ಮಹದೇವ್ ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್​ನ ಮಾಲೀಕ ಸೌರಬ್ ಮದುವೆಯಲ್ಲಿ ಭಾಗಿ – ಬಾಲಿವುಡ್‌ ಮಂದಿಗೆ ಇಡಿ ದಾಳಿ ಶಾಕ್…!!

ಮಹದೇವ್ ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್​ನ ಮಾಲೀಕ ಸೌರಬ್ ಮದುವೆಯಲ್ಲಿ ಭಾಗಿ – ಬಾಲಿವುಡ್‌ ಮಂದಿಗೆ ಇಡಿ ದಾಳಿ ಶಾಕ್…!!

ನ್ಯೂಸ್‌ ಆ್ಯರೋ : ಇತ್ತೀಚೆಗೆ ನಡೆದ ಮಹದೇವ್ ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್​ನ ಮಾಲೀಕ ಸೌರಬ್ ಮದುವೆಯಲ್ಲಿ ಪಾಲ್ಗೊಂಡ ಬಾಲಿವುಡ್‌ ಮಂದಿಗೆ ಇಡಿ ದಾಳಿ ನಡೆಸಿ ಶಾಕ್ ನೀಡಿದೆ. ಮಹದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಗುರಿಯಾಗಿಸಿಕೊಂಡು ಹಲವು ನಗರಗಳಲ್ಲಿ ದಾಳಿ ಮಾಡಿರುವ ಇಡಿ 417 ಕೋಟಿ ಮೌಲ್ಯದ ನಗದು, ಚಿನ್ನ, ಆಸ್ತಿಗಳನ್ನು ವಶಪಡಿಸಿಕೊಂಡಿದೆ. ಭೋಪಾಲ್, ಮುಂಬೈ, ಕೊಲ್ಕತ್ತ ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ರೇಡ್​ಗಳನ್ನು ಇಡಿ ಮಾಡಿದೆ.

ದುಬೈನಲ್ಲಿ ನಡೆದ ಮದುವೆಯಲ್ಲಿ ನಟ ಟೈಗರ್ ಶ್ರಾಫ್, ಸನ್ನಿ ಲಿಯೋನ್, ಕೃತಿ ಕರಬಂಧ, ನುಸ್ರತ್ ಬರೂಚಾ, ಭಾಗ್ಯಶ್ರೀ, ಕಾಮಿಡಿಯನ್​ಗಳಾದ ಕೃಷ್ಣ ಅಭಿಷೇಕ್, ಭಾರತಿ, ಗಾಯಕರಾದ ನೇಹಾ ಕಕ್ಕರ್, ಅತಿಫ್ ಅಸ್ಲಂ, ರಾಹತ್ ಫತೇ ಅಲಿ ಖಾನ್, ವಿಶಾಲ್ ದದ್ಲಾನಿ, ಅಲಿ ಅಸ್ಗರ್ ಇನ್ನೂ ಕೆಲವರ ಮೇಲೆ ಇಡಿ ದಾಳಿ ನಡೆಸಿದೆ.

ಬಾಲಿವುಡ್​ನ ಹಲವು ನಟ-ನಟಿಯರು, ಗಾಯಕರು, ಹಾಸ್ಯ ಕಲಾವಿದರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ದುಬೈನಲ್ಲಿ ನಡೆದ ಮದುವೆಯೊಂದಿಗೆ ಲಿಂಕ್ ಹೊಂದಿದವರನ್ನಷ್ಟೆ ದಾಳಿ ಮಾಡಲಾಗಿದೆ.

ಮಹದೇವ್ ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್​ನ ಮಾಲೀಕ ಸೌರಭ್ ಚಂದ್ರಕರ್ ಮದುವೆ ಇದೇ ಫೆಬ್ರವರಿಯಲ್ಲಿ ದುಬೈನಲ್ಲಿ ಬಹು ಅದ್ಧೂರಿಯಾಗಿ ನಡೆದಿತ್ತು. ಆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಪ್ರದರ್ಶನ ನೀಡಿದ್ದ ಬಾಲಿವುಡ್ ನಟ, ನಟಿಯರ ಮೇಲೆ ಇಡಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಸೌರಭ್ ಚಂದ್ರಕರ್ ಮದುವೆಗೆ ಸುಮಾರು ₹200 ಕೋಟಿ ಖರ್ಚು ಮಾಡಿದ್ದಾರೆ ಎಂದು ಇಡಿ ಅಂದಾಜಿಸಿದ್ದು, ಇದರಲ್ಲಿ 140 ಕೋಟಿ ಹಣವನ್ನು ಹವಾಲ ರೂಪದಲ್ಲಿ ಮುಂಬೈನ ಇವೆಂಟ್ ಮ್ಯಾನೇಜ್​ಮೆಂಟ್ ಸಂಸ್ಥೆಯೊಂದಕ್ಕೆ ನೀಡಲಾಗಿದೆಯಂತೆ. ಈ ಇವೆಂಟ್ ಮ್ಯಾನೇಜ್​ಮೆಂಟ್ ಸಂಸ್ಥೆಯ ಮೂಲಕವೇ ಬಾಲಿವುಡ್ ನಟ-ನಟಿಯರು, ಗಾಯಕರಿಗೆ ಸಂಭಾವನೆಗಳನ್ನು ತಲುಪಿಸಲಾಗಿದೆ.

ದುಬೈನಲ್ಲಿ ನಡೆದ ಮದುವೆಗೆ ತೆರಳಲು ನಾಗಪುರದಿಂದ ಹಲವು ಪ್ರೈವೇಟ್ ಜೆಟ್​ಗಳನ್ನು ಬುಕ್ ಮಾಡಲಾಗಿತ್ತಂತೆ. ದುಬೈನಲ್ಲಿ ಹೋಟೆಲ್​ಗಳಿಗೆ 40 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತಂತೆ. ಈ 40 ಕೋಟಿ ಹಣದ ಹೊರತಾಗಿ ಮದುವೆಗೆ ಖರ್ಚು ಮಾಡಿದ ನೂರಾರು ಕೋಟಿ ಹಣವನ್ನು ಹವಾಲಾ ಮೂಲಕವೇ ನೀಡಲಾಗಿತ್ತು ಎಂದು ಇಡಿಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸೌರಭ್ ಚಂದ್ರಕರ್ ಹಾಗೂ ರವಿ ಉಪ್ಪಾಲ್ ಅವರುಗಳು ಮಹದೇವ್ ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ದುಬೈನಲ್ಲಿದ್ದುಕೊಂಡು ನಡೆಸುತ್ತಿದ್ದರಂತೆ. ಹೊಸ ಬಳಕೆದಾರರನ್ನು ತಲುಪಲು, ಹಣ ವರ್ಗಾವಣೆ ಇನ್ನಿತರೆ ಕಾರ್ಯಗಳಿಗೆ ಲೇಯರ್ಡ್ ವೆಬ್ ಅನ್ನು ಬಳಸುತ್ತಿದ್ದರು. ಭಾರತದಲ್ಲಿಯೂ ಹಲವಾರು ಏಜೆಂಟ್​ಗಳನ್ನು ಇವರು ನೇಮಕ ಮಾಡಿಕೊಂಡಿದ್ದು 70:30ರ ಅನುಪಾತದಲ್ಲಿ ಲಾಭಾಂಶ ಹಂಚಿಕೆ ಮಾಡಿಕೊಳ್ಳುತ್ತಿದ್ದರು ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *