ಫೋರ್ಬ್ಸ್ ಪಟ್ಟಿ ಪ್ರಕಟ, ಜಗತ್ತಿ‌ನ ಶ್ರೀಮಂತ ವ್ಯಕ್ತಿ ಯಾರು ಗೊತ್ತಾ? – ಟಾಪ್ ಟೆನ್ ಲಿಸ್ಟ್ ನಲ್ಲಿ ಯಾರೆಲ್ಲ ಇದ್ದಾರೆ?

ಫೋರ್ಬ್ಸ್ ಪಟ್ಟಿ ಪ್ರಕಟ, ಜಗತ್ತಿ‌ನ ಶ್ರೀಮಂತ ವ್ಯಕ್ತಿ ಯಾರು ಗೊತ್ತಾ? – ಟಾಪ್ ಟೆನ್ ಲಿಸ್ಟ್ ನಲ್ಲಿ ಯಾರೆಲ್ಲ ಇದ್ದಾರೆ?

ನ್ಯೂಸ್ ಆ್ಯರೋ : ವಿಶ್ವದಲ್ಲೇ ಶ್ರೀಮಂತರು ಯಾರು ಎನ್ನುವ ಕುