ಉದ್ಯೋಗ ಎಂಬುದು ಗ್ಯಾರಂಟಿ ಅಲ್ಲ, ಸ್ವಂತ ಉದ್ದಿಮೆಗಳನ್ನು ಆರಂಭಿಸಿ – ಯುವ ಜನತೆಗೆ ಮೈಕ್ರೋಸಾಫ್ಟ್ ಭಾರತದ ಮಾಜಿ ಅಧ್ಯಕ್ಷ ರವಿ ವೆಂಕಟೇಶನ್ ಕರೆ

ಉದ್ಯೋಗ ಎಂಬುದು ಗ್ಯಾರಂಟಿ ಅಲ್ಲ, ಸ್ವಂತ ಉದ್ದಿಮೆಗಳನ್ನು ಆರಂಭಿಸಿ – ಯುವ ಜನತೆಗೆ ಮೈಕ್ರೋಸಾಫ್ಟ್ ಭಾರತದ ಮಾಜಿ ಅಧ್ಯಕ್ಷ ರವಿ ವೆಂಕಟೇಶನ್ ಕರೆ

ನ್ಯೂಸ್ ಆ್ಯರೋ : ಕೊರೊನಾ ಬಳಿಕ ವಿಶ್ವದಾದ್ಯಂತ ಪ್ರತಿಷ್ಟಿತ ಕಂಪೆನಿಗಳು ಕೂಡ ಲೇ ಆಫ್ ನಡೆಸುತ್ತಿರುವುದು ಗೊತ್ತಿರುವ ಸಂಗತಿ. ಇವತ್ತು ಗ್ಯಾರಂಟಿ ಎಂದು ಸೇರಿದ್ದ ಕೆಲಸ 6 ತಿಂಗಳೊಳಗೆ ಕೈತಪ್ಪಿ ಹೋಗುವ ಭೀತಿ ಇಂದಿನ ಯುವ ಪೀಳಿಗೆಯಲ್ಲಿದೆ. ಲಕ್ಷಾಂತರ ಜನರು ಎರಡು ವರ್ಷದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಅಮೇಜಾನ್, ಇಂಟೆಲ್, ಗೂಗಲ್ ಇತ್ಯಾದಿ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಇನ್ನೂ ಸಣ್ಣ ಕೈಗಾರಿಕೆಗಳಲ್ಲಿ ಲೇ ಆಫ್ ಆಗಿರುವುದು ಲೆಕ್ಕಕ್ಕೆ ಇಲ್ಲದಷ್ಟಿದೆ.

ಈ ಬಗ್ಗೆ ಮೈಕ್ರೋಸಾಫ್ಟ್​ನ ಭಾರತ ವಿಭಾಗದ ಮಾಜಿ ಅಧ್ಯಕ್ಷ ರವಿ ವೆಂಕಟೇಶನ್ ಅವರು ಸಂದರ್ಶನವೊಂದರಲ್ಲಿ ಯುವ ಪೀಳಿಗೆಗೆ ಸಲಹೆಯನ್ನು ನೀಡಿದ್ದಾರೆ. ಅದಲ್ಲದೆ ಸಮೂಹ ಉದ್ಯಮಶೀಲತೆಯ ಮಹತ್ವದ ಬಗ್ಗೆ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.

ಇವತ್ತಿನ ಕಾಲಘಟ್ಟದಲ್ಲಿ ಉದ್ಯೋಗ ಮಾಡುವುದು ಅಪಾಯವಾಗಿದ್ದು, ಯುವಕರು ಉದ್ಯೋಗದ ಹಾದಿಯನ್ನು ಬಿಟ್ಟು, ಸ್ವಂತ ಉದ್ಯಮವನ್ನು ಶುರು ಮಾಡಬೇಕೆಂದರು.

ರವಿ ವೆಂಕಟೇಶನ್ ಅವರು 2018ರಿಂದ ಗೇಮ್ ಎನ್ನುವ ಜಾಗತಿಕ ಸಮೂಹ ಉದ್ಯಮಶೀಲತೆ ಕೂಟ ಯೋಜನೆ ಹಮ್ಮಿಕೊಂಡಿದ್ದಾರೆ. 2030ರಷ್ಟರಲ್ಲಿ ಭಾರತದಲ್ಲಿ 5 ಕೋಟಿ ಹೊಸ ಉದ್ಯೋಗಗಳು ಮತ್ತು 1 ಕೋಟಿ ಮಾಸ್ ಅಂಟ್ರಪ್ರನಿಯೂರ್​​ಗಳನ್ನು ಸೃಷ್ಟಿಸುವುದು ಈ ಗೇಮ್ ಉದ್ದೇಶ. ಅದರಲ್ಲಿ ಮಹಿಳಾ ಅಂಟ್ರಪ್ರನಿಯೂರ್​ಗಳು ಶೇ. 50ರಷ್ಟು ಇರಬೇಕೆಂಬುದು ಗೇಮ್ ಗುರಿ.

