
ಸಲಾರ್ ಚಿತ್ರದ ಒಟಿಟಿ ಹಕ್ಕು ದಾಖಲೆಯ ಮೊತ್ತಕ್ಕೆ ಸೇಲ್..! – ಎಲ್ಲಿ ಸ್ಟ್ರೀಮ್ ಆಗಲಿದೆ ಪ್ರಶಾಂತ್ ನೀಲ್-ಪ್ರಭಾಸ್ ಚಿತ್ರ?
- ಮನರಂಜನೆ
- September 15, 2023
- No Comment
- 49
ನ್ಯೂಸ್ ಆ್ಯರೋ : ‘ಕೆಜಿಎಫ್’ ಸರಣಿ ಮೂಲಕ ಇಡೀ ದೇಶವೇ ತಿರುಗಿ ನೊಡುವಂತೆ ಮಾಡಿದ ಸ್ಯಾಂಡಲ್ ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಬಾಹುಬಲಿ ಸರಣಿ ಮೂಲಕ ಸಂಚಲನ ಸೃಷ್ಟಿಸಿದ್ದ ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಜೊತೆಯಲ್ಲಿ ಚಿತ್ರ ಮಾಡುತ್ತಾರೆ ಎನ್ನುವ ಸುದ್ದಿ ಬಂದಾಗಿನಿಂದ ಪ್ರೇಕ್ಷಕರಲ್ಲಿ ಕುತೂಹಲ ಮನೆ ಮಾಡಿತ್ತು.
ಹೀಗೆ ಆರಂಭದಲ್ಲೇ ನಿರೀಕ್ಷೆ ಮೂಡಿಸಿದ್ದ ‘ಸಲಾರ್’ ಚಿತ್ರ ಎರಡು ಭಾಗಗಳಲ್ಲಿ ತೆರೆ ಕಾಣಲಿರುವುದು ಖಚಿತವಾಗಿದೆ. ಸೆಪ್ಟೆಂಬರ್ 28ರಂದು ತೆರೆಕಾಣಬೇಕಿದ್ದ ಮೊದಲ ಭಾಗ ಮುಂದೂಡಲ್ಪಟ್ಟಿದೆ. ಇದೀಗ ಚಿತ್ರದ ಒಟಿಟಿ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ ಎನ್ನುವ ಸುದ್ದಿ ಹರಡಿದೆ.
ಅಧಿಕೃತ ಹೇಳಿಕೆ
ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತಿತರರು ಮುಖ್ಯ ಪಾತ್ರದಲ್ಲಿರುವ ‘ಸಲಾರ್’ ಚಿತ್ರದ ಮೊದಲ ಭಾಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಇನ್ನೂ ಮುಗಿಯದ ಕಾರಣ ಸೆಪ್ಟೆಂಬರ್ 28ರಂದು ತೆರೆ ಕಾಣುತ್ತಿಲ್ಲ. ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸುತ್ತೇವೆ ಎಂದು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಘೋಷಿಸಿದೆ.
ಒಟಿಟಿ ಹಕ್ಕು ಮಾರಾಟ?
ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗುವ ಮೊದಲೇ ಒಟಿಟಿ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ ಎನ್ನುವ ಗಾಳಿಸುದ್ದಿ ಹರಡಿದೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪೈಕಿ ಒಂದಾಗಿರುವ ಇದು ಈಗಾಗಲೇ 350 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ಸ್ಯಾಟಲೈಟ್ ಹಕ್ಕು, ಡಿಜಿಟಲ್ ಮತ್ತು ಆಡಿಯೋ ಹಕ್ಕು ಮತ್ತಿತರ ಕಾರಣಗಳಿಂದ ಕೋಟಿಗಟ್ಟಲೆ ಹಣ ಬಾಚಿದೆ ಎನ್ನಲಾಗಿದೆ.
ಒಟಿಟಿ ಹಕ್ಕು ಯಾರಿಗೆ?
ಶಾರುಖ್ ಖಾನ್-ನಯನತಾರಾ ಅಭಿನಯದ ‘ಜವಾನ್’ ಚಿತ್ರದ ಒಟಿಟಿ ಹಕ್ಕು ಖರೀದಿಸಿದ ನೆಟ್ ಫ್ಲಿಕ್ಸ್ ಸಂಸ್ಥೆ ‘ಸಲಾರ್’ ಸಿನಿಮಾದ ಹಕ್ಕನ್ನೂ ಪಡೆದಿದೆ ಎನ್ನಲಾಗಿದೆ. ಬರೋಬ್ಬರಿ 170-200 ಕೋಟಿ ರೂ. ನೀಡಿ ನೆಟ್ ಫ್ಲಿಕ್ಸ್ ಒಟಿಟಿ ರೈಟ್ಸ್ ಖರೀದಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಅದೇ ರೀತಿ ‘ಸಲಾರ್’ ಚಿತ್ರದ ಸ್ಯಾಟಲೈಟ್ ಹಕ್ಕನ್ನು ದಾಖಲೆಯ ಮೊತ್ತಕ್ಕೆ ಸ್ಟಾರ್ ಟಿವಿ ಖರೀದಿಸಿದೆ. ಚಿತ್ರ ತೆರೆ ಕಾಣಲಿರುವ ತೆಲುಗು, ಕನ್ನಡ, ತಮಿಳು, ಮಲೆಯಾಳಂ ಮತ್ತು ಹಿಂದಿ-ಹೀಗೆ 5 ಭಾಷೆಗಳ ಹಕ್ಕನ್ನೂ ಸ್ಟಾರ್ ಟಿವಿ ತನ್ನದಾಗಿಸಿಕೊಂಡಿದೆ ಎನ್ನಲಾಗಿದೆ.