ನ್ಯೂಸ್ ಆ್ಯರೋ : ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಸರ್ಕಾರಿ ಸೇವೆಯಲ್ಲಿ ದುಡಿಯುವ ಕಿರಿಯರ ಮೇಲೆ ಹಿರಿಯರ ದರ್ಪ, ದೌರ್ಜನ್ಯ ಸಾಮಾನ್ಯವಾಗಿದ್ದರೂ ಲಂಚದ ಬೇಡಿಕೆ ಬಲು ಅಪರೂಪ. ಆದರೆ ಇಲ್ಲೊಬ್ಬ ಖತರ್ನಾಕ್ ಅಧಿಕಾರಿಯೊಬ್ಬ ತನಗಿಂತ ಕಿರಿಯ ಅಧಿಕಾರಿಗಳಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಕಿರಿಯ ಪೊಲೀಸ್ ಅಧಿಕಾರಿಗಳಿಂದ ಲಂಚ ಸ್ವೀಕರಿಸುತ್ತಿದ್ದ ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ಪಡೆಯ ಇನ್ಸ್ ಪೆಕ್ಟ
Mangalore : ನಾಪತ್ತೆಯಾಗಿದ್ದ ಹಿಂದೂ ಯುವತಿಯನ್ನು ರೌಡಿಶೀಟರ್ ಜೊತೆ ಪತ್ತೆಹಚ್ಚಿದ ಪೋಲಿಸರು – ಲವ್ ಜಿಹಾದ್ ವಿರುದ್ಧ ಗುಡುಗಿದ ಶರಣ್ ಪಂಪ್ ವೆಲ್
ನ್ಯೂಸ್ ಆ್ಯರೋ : ಮೂಲತಃ ಕೇರಳ ಮೂಲದ ಮಂಗಳೂರಿನಲ್ಲಿ ವಿದ್ಯಾಭ್ಯಾಸದ ಕಾರಣಕ್ಕಾಗಿ ವಾಸ್ತವ್ಯವಿದ್ದು ಬಳಿಕ ನಾಪತ್ತೆಯಾಗಿದ್ದ ಹಿಂದೂ ಯುವತಿಯನ್ನು ನಟೋರಿಯಸ್ ಮುಸ್ಲಿಂ ಯುವಕನ ಜೊತೆ ಪಾಂಡೇಶ್ವರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಾಸರಗೋಡಿನ ಮೂಲದ ದಂಪತಿಗಳ ಮಗಳಾದ 20 ವರ್ಷದ ಯುವತಿ ಪಾಂಡೇಶ್ವರದ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಉಳ್ಳಾಲದ ಸಂಬಂಧಿ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತಿದ್ದಳು ಎನ್ನಲಾಗಿ
Mangalore : ಇತಿಹಾಸ ಪ್ರಸಿದ್ಧ ಕದ್ರಿ ದೇಗುಲದಲ್ಲಿ ಯುವಕನ ಹುಚ್ಚಾಟ – ಅಣ್ಣಪ್ಪ ದೈವದ ಗುಡಿಯ ಬಾಗಿಲಿಗೆ ಒದ್ದು ಕಡ್ತಲೆ ಹಿಡಿದು ನಿಂತ..!!
ನ್ಯೂಸ್ ಆ್ಯರೋ : ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀಮಂಜುನಾಥ ದೇವಾಲಯದಲ್ಲಿ ಇಂದು ಬೆಳಗ್ಗೆ ಯುವಕನೊಬ್ಬ ದಾಂಧಲೆ ನಡೆಸಿದ್ದಲ್ಲದೆ, ಅಣ್ಣಪ್ಪ ದೈವದ ಕಡ್ತಲೆ ಹಿಡಿದು ಹುಚ್ಚಾಟ ನಡೆಸಿದ್ದು ಪ್ರಾತಃಕಾಲದ ಪೂಜೆಗೆ ಭಂಗ ಎಸಗಿದ್ದಾನೆ. ಮೊದಲಿಗೆ ಈತ ಬೈಕ್ ಚಲಾಯಿಸಿಕೊಂಡು ನೇರವಾಗಿ ಕದ್ರಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ್ದಾನೆ. ಬಳಿಕ ಅಣ್ಣಪ್ಪ ಸ್ವಾಮಿಯ ಗುಡಿಯ ಮುಂದೆ ಹೋಗಿ ಕಾಲಿನಿಂದ ಬಾಗಿಲು ಒದ್ದು ಅಪಚಾರ ಮಾಡಿದ್ದಾನೆ.