ನೊಬೆಲ್ ವಿಜೇತ ಆರ್ಥಿಕ ತಜ್ಞ ನೆಡ್ ಫೆಲ್ಪ್ಸ್ ಅವರ ಆರ್ಥಿಕತೆಯ ಪರಿಕಲ್ಪನೆಯು ಗೇಮ್​ಗೆ ಸ್ಫೂರ್ತಿಯಂತೆ. ಒಂದು ಸ್ಥಳ ಶಕ್ತಿಯುತ ಎನಿಸಬೇಕಾದರೆ ಸಾಮಾಜಿಕ ಮೌಲ್ಯಗಳು ಬಹಳ ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ನೆಡ್ ಫೆಲ್ಪ್ಸ್ ಅವರ ಅಭಿಪ್ರಾಯ. ಅದರ ಪ್ರಕಾರವಾಗಿ ರವಿ ವೆಂಕಟೇಶನ್ ಅವರ ಗೇಮ್ ಯೋಜನೆ ಕೂಡ ಮೌಲ್ಯ ಕ್ರಾಂತಿ ಸೃಷ್ಟಿಸುವ ಮೂಲಕ ಪ್ರತಿಯೊಬ್ಬರಿಗೂ ಅವರ ಶಕ್ತಿಯ ಅರಿವಾಗಿಸುವ ಉದ್ದೇಶ ಹೊಂದಿದೆ.

ಐಐಟಿ, ಐಐಎಂಗಳಿಂದ ಬಂದವರು ಈ ಮೊದಲೇ ಇದ್ದ ಒಂದು ನೆಟ್‌ವರ್ಕ್​ನ ಭಾಗಗಳಾಗಿರುತ್ತಾರೆ. ಸಣ್ಣ ಪಟ್ಟಣಗಳ ಜನರಿಗೆ ಇರುವ ಜಾತಿ, ಧರ್ಮದ ತಡೆಗೋಡೆ ದೊಡ್ಡ ನಗರವರಿಗೆ ಇರುವುದಿಲ್ಲ ಎಂದು ಹೇಳಿದ ಅವರು, ಉದ್ಯಮಿಶೀಲತೆಗೆ ಲಿಂಗ ತಡೆ ಸಮಸ್ಯೆ ಇರುವುದನ್ನು ವಿವರಿಸುತ್ತಾರೆ. ಅವರ ಪ್ರಕಾರ, ದೊಡ್ಡ ನಗರಗಳಲ್ಲೂ ಒಂದು ಉದ್ದಿಮೆ ಆರಂಭಿಸುವ ವಿಚಾರದಲ್ಲಿ ಗಂಡಸರಿಗಿಂತ ಹೆಂಗಸರಿಗೆ ಹೆಚ್ಚಿನ ಸವಾಲಿನ ಕೆಲಸವಾಗಿರುತ್ತದೆ.

ಸಮೂಹ ಉದ್ಯಮಶೀಲತೆ ಅಥವಾ ಮಾಸ್ ಅಂಟ್ರಪ್ರನ್ಯೂರ್​ಶಿಪ್ ಎಂಬುದು ಪ್ರತಿಯೊಂದು ಸಣ್ಣ ಪಟ್ಟಣ ಮತ್ತು ಜಿಲ್ಲೆಗಳಲ್ಲೂ ಉದ್ಯಮಶೀಲತೆಯನ್ನು ತಲುಪಿಸುವುದಾಗಿದೆ. ಈ ಗೇಮ್‌ನ ಗುರಿ ಏನೆಂದರೆ ಪ್ರಿಂಟ್ ಶಾಪ್, ಹೋಟೆಲ್, ಬ್ಯೂಟಿ ಪಾರ್ಲರ್ ಇತ್ಯಾದಿ ಸಣ್ಣದಾಗಿರುವ ಉದ್ಯಮವನ್ನು ಆರಂಭಿಸುವುದು ಎಂದರು.

