
ದುಬೈಯಲ್ಲಿ 8 ಕೋಟಿ ಬೆಲೆಯ ಮನೆ ಖರೀದಿಸಿದ ಬಿಗ್ ಬಾಸ್ ವಿನ್ನರ್ – ಐಷಾರಾಮಿ ಮನೆ ಹೇಗಿದೆ ಗೊತ್ತಾ? ವಿಡಿಯೋ ನೋಡಿ…
- ಮನರಂಜನೆ
- September 15, 2023
- No Comment
- 88
ನ್ಯೂಸ್ ಆ್ಯರೋ : ಜನಪ್ರಿಯ ಯೂಟ್ಯೂಬರ್ ಎಲ್ವಿಶ್ ಯಾದವ್ ಇತ್ತೀಚೆಗೆ ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್-2 ಚಾಂಪಿಯನ್ ಆಗಿ ಗಮನ ಸೆಳೆದಿದ್ದಾರೆ. ಸದ್ಯ ಅವರು ದುಬೈಯಲ್ಲಿ ಐಷಾರಾಮಿ ಬಂಗಲೆಯೊಂದನ್ನು ಖರೀದಿಸಿದ್ದು, ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ವೀಡಿಯೋ ಇದೀಗ ವೈರಲ್ ಆಗಿದೆ.
4 ಬಿಎಚ್‍ಕೆ ಮನೆ
ಎಲ್ವಿಶ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಈ 4 ಬಿಎಚ್‍ಕೆ ಮನೆಯ ವೀಡಿಯೋ ಹಂಚಿಕೊಂಡಿದ್ದಾರೆ. 26 ವರ್ಷದ ಯೂಟ್ಯೂಬರ್ ತಮ್ಮ ಮನೆಯ ವರ್ಚುವಲ್ ಟೂರ್ ಹಮ್ಮಿಕೊಂಡಿದ್ದು ಅಭಿಮಾನಿಗಳ ಗಮನ ಸೆಳೆದಿದೆ.
ಈ ವೀಡಿಯೋದಲ್ಲಿ ಬರೋಬ್ಬರಿ 8 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಮನೆಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅತಿಥಿ ಕೋಣೆ, ಬಾತ್ ರೂಮ್ ಅಟ್ಯಾಚ್ ಆಗಿರುವ ಬೆಡ್ ರೂಮ್, ಸುಂದರ ಬಾಲ್ಕನಿಯೊಳಗೊಂಡ ದೊಡ್ಡ ಅಡುಗೆ ಕೋಣೆಯ ನೋಟ ಆಕರ್ಷಕವಾಗಿದೆ. ಮರದ ಟೇಬಲ್, ಬಿಳಿ ಕುರ್ಚಿಯನ್ನೊಳಗೊಂಡ ಅತ್ಯುತ್ತಮ ಡೈನಿಂಗ್ ಹಾಲ್ ಅನ್ನು ಕೂಡ ಈ ಮನೆ ಒಳಗೊಂಡಿದೆ. ವಿಶೇಷ ಎಂದರೆ ಎಲ್ವಿಶ್ ತಮ್ಮ ಊರಾದ ಹರಿಯಾಣದಲ್ಲಿ 16 ಬಿಎಚ್‍ಕೆಯ ಬೃಹತ್ ಮನೆಯನ್ನೂ ಖರೀದಿಸಿದ್ದಾರೆ. ಈ ಬಗ್ಗೆ ವ್ಲೋಗ್ ನಲ್ಲಿ ಮಾಹಿತಿ ನೀಡಿದ್ದಾರೆ.
ಮ್ಯೂಸಿಕ್ ವೀಡಿಯೋ
ಸೆಪ್ಟಂಬರ್ 26ರಂದು ಹುಟ್ಟುಹಬ್ಬ ಆಚರಿಸಿಕೊಂಡ ಎಲ್ವಿಶ್ ನಟಿ ಊರ್ವಶಿ ರೌಟೆಲಾ ಜೊತೆ ನಟಿಸಿದ ಮೊದಲ ಮ್ಯೂಸಿಕ್ ವೀಡಿಯೋ ‘ಹಮ್ ತೊ ದೀವಾನಾ’ ವನ್ನು ಯೂಟ್ಯೂಬ್ ಮೂಲಕ ಬಿಡುಗಡೆಗೊಳಿಸಿದರು.
ಎಲ್ವಿಶ್ ಜೊತೆಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ಊರ್ವಶಿ ರೌಟೆಲಾ, ”ಅವರ ಜೊತೆ ತೆರೆ ಹಂಚಿಕೊಂಡಿದ್ದು ನಿಜಕ್ಕೂ ಅದ್ಭುತ ಅನುಭವ. ಅಭಿಮಾನಿಗಳು ಖಂಡಿತವಾಗಿಯೂ ಈ ಹಾಡನ್ನು ಮೆಚ್ಚಲಿದ್ದಾರೆ. ರೊಮ್ಯಾಂಟಿಕ್ ಆಗಿರುವ ಈ ಹಾಡಿನ ಸಂಗೀತವೂ ಅಷ್ಟೇ ಚೆನ್ನಾಗಿ ಮೂಡಿ ಬಂದಿದೆ” ಎಂದಿದ್ದಾರೆ.