Mangalore : ನಾಪತ್ತೆಯಾಗಿದ್ದ ಹಿಂದೂ ಯುವತಿಯನ್ನು ರೌಡಿಶೀಟರ್ ಜೊತೆ ಪತ್ತೆಹಚ್ಚಿದ ಪೋಲಿಸರು – ಲವ್ ಜಿಹಾದ್ ವಿರುದ್ಧ ಗುಡುಗಿದ ಶರಣ್ ಪಂಪ್ ವೆಲ್

ನ್ಯೂಸ್ ಆ್ಯರೋ : ಮೂಲತಃ ಕೇರಳ ಮೂಲದ ಮಂಗಳೂರಿನಲ್ಲಿ ವಿದ್ಯಾಭ್ಯಾಸದ ಕಾರಣಕ್ಕಾಗಿ ವಾಸ್ತವ್ಯವಿದ್ದು ಬಳಿಕ ನಾಪತ್ತೆಯಾಗಿದ್ದ ಹಿಂದೂ ಯುವತಿಯನ್ನು ನಟೋರಿಯಸ್ ಮುಸ್ಲಿಂ ಯುವಕನ ಜೊತೆ ಪಾಂಡೇಶ್ವರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಾಸರಗೋಡಿನ ಮೂಲದ ದಂಪತಿಗಳ ಮಗಳಾದ 20 ವರ್ಷದ ಯುವತಿ ಪಾಂಡೇಶ್ವರದ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಉಳ್ಳಾಲದ ಸಂಬಂಧಿ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತಿದ್ದಳು ಎನ್ನಲಾಗಿದೆ.
ಇದರ ನಡುವೆ ಯುವತಿಗೆ ನಟೋರಿಯಸ್ ಮಹಮ್ಮದ್ ಅಶ್ಪಕ್ ಎಂಬಾತನ ಪರಿಚಯವಾಗಿದ್ದು, ಬಳಿಕ ಆಕೆಯನ್ನು ಆರೋಪಿಯು ಕಿಡ್ನ್ಯಾಪ್ ಮಾಡಿದ್ದಲ್ಲದೇ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಆರೋಪಿ ಅಶ್ಪಾಕ್ ನಿಗೆ ಈಗಾಗಲೇ ಒಂದು ಮದುವೆಯಾಗಿದ್ದು ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ ಇವನ ಮೇಲೆ 8 ಕ್ರಿಮಿನಲ್ ಕೇಸು ಇದೆ. ಮಂಗಳೂರಿನ ಕಾಲೇಜಿನಲ್ಲಿ ಕಲಿಯುತ್ತಿದ್ದ ನನ್ನ ಮಗಳನ್ನು ಅಪಹರಣ ಮಾಡಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆಂದು ಹುಡುಗಿಯ ತಂದೆ ಮಂಗಳೂರು ಪೊಲೀಸ್ ಕಮೀಷನರ್ ರವರಿಗೆ ದೂರು ಕೊಟ್ಟಿದ್ದು ಇದೀಗ ಪೋಲಿಸರು ಯುವತಿಯ ಸಹಿತ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಇದೀಗ ಪತ್ತೆ ಹಚ್ಚಿದ ಯುವತಿಯನ್ನು ಮಂಗಳೂರು ಹೊರವಲಯದ ಮುಡಿಪುವಿನ ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಇರಿಸಲಾಗಿದ್ದು, ಕೌನ್ಸೆಲಿಂಗ್ ವ್ಯವಸ್ಥೆ ಮಾಡಲಾಗಿದೆ.

ಲವ್ ಜಿಹಾದ್ ವಿರುದ್ಧ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ – ಶರಣ್ ಪಂಪ್ ವೆಲ್
ಕರಾವಳಿಯಲ್ಲಿ ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿದ್ದು, ಪ್ರೀತಿ ಮದುವೆ ಹೆಸರಲ್ಲಿ ಹಿಂದೂ ಯುವತಿಯರ ಮತಾಂತರ ನಡೆಯುತ್ತಿದೆ. ಲವ್ ಜಿಹಾದ್ ಗೆ ಕಡಿವಾಣ ಹಾಕಲು ಪ್ರಬಲ ಕಾನೂನು ದೇಶದಲ್ಲಿ ಬರಬೇಕಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಗುಡುಗಿದ್ದಾರೆ.
Leave a Comment