ದೊಡ್ಡ ಸಂಸ್ಥೆಗಳು ಆರ್ಥಿಕತೆಗೆ ಮುಖ್ಯವಾದರೂ ಅವುಗಳಿಂದ ಕೆಲವಿಷ್ಟು ದೊಡ್ಡ ಸಂಬಳದ ಕೆಲಸ ಸಿಗಬಹುದು ಮತ್ತು ಷೇರುದಾರರಿಗೆ ಲಾಭ ಕೊಡಬಹುದು ಅಷ್ಟೇ. ಈ ಅಸಮಾನತೆ ನೀತಿಸಿ ವ್ಯಾಪಕ ಸಮೃದ್ಧತೆ ಸೃಷ್ಟಿಸಲು ದೇಶಾದ್ಯಂತ ಸಮೂಹ ಉದ್ಯಮಶೀಲತೆ ಪಸರಿಸಬೇಕು. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ವ್ಯವಹಾರ ಆರಂಭಿಸಲು ಇರುವಂತಹ ಸುಲಭ ವಾತಾವರಣ ಎಲ್ಲೆಡೆ ಇರುವಂತೆ ಮಾಡಬೇಕು ಎಂದು ರವಿ ವೆಂಕಟೇಶನ್ ತಮ್ಮ ಯೋಜನೆ ಬಗ್ಗೆ ವಿವರಿಸಿದರು.

ಭಾರತದಲ್ಲಿ ಎಂಟು ಕೋಟಿಗೂ ಹೆಚ್ಚು ಎಂಎಸ್​ಎಂಇಗಳಿವೆ. ಆರ್ಥಿಕತೆ ಶೇ. 6ರಿಂದ 6.5ರ ದರದಲ್ಲಿ ಬೆಳೆಯುತ್ತಿದೆ. ಈ ಸನ್ನಿವೇಶದಲ್ಲಿ ಸಾಲ ಬಹಳ ಮುಖ್ಯ. ಅವಶ್ಯಕತೆಗಿಂತ ಅರ್ಧದಷ್ಟು ಮಾತ್ರವೇ ಸಾಲದ ಹಂಚಿಕೆ ಆಗುತ್ತಿದೆ. ಸಣ್ಣ ಉದ್ಯಮಗಳಿಗೆ ಅಪೌಷ್ಟಿಕತೆ ಕಾಡುತ್ತಿದೆ. ಸಣ್ಣ ನಗರಗಳಲ್ಲಿ ಉದ್ಯಮಾವಕಾಶಗಳ ಬಗ್ಗೆ ಅರಿವು ಕಡಿಮೆ ಇದೆ ಎಂದರು.

ಭಾರತದಲ್ಲಿ ಶೇ. 16ರಷ್ಟು ಉದ್ಯಮಗಳು ಮಾತ್ರ ಮಹಿಳೆಯರಿಂದ ನಿರ್ವಹಿಸಲಾಗುತ್ತಿದೆ. ಐದಕ್ಕೂ ಹೆಚ್ಚು ಉದ್ಯೋಗಿಗಳು ಇರುವ ಉದ್ಯಮಗಳಲ್ಲಿ ಮಹಿಳಾ ನೇತೃತ್ವದ ಇರುವುದು ಶೇ. 5 ಮಾತ್ರವೇ. ಅಲ್ಲದೇ ಮಹಿಳಾ ಮಾಲಿಕತ್ವದ ಶೇ. 27ರಷ್ಟು ವ್ಯವಹಾರಗಳು ಮಾತ್ರ 10 ಲಕ್ಷ ರೂಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವುದು. ಮಹಿಳೆಯರನ್ನು ಒಂದು ಸಮಾನ ಗುಂಪಿನಲ್ಲಿ ಇಡುವುದು ಸರಿ. ಸಮಾನ ಗುರಿ ಮತ್ತು ಮನಸ್ಸಿನ 10 ಅಥವಾ 20 ಮಹಿಳೆಯರ ಗುಂಪಿದ್ದು, ಎಲ್ಲರೂ ಕೂಡ ಬಿಸಿನೆಸ್ ಹೇಗೆ ಕಟ್ಟುವುದು ಎಂದು ಕಲಿಯುತ್ತಿದ್ದರೆ, ಅವರ ಆತ್ಮವಿಶ್ವಾಸ, ಕಲಿಕೆ ಇವೆಲ್ಲವೂ ಬಹಳ ಶಕ್ತಿಯುತವಾಗಿರುತ್ತದೆ ಎಂದು ರವಿ ಅವರು ವಿವರಿಸಿದರು.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *