
ಉಜಾಲಾದಿಂದ ಉಜ್ವಲ ಸಾಮ್ರಾಜ್ಯ ಕಟ್ಟಿದ ಕೇರಳದ ಉದ್ಯಮಿ – ಸಾಲ ಪಡೆದ 5 ಸಾವಿರದಿಂದ 14 ಕೋಟಿಯ ಒಡೆಯನಾದ ರಾಮಚಂದ್ರನ್ ಸ್ಟೋರಿ ಓದಿ..
- ವಾಣಿಜ್ಯ ಸುದ್ದಿ
- October 25, 2023
- No Comment
- 56
ನ್ಯೂಸ್ ಆ್ಯರೋ : ಬಹುಶಃ ನಮಗೆಲ್ಲ ಪಂಜನ್ ರಾಮಚಂದ್ರನ್ ಎನ್ನುವ ಹೆಸರು ಅಷ್ಟೊಂದು ಪರಿಚಯ ಇಲ್ಲದಿರಬಹುದು. ಆದರೆ ಬಿಳಿ ಬಟ್ಟೆಗೆ ಇನ್ನಷ್ಟು ಹೊಳಪನ್ನು ನೀಡುವ ಉಜಾಲಾ ಬ್ಲೂ ಅಂದರೆ ನೀಲಿ ಬಣ್ಣ ಪುಟ್ಟ ಬಾಟಲಿ ಅಂತ ಹೇಳಿದ್ರೆ ಥಟ್ಟನೇ ನೆನಪಾಗುತ್ತದೆ. ಇದರ ಒಡೆಯನೇ ಮೂತೇದತ್ ಪಂಜನ್ ರಾಮಚಂದ್ರನ್ ಅವರು.
ಇವರು ಕೇರಳದ ತ್ರಿಶೂರ್‌ನ ಭಾರತೀಯ ಖ್ಯಾತ ಉದ್ಯಮಿ. ₹5000ರಲ್ಲಿ ಆರಂಭಿಸಿದ ಇವರ ಬಿಸಿನೆಸ್ ಇಂದು 14 ಸಾವಿರ ಕೋಟಿ ಮೌಲ್ಯದ ಕಂಪೆನಿಯಾಗಿ ಹೆಮ್ಮರವಾಗಿ ಬೆಳೆದಿದೆ. ಇವರು ಜ್ಯೋತಿ ಲ್ಯಾಬ್ಸ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಇದಲ್ಲದೇ ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ನ ಹಲವು ಉತ್ಪನ್ನಗಳು ಜನಪ್ರಿಯವಾಗಿದೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಲಕ್ಷಾಂತರ ಯುವ ಉದ್ಯಮಿಗಳಿಗೆ ಉದಾಹರಣೆ
ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ಹುಟ್ಟು ಹಾಕಿದ ರಾಮಚಂದ್ರನ್ ಲಕ್ಷಾಂತರ ಯುವ ಉದ್ಯಮಿಗಳಿಗೆ ಉದಾಹರಣೆಯಾಗಿದ್ದಾರೆ. ಎಂ ಪಿ ರಾಮಚಂದ್ರನ್ ಅವರು ಕೇವಲ ₹5000 ಸಾಲ ಪಡೆದು ವ್ಯವಹಾರ ಪ್ರಾರಂಭಿಸಿ, ತಮ್ಮ ಕಠಿಣ ಪರಿಶ್ರಮ ಮತ್ತು ತೀಕ್ಷ್ಣವಾದ ವ್ಯವಹಾರದ ಚಾತುರ್ಯದಿಂದ ಇಂದು ಬಹುಕೋಟಿ ಕಂಪನಿಯನ್ನು ನಿರ್ಮಿಸುವಲ್ಲಿ ಯಶಸ್ವಿ ಉದ್ಯಮಿಯಾಗಿದ್ದಾರೆ.
ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ಇಂದು ಉಜಾಲಾ ಲಿಕ್ವಿಡ್ ಕ್ಲೋತ್ ವೈಟ್‌ನರ್ ಮತ್ತು ಮ್ಯಾಕ್ಸೋ ಸೊಳ್ಳೆ ನಿವಾರಕ ಲಿಕ್ವಿಡ್, ಎಕ್ಸೋ, ಟಿ-ಶೈನ್ ಹೀಗೆ ಹತ್ತು ಹಲವು ಉತ್ಪನಗಳನ್ನು ಉತ್ಪದಿಸುತ್ತಿದ್ದು, ಅಂದು ತಮ್ಮ ಸ್ವಂತ ತಾತ್ಕಾಲಿಕ ಕಾರ್ಖಾನೆಯನ್ನು ಸ್ಥಾಪಿಸಲು ರಾಮಚಂದ್ರನ್ ಅವರು ತನ್ನ ಸಹೋದರನಿಂದ ₹.5000 ಸಾಲವನ್ನು ಪಡೆದು, ಇಂದು ಅದನ್ನು 13,583 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಕಂಪನಿಯನ್ನಾಗಿ ಪರಿವರ್ತಿಸಿದ್ದಾರೆ.
ಬಡ ಕುಟುಂಬದಲ್ಲಿ ಹುಟ್ಟಿದ ರಾಮಚಂದ್ರನ್ ಅವರು ತ್ರಿಶೂರ್‌ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ತಮ್ಮ ಬಿ.ಕಾಂ ಪದವಿ ಪಡೆದುಕೊಂಡರು. ಆರ್ಥಿಕ ಸಮಸ್ಯೆಯಿಂದ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿ ಅಕೌಂಟೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಕೆಲ ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರೂ ಆ ಸಂಸ್ಥೆ ಸ್ಥಗಿತಗೊಂಡ ಕಾರಣ ಹೊಸ ಉದ್ಯೋಗವನ್ನು ಹುಡುಕುವ ಬದಲು ಹೊಸದಾಗಿರುವ ಮತ್ತು ಸ್ವಂತವಾಗಿರುವ ವ್ಯಾಪಾರ ಪ್ರಾರಂಭಿಸಬೇಕು ಅಂದುಕೊಂಡರು. ರಾಮಚಂದ್ರನ್ ಬಟ್ಟೆಗಾಗಿ ವೈಟ್ನರ್ ತಯಾರಿ ಮಾಡಲು ನಿರ್ಧರಿಸಿ ಇದಕ್ಕಾಗಿ ಅವರು ತಮ್ಮ ಅಡುಗೆಮನೆಯಲ್ಲಿ ಪ್ರಯೋಗವನ್ನು ಪ್ರಾರಂಭಿಸಿದರು, ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ.
ಹೀಗಿರುವ ಒಂದು ದಿನ ರಾಮಚಂದ್ರನ್ ಅವರು ಕೆಮಿಕಲ್ ಇಂಡಸ್ಟ್ರಿ ಮ್ಯಾಗಜೀನ್ ಓದುತ್ತಿರುವಾಗ, ಅದರಲ್ಲಿ ಪರ್ಪಲ್ ಡೈ ಯಿಂದ ಜವಳಿ ತಯಾರಕರು ಸಾಧ್ಯವಾದಷ್ಟು ಬಿಳಿ ಮತ್ತು ಬ್ರೈಟ್ ಕಲರ್ ಪಡೆಯಬಹುದು ಎಂದು ಬರೆದಿತ್ತು. ಇದಾದ ನಂತರ, ರಾಮಚಂದ್ರನ್ ಒಂದು ವರ್ಷ ನೇರಳೆ ಬಣ್ಣಗಳ ಪ್ರಯೋಗವನ್ನು ಮುಂದುವರೆಸಿದರು.
ಹೊಸ ಬದುಕು ಕೊಟ್ಟ ಉಜಾಲಾ:
1983ರಲ್ಲಿ ಪ್ರಾರಂಭವಾದ ಉಜಾಲಾವು ರಾಮಚಂದ್ರನ್ ಅವರ ಜೀವನವನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ಅದೇ ವರ್ಷ ರಾಮಚಂದ್ರನ್ ಅವರು ಕೇರಳದ ತ್ರಿಶೂರ್‌ನಲ್ಲಿ ತಮ್ಮ ಕುಟುಂಬದ ಜಮೀನಿನ ಸ್ವಲ್ಪ ಭಾಗದಲ್ಲಿ ತಾತ್ಕಾಲಿಕ ಕಾರ್ಖಾನೆಯೊಂದು ಸ್ಥಾಪಿಸಿದರು. ತಮ್ಮ ಕಂಪನಿಗೆ ಜ್ಯೋತಿ ಲ್ಯಾಬೋರೇಟರೀಸ್ ಎಂದು ತಮ್ಮ ಮಗಳ ಹೆಸರಿಟ್ಟರು. ಮಹಿಳೆಯರ ಮೂಲಕ ಮನೆ ಮನೆಯಿಂದ ಮಾರಾಟ ಶುರುವಾದ ಉಜಾಲಾಗೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಅಂಗಡಿಗಳಲ್ಲಿ ಸ್ವೀಕರಿಸಲು ಶುರುವಾಯಿತು. ಇದೀಗ ದೈತ್ಯಕಾರವಾಗಿ ಬೆಳೆದಿರುವುದು ಇತಿಹಾಸನೇ ಅಂತಾ ಹೇಳಬಹುದು.