Mangalore : ಉರ್ವಾಸ್ಟೋರ್ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಕದ್ದು ಮನೆ ಮಾಲಿಕನ ಕಾರಿನಲ್ಲೇ ಪರಾರಿ – ಮೂಲ್ಕಿಯಲ್ಲಿ ಕಾರ್, ಮೊಬೈಲ್ ಪತ್ತೆ ; ಹಲ್ಲೆಯಿಂದ ಗಾಯಗೊಂಡವರು ಆಸ್ಪತ್ರೆಗೆ ದಾಖಲು
ನ್ಯೂಸ್ ಆ್ಯರೋ : ಮಂಗಳೂರಿನಲ್ಲಿ ಮಂಗಳವಾರ (ಇಂದು) ಮುಂಜಾನೆ ಮತ್ತೊಂದು ದರೋಡೆ ಪ್ರಕರಣ ನಡೆದಿದೆ. ಮಂಗಳೂರಿನ ಉರ್ವಸ್ಟೋರ್ ಕೋಟೆಕಣಿ ಒಂದನೇ ಕ್ರಾಸ್ ನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಇಬ್ಬರಿಗೆ ಹಲ್ಲೆಗೈದು ಚಿನ್ನಾಭರಣ ಕಳವುಗೈದು ಮನೆ ಮಾಲಿಕನ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಮಂಗಳವಾರ ಮುಂಜಾನೆ 3.30 ರ ಸುಮಾರಿಗೆ ನಾಲ್ಕು ಮಂದಿ ದರೋಡೆಕೋರರ ತಂಡವೊಂದು ಉರ್ವ ಕೋಟೆಕಣಿಯ ಬಳಿ ಇರುವ ಮನೆಗೆ ಪ್ರವೇಶಿಸಿದ್ದು ಈ ಮನೆಯಲ್ಲಿ ಹಿರ
Mangalore : ಸೊಳ್ಳೆ ಲಾರ್ವಾ ಉತ್ಪಾದನೆ ಕಂಡು ಬಂದರೆ ಕಟ್ಟಡ ಮಾಲಿಕರಿಗೆ 15 ಸಾವಿರ ದಂಡ – ಲಸಿಕೆಯಿಂದ ಮಾತ್ರ ದಢರಾ, ರುಬೆಲ್ಲಾ ರೋಗದ ನಿರ್ಮೂಲನೆ ಸಾಧ್ಯ – : ಮ.ನ.ಪಾ ಆಯಕ್ತ ಆನಂದ್ ಸಿ.ಎಲ್
ನ್ಯೂಸ್ ಆ್ಯರೋ : ದಢರಾ ಮತ್ತು ರುಬೆಲ್ಲಾ ರೋಗದ ನಿಯಂತ್ರಣವೂ ಸಮರ್ಪಕವಾದ ಲಸಿಕಾಕರಣದಿಂದ ಮಾತ್ರ ಸಾಧ್ಯ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಸಿ.ಎಲ್. ಆನಂದ್ ಹೇಳಿದರು. ಅವರು ಸೋಮವಾರ ನಗರದ ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪೂರ್ವ ತಯಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಕ್ಕಳಿಗೆ ನೀಡುವ ಲಸಿಕಾಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