
ಬಾಡಿಗೆ ಕಟ್ಟಲು ಸಾಧ್ಯವಾಗದೆ ಮನೆಯಲ್ಲೇ ಕಚೇರಿ ಮಾಡಿದವ ಇಂದು ಅಂಬಾನಿ, ಟಾಟಾಗೆ ಸ್ಪರ್ಧಿ – ₹10ಸಾವಿರದಲ್ಲಿ ಬಿಸಿನೆಸ್ ಆರಂಭಿಸಿದ ವ್ಯಕ್ತಿ ಇದೀಗ 500 ಕೋಟಿಯ ಒಡೆಯ
- ವಾಣಿಜ್ಯ ಸುದ್ದಿ
- October 25, 2023
- No Comment
- 86
ನ್ಯೂಸ್ ಆ್ಯರೋ : ವಿಶ್ವದ ಶ್ರೀಮಂತ ಉದ್ಯಮಿಗಳೆಲ್ಲ ಏಕಕಾಲದಲ್ಲೇ ಕೋಟ್ಯಾಧಿಪತಿಗಳಾದವರಲ್ಲ. ಅವರ ಹಿಂದೆ ವ್ಯವಹಾರದ ಸೋಲು, ಆರ್ಥಿಕ ಸಂಕಷ್ಟ ಹೀಗೇ ಅನೇಕ ಸಮಸ್ಯೆಗಳನ್ನು ಎದುರಿಸಿ ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮುತ್ತಾರೆ. ಅನೇಕ ಸೋಲು, ನೋವನ್ನು ಅನುಭವಿಸಿದ ವ್ಯಕ್ತಿ ಇಂದು ಅಂಬಾನಿ, ರತನ್ ಟಾಟಾಗೆ ಸ್ಪರ್ಧಿಯಾಗಿರುವುದು ಅಚ್ಚರಿ.
ಮುಫ್ತಿ, ಭಾರತ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಆಗಿದೆ. ಅತ್ಯುತ್ತಮ ಪುರುಷರ ಉಡುಪುಗಳನ್ನು ತಯಾರಿಸುವುದಕ್ಕೆ ಹೆಸರುವಾಸಿಯಾಗಿದೆ. 2022-23ರ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯ ಸುಮಾರು ₹500 ಕೋಟಿ ಆಗಿತ್ತು. ಆದರೆ ಈ ಬ್ರ್ಯಾಂಡ್ ಅನ್ನು ಆರಂಭಿಸುವಾಗ ಇದರ ಸಂಸ್ಥಾಪಕ ತನ್ನ ಸಂಬಂಧಿಕರಿಂದ ₹10 ಸಾವಿರ ಸಾಲ ಪಡೆದು ಆರಂಭಿಸಿದ್ದರು.
ಮುಫ್ತಿ, ಸಂಸ್ಥಾಪಕ ಕಮಲ್ ಖುಷ್ಲಾನಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. 19ನೇ ವರ್ಷದಲ್ಲಿದ್ದಾಗ ಅಪ್ಪನನ್ನು ಕಳೆದುಕೊಂಡ ಖುಷ್ಲಾನಿ ಅವರು ತನ್ನ ಕುಟುಂಬಕ್ಕಾಗಿ ಕ್ಯಾಸೆಟ್ ಕಂಪೆನಿಯಲ್ಲಿ ಕೆಲಸ ಮಾಡಲು ಶುರು ಮಾಡಿದರು. ಆದರೆ ಫ್ಯಾಶನ್ ಬ್ರ್ಯಾಂಡ್ ರೂಪಿಸುವುದು ಅವರ ಕನಸಾಗಿದ್ದರಿಂದ ಕಠಿಣ ಶ್ರಮದಿಂದ ಇಂದು ಯಶಸ್ವಿ ಉದ್ಯಮಿಯಾಗಿದ್ದಾರೆ.
ಮುಫ್ತಿ ಈಗ 379 ವಿಶೇಷ ಬ್ರಾಂಡ್ ಸ್ಟೋರ್‌ಗಳು, 89 ದೊಡ್ಡ ಫಾರ್ಮ್ಯಾಟ್ ಸ್ಟೋರ್‌ಗಳು ಮತ್ತು 1305 ಮಲ್ಟಿ-ಬ್ರಾಂಡ್ ಔಟ್‌ಲೆಟ್‌ಗಳನ್ನು ದೇಶಾದ್ಯಂತ ಹೊಂದಿದೆ. ಮುಫ್ತಿಯ ಉತ್ಪನ್ನಗಳಲ್ಲಿ ಶರ್ಟ್‌ಗಳು, ಜೀನ್ಸ್, ಪ್ಯಾಂಟ್, ಟೀ ಶರ್ಟ್‌ಗಳು, ಶಾರ್ಟ್ಸ್, ಬ್ಲೇಜರ್‌ಗಳು ಮತ್ತು ಚಳಿಗಾಲದ ಉಡುಪು/ಔಟರ್‌ವೇರ್ ಹಾಗೂ ಪಾದರಕ್ಷೆಗಳು ಸೇರಿವೆ. 2022-23ನೇ ಹಣಕಾಸು ವರ್ಷದಲ್ಲಿ ಕಂಪನಿಯ ಆದಾಯ 498.18 ಕೋಟಿ ರೂ. ಆಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 341.17 ಕೋಟಿ ರೂ. ಗಳಿಸಿದೆ.
1992ರಲ್ಲಿ, ಕಮಲ್ ಖುಶ್ಲಾನಿ ಪುರುಷರ ಶರ್ಟ್‌ಗಳಿಗಾಗಿ Mr & Mr ಹೆಸರಿನ ಉತ್ಪಾದನಾ ಕಂಪನಿಯನ್ನು ತೆರೆದರು. ಈ ಕಂಪನಿ ಸ್ಥಾಪಿಸಲು ಚಿಕ್ಕಮ್ಮನಿಂದ ₹10,000 ಪಡೆದಿದ್ದರು. ಕಚೇರಿ ಬಾಡಿಗೆ ಕಟ್ಟಲು ಕಮಲ್ ಬಳಿ ಹಣವಿಲ್ಲದ ಕಾರಣ ತನ್ನ ಮನೆಯನ್ನು ಕಚೇರಿ ಹಾಗೂ ಗೋದಾಮನ್ನಾಗಿ ಮಾಡಿಕೊಂಡಿದ್ದರು.
199ರಲ್ಲಿ ಕಮಲ್ ಖುಶ್ಲಾನಿ, ಮಫ್ತಿ ಎಂಬ ಫ್ಯಾಶನ್ ಬ್ರಾಂಡ್ ಪ್ರಾರಂಭಿಸಿದರು. ಆರಂಭದಲ್ಲಿ ಕಮಲ್ ಅವರ ಬಳಿ ಒಂದು ಬೈಕು ಇತ್ತು, ಅದರಲ್ಲಿ ಅವರು ಹಲವಾರು ಕೆಜಿ ಬಟ್ಟೆಯನ್ನು ತುಂಬಿಕೊಂಡು ವರ್ಕ್‌ಶಾಪ್‌ಗೆ ತೆಗೆದುಕೊಂಡು ಹೋಗುತ್ತಿದ್ದರು.
ಬಟ್ಟೆ ತಯಾರಿಸುವಾಗ ಅದೇ ಬೈಕ್ ನಲ್ಲಿ ತುಂಬಿಕೊಂಡು ಮಾರಾಟ ಮಾಡಲು ಹೋಗುತ್ತಿದ್ದರು. ಕಮಲ್ ತನ್ನ ಬೈಕ್‌ನಲ್ಲಿ ಸೂಟ್‌ಕೇಸ್‌ನಲ್ಲಿ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. 2000ದ ನಂತರ ಜನರು ಮುಫ್ತಿ ಜೀನ್ಸ್ ಖರೀದಿಸಲು ಆರಂಭಿಸಿದಾಗ ಮುಫ್ತಿ ಜನಪ್ರಿಯವಾಯಿತು. ಮುಫ್ತಿ ಭಾರತದಲ್ಲಿ ಸ್ಟ್ರೆಚ್ಡ್ ಜೀನ್ಸ್ ತಯಾರಿಸಲು ಪ್ರಾರಂಭಿಸಿದ ಮೊದಲ ಬ್ರಾಂಡ್ ಆಗಿದೆ.
ಮುಫ್ತಿ ಬ್ರ್ಯಾಂಡ್ ಈಗ ಮುಕೇಶ್ ಅಂಬಾನಿಯವರ ರಿಲಯನ್ಸ್ ರೀಟೇಲ್ ಮತ್ತು ರತನ್ ಟಾಟಾ ಅವರ ವೆಸ್ಟ್‌ಸೈಡ್ ಸೇರಿದಂತೆ ಹಲವಾರು ಬ್ರಾಂಡ್‌ಗಳು ಮತ್ತು ವ್ಯಾಪಾರ ಸಂಸ್ಥೆಗಳೊಂದಿಗೆ ಸ್ಪರ್ಧಿಸುತ್ತಿದೆ. ಇದು ಇತರ ವಸ್ತುಗಳ ಜೊತೆಗೆ ಬಟ್ಟೆ ಮತ್ತು ಪಾದರಕ್ಷೆಗಳನ್ನು ಸಹ ಯಶಸ್ವಿಯಾಗಿ ಮಾರಾಟ ಮಾಡ್ತಿದೆ. ಕಠಿಣ ಶ್ರಮ ಹಾಗೂ ಗುರಿಯಿದ್ದರೆ ಏನನ್ನು ಸಾಧಿಸಬಹುದು ಎಂಬುದಕ್ಕೆ ಕುಶ್ಲಾನಿ ಅವರು ಉದಾಹರಣೆ.