
ಕೊನೆಗೂ ಎರಡನೇ ಮದುವೆಗೆ ಸಜ್ಜಾದ್ರಾ ನಾಗಚೈತನ್ಯ? – ಉದ್ಯಮಿಯ ಮಗಳ ಜೊತೆ ಮದುವೆ ನಿಜಾನಾ? ವೈರಲ್ ಸುದ್ದಿಯ ಬಗ್ಗೆ ಸಿಕ್ತು ಸ್ಪಷ್ಟನೆ..!!
- ಮನರಂಜನೆ
- September 15, 2023
- No Comment
- 36
ನ್ಯೂಸ್ ಆ್ಯರೋ : ದಕ್ಷಿಣ ಭಾರತ ಚಿತ್ರರಂಗದಲ್ಲಿ ಕ್ಯೂಟ್ ಕಪಲ್ ಎಂದು ಗುರುತಿಸಿಕೊಂಡಿದ್ದ ನಾಗಚೈತನ್ಯ ಮತ್ತು ಸಮಂತಾ ದೂರವಾಗಿ ಎರಡು ವರ್ಷಗಳಾಗಿವೆ. ಇಬ್ಬರೂ ಅವರವರ ವೃತ್ತಿ ಬದುಕಿನಲ್ಲಿ ಬ್ಯುಸಿಯಾಗಿದ್ದು, ಈ ನಡುವೆ ನಾಗಚೈತನ್ಯ ಮತ್ತೊಮ್ಮೆ ಹಸೆಮಣೆ ಏರಲು ಸಿದ್ಧವಾಗಿದ್ದಾರೆ ಎಂಬ ವದಂತಿ ಬಗ್ಗೆ ಕೊನೆಗೂ ಸ್ಪಷ್ಟನೆ ಸಿಕ್ಕಿದೆ.
ಟಾಲಿವುಡ್ ಸ್ಟಾರ್ ನಾಗ ಚೈತನ್ಯ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಗಳು ಮತ್ತು ವದಂತಿಗಳ ಕೇಂದ್ರ ಬಿಂದುವಾಗಿದ್ದಾರೆ. ನಟಿ ಸಮಂತಾ ರುತ್ ಪ್ರಭು ಅವರೊಂದಿಗೆ ವಿಚ್ಛೇದನ ಪಡೆದ ಬಳಿಕ ಅವರ ಎರಡನೇ ಮದುವೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ.
ತೆಲುಗು ಚಿತ್ರರಂಗದಲ್ಲಿ ಅತ್ಯತ್ತಮ ಹೆಸರು ಗಳಿಸಿರುವ ಈ ತಾರಾ ಜೋಡಿ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು 2021ರಲ್ಲಿ ಕೊನೆ ಮಾಡಿದ್ದರು. ಇದು ಅವರ ಅಭಿಮಾನಿ ಬಳಗಕ್ಕೂ ದೊಡ್ಡ ಶಾಕ್ ಆಗಿತ್ತು. ಮತ್ತೆ ಇವರಿಬ್ಬರೂ ಒಂದಾಗಲಿ ಎಂದು ಅವರ ಅಭಿಮಾನಿಗಳು ಆಶಯ ವ್ಯಕ್ತಪಡಿಸುತ್ತಲೇ ಇದ್ದರು. ಆದರೆ ನಾಗಚೈತನ್ಯ ಮದುವೆ ಸುದ್ದಿ ಕೇಳಿ ಈಗ ಎಲ್ಲರೂ ಸುಮ್ಮನಾಗಿದ್ದರು.

ಸಮಂತಾ ಕೂಡ ಬದುಕಿನ ಕಹಿ ನೆನಪುಗಳನ್ನೆಲ್ಲ ಮರೆತು ತಮ್ಮ ಆರೋಗ್ಯ ಹಾಗೂ ವೃತ್ತಿ ಜೀವನಕ್ಕೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದರೆ ಮತ್ತೆ ಈಗ ಟಾಲಿವುಡ್ ಸ್ಟಾರ್ ನಾಗಚೈತನ್ಯ ಮದುವೆ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ. ಸದ್ದಿಲ್ಲದೇ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಾಗಚೈತನ್ಯ ಅವರ ವಧು ಯಾರು ಎಂಬುದು ಈಗ ಎಲ್ಲರ ಕುತೂಹಲ ಕೆರಳಿಸಿತ್ತು.
ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಬಳಿಕ ನಟಿ ಶೋಭಿತಾ ಹೆಸರು ನಾಗಚೈತನ್ಯ ಜೊತೆ ಕೇಳಿಬಂದಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ನಾಗಚೈತನ್ಯ ಅವರು ಮದುವೆಯಾಗುತ್ತಿರುವ ವಧು ಶೋಭಿತಾ ಅಲ್ಲ ಎಂದು ತಿಳಿದ ನೆಟ್ಟಿಗರು ವಧು ಯಾರಾಗಿರಬಹುದು ಎನ್ನುವ ಊಹೆ ಮಾಡತೊಡಗಿದ್ದರು.
ಖ್ಯಾತ ಉದ್ಯಮಿಯೊಬ್ಬರ ಮಗಳನ್ನು ನಾಗಚೈತನ್ಯ ಯಾಗಲಿದ್ದಾರೆ ಎನ್ನುವ ಸುದ್ದಿ ಹಲವು ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ ಇದೀಗ ನಾಗ ಚೈತನ್ಯ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇವಲ ವದಂತಿಯೇ ಹೊರತು ಬೇರೇನೂ ಅಲ್ಲ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ.