
ಟಾಯ್ಲೆಟ್ ಕ್ಲೋಸೆಟ್ ಕೆಳಗೆ ಚಿಕ್ಕ ರಂಧ್ರ ಯಾಕಿರುತ್ತವೆ? – ಇಲ್ಲಿದೆ ಕುತೂಹಲಕಾರಿ ಮಾಹಿತಿ
- ಕೌತುಕ-ವಿಜ್ಞಾನ
- September 9, 2023
- No Comment
- 137
ನ್ಯೂಸ್ ಆ್ಯರೋ : ಇತ್ತೀಚೆಗೆ ವೆಸ್ಟರ್ನ್ ಶೈಲಿಯ ವಾಟರ್ ಕ್ಲೋಸೆಟ್ ಜನಪ್ರಿಯವಾಗುತ್ತಿದೆ. ವಯಸ್ಸಾದವರು, ರೋಗಿಗಳು, ಮಕ್ಕಳು ಹೀಗೆ ಎಲ್ಲಾ ವರ್ಗದವರಿಗೆ ಸುಲಭವಾಗಿ ಬಳಸಲು ಅನುಕೂಲವಾಗುವುದು ಈ ಮಾದರಿಯ ವೈಶಿಷ್ಟ್ಯ. ಹಿಂದೆಲ್ಲ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಈ ಮಾದರಿ ಈಗ ಹಳ್ಳಿಗಳಲ್ಲೂ ಸಾಮಾನ್ಯ ಎಂಬಂತಾಗಿದೆ.
ಕೆಳಭಾಗದಲ್ಲಿ ಚಿಕ್ಕ ರಂಧ್ರ ಯಾಕೆ?
ನೀವು ವೆಸ್ಟರ್ನ್ ವಾಟರ್ ಕ್ಲೋಸೆಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಅದರ ತಳಭಾಗದ ಎರಡೂ ಕಡೆ ಎರಡು ಚಿಕ್ಕ ರಂಧ್ರವನ್ನು ನೋಡಿರಬಹುದು. ಅದು ಯಾಕೆ? ಅದರ ಉಪಯೋಗವೇನು? ಎನ್ನುವ ಪ್ರಶ್ನೆಯೂ ನಿಮ್ಮನ್ನು ಕಾಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಚಿಕ್ಕ ರಂಧ್ರದ ಉಪಯೋಗ
ಕ್ಲೋಸೆಟ್ ಅನ್ನು ನೆಲಕ್ಕೆ ಭದ್ರವಾಗಿ ಫಿಕ್ಸ್ ಮಾಡಲು ಈ ರಂಧ್ರಗಳನ್ನು ಬಳಸಲಾಗುತ್ತದೆ. ಅಂದರೆ ಈ ರಂಧ್ರಗಳಿಗೆ ಬೋಲ್ಟ್ ತೂರಿಸಿ ಅದನ್ನು ನೆಲದ ಮೇಲೆ ಭದ್ರಪಡಿಸಲಾಗುತ್ತದೆ. ಕ್ಲೋಸೆಟ್ ಸ್ಥಿರವಾಗಿ ನಿಲ್ಲಲು ಇದು ಸಹಾಯ ಮಾಡುತ್ತದೆ.

ಕೆಲವರು ಈ ರಂಧ್ರ ಗಾಳಿಯಾಡಲು, ನೀರು ಸರಾಗವಾಗಿ ಹರಿದು ಹೋಗಲು, ದುರ್ಗಂಧ ಹೊರ ಹೋಗಲು, ಕೊಳಚೆ ಕಟ್ಟಿ ನಿಲ್ಲದಿರಲು ಎಂದೆಲ್ಲ ಹೇಳುತ್ತಾರೆ. ಆದರೆ ಈ ರಂಧ್ರಗಳ ಉಪಯೋಗ ಕ್ಲೋಸೆಟ್ ಅನ್ನು ಭದ್ರಪಡಿಸುವುದಾಗಿದೆ.