್ರಿಯನಟಿ ಹನಿರೋಸ್ ಎನ್ನುವ ಶೀರ್ಷಿಕೆಯಡಿ ಈ ಪುಟ್ಟ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಏನಾಯ್ತು?
ಕೇರಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರ ಉದ್ಘಾಟನೆಯಲ್ಲಿ ಮಲೆಯಾಳಂನ ಜನಪ್ರಿಯ ನಾಯಕ ಜಯಸೂರ್ಯ ಜೊತೆ ಹನಿರೋಸ್ ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಇಬ್ಬರೂ ಕಾರಿನತ್ತ ಹೊರಟರು. ರಸ್ತೆ ಎರಡೂ ಬದಿ ಅಭಿಮಾನಿಗಳ ನೂಕು ನುಗ್ಗಲು ಇತ್ತು.
ಎಲ್ಲರತ್ತ ಕೈ ಬೀಸಿ ಮೊದಲು ಜಯಸೂರ್ಯ ಕಾರು ಹತ್ತಿದರು. ಬಳಿಕ ಬಂದ ಹನಿರೋಸ್ ಕಾರು ಹತ್ತಲು ಮುಂದಾದಾಗ ಕಾಲು ಜಾರಿ ಕುಸಿದರು. ಕೂಡಲೇ ಅಲ್ಲೇ ಇದ್ದ ರಕ್ಷಣಾ ಸಿಬ್ಬಂದಿ ಅವರನ್ನು ಹಿಡಿದೆತ್ತಿದರು. ಒಂದು ಕ್ಷಣ ಗಾಬರಿಯಾದ ನಟಿ ಬಳಿಕ ಸಾವರಿಸಿಕೊಂಡು ಕಾರು ಹತ್ತಿ ಜನರತ್ತ ಕೈ ಬೀಸಿ ಹೊರಟರು.
ಯಾರು ಹನಿರೋಸ್?
ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಳಲ್ಲಿ ಅಭಿನಯಿಸಿರುವ ಹನಿರೋಸ್ 2005ರಲ್ಲಿ ‘ಬಾಯ್ ಫ್ರೆಂಡ್’ ಎನ್ನುವ ಮಲೆಯಾಳಂ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. 2007ರಲ್ಲಿ ‘ಮುದಲ್ ಕನವೇ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮಿಳು ಸಿನಿರಂಗಕ್ಕೆ ಪ್ರವೇಶಿಸಿದರು. 2008ರಲ್ಲಿ ಮೊದಲ ಬಾರಿ ‘ಆಲಯಂ’ ತೆಲುಗು ಚಿತ್ರದಲ್ಲಿ ಕಾಣಿಸಿಕೊಂಡರು. 2009ರಲ್ಲಿ ಕನ್ನಡ ಚಿತ್ರ ‘ಅಜಂತಾ’ದಲ್ಲಿ ನಟಿಸಿದರು. ಈ ವರ್ಷ ಟಾಲಿವುಡ್ ನಲ್ಲಿ ತೆರೆಕಂಡ ‘ವೀರ ಸಿಂಹ ರೆಡ್ಡಿ’ ತೆಲುಗು ಚಿತ್ರದ ಮೂಲಕ ಎಲ್ಲರ ಗಮನ ಸೆಳೆದರು.