ಇನ್ಸ್ಟಾಗ್ರಾಮ್ ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡ ಅರ್ಜುನ್ ಕಪೂರ್ – ನಟನ ಕಣ್ಣೀರಿಗೆ ಕಾರಣ ಏನು?

ಇನ್ಸ್ಟಾಗ್ರಾಮ್ ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡ ಅರ್ಜುನ್ ಕಪೂರ್ – ನಟನ ಕಣ್ಣೀರಿಗೆ ಕಾರಣ ಏನು?

ನ್ಯೂಸ್ ಆ್ಯರೋ‌ : ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ಪ್ರೀತಿಯ ಸಾಕು ನಾಯಿ ಮ್ಯಾಕ್ಸಿಮಸ್ ಇತ್ತೀಚೆಗೆ ಮೃತಪಟ್ಟಿದೆ. ಕುಟುಂಬದ ಭಾಗವೇ ಆಗಿದ್ದ ಶ್ವಾನದ ಮರಣ ಅರ್ಜುನ್ ಕಪೂರ್ ಗೆ ಸಾಕಷ್ಟು ನೋವು ತಂದಿದೆ. ಅವರು ಇನ್ಸ್ಟಾಗ್ರಾಮ್ ನಲ್ಲಿ ಮ್ಯಾಕ್ಸಿಮಸ್ ನ ಹಳೆ ಫೋಟೋಗಳನ್ನು ಹಂಚಿಕೊಂಡು ಭಾವುಕ ವಿದಾಯ ನುಡಿಗಳನ್ನು ಬರೆದಿದ್ದಾರೆ.

ನೆನಪು ಮೆಲುಕು ಹಾಕಿದ ನಟ

ಮ್ಯಾಕ್ಸಿಯಸ್ ಜೊತೆಗಿನ ಒಡನಾಟದ ನೆನಪುಗಳನ್ನು ಅರ್ಜುನ್ ಈ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಮ್ಯಾಕ್ಸಿಮಸ್ ಅರ್ಜುನ್ ಜೊತೆ ಮಲಗಿರುವುದು, ಅವರ ಸಹೋದರಿ ಅನ್ಶುಲಾ ಜೊತೆ ಆಟವಾಡುತ್ತಿರುವ ಫೋಟೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.

ಅರ್ಜುನ್ ಹೇಳಿದ್ದೇನು?

ಈ ಜಗತ್ತಿನ ಅತ್ಯುತ್ತಮ ಹುಡುಗ ನನ್ನ ಮ್ಯಾಕ್ಸಿಯಸ್. ಪ್ರೀತಿಯ, ಮುದ್ದಿನ, ಧೈರ್ಯವಂತ ಸಂಗಾತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಮತ್ತು ಅನ್ಶು ಬಳಿಯಿಂದ ಮ್ಯಾಕ್ಸಿಮಸ್ ನನ್ನು ಕಸಿದುಕೊಂಡಿದ್ದು ದೊಡ್ಡ ಆಘಾತ ತಂದಿದೆ. ಅವನಿಲ್ಲದೆ ಮನೆಯಲ್ಲಿ ಹೇಗಿರುವುದು ಎನ್ನುವುದೇ ತಿಳಿಯುತ್ತಿಲ್ಲ. ಸಾವು ಯಾವತ್ತೂ ಕ್ರೂರ. ಈ ಬಾರಿಯಂತೂ ಅದಕ್ಕಿಂತ ಭಿನ್ನವಾಗಿಲ್ಲ. ನನಗೆ ಮತ್ತು ಅನ್ಶುಗೆ ಇಷ್ಟು ದಿನ ಉತ್ತಮ ಸಂಗಾತಿಯಾಗಿ ಮುದ ನೀಡಿದ್ದಕ್ಕೆ ಧನ್ಯವಾದಗಳು ಎಂದು ಅರ್ಜುನ್ ಕಪೂರ್ ಇಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಓದಿ ಅನೇಕರು ಭಾವುಕರಾಗಿದ್ದಾರೆ. ಸದ್ಯ ಈ ಪೊಸ್ಟ್ ವೈರಲ್ ಆಗಿದ್ದು ಅನೇಕರು ಮ್ಯಾಕ್ಸಿಮಸ್ ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಬಾಲಿವುಡ್ ತಾರೆಗಳಾದ ಟೈಗರ್ ಶ್ರಾಫ್, ಆಥಿಯಾ ಶೆಟ್ಟಿ, ವಾಣಿ ಕಪೂರ್ ಮತ್ತಿತರರು ಸಾಂತ್ವನ ಹೇಳಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ‘ದಿ ಲೇಡಿ ಕಿಲ್ಲರ್’ ಮತ್ತು ‘ಮೇರಿ ಪತ್ನಿ ಕಾ ರಿಮೇಕ್’ನಲ್ಲಿ ಅರ್ಜುನ್ ನಟಿಸುತ್ತಿದ್ದಾರೆ. ಕೆಲವು ವರ್ಷಗಳಿಂದ ದೊಡ್ಡ ಹಿಟ್ ನೀಡಲು ವಿಫಲವಾಗಿರುವ ಅವರು ಉತ್ತಮ ಬ್ರೇಕ್ ಗೆ ಕಾಯುತ್ತಿದ್ದಾರೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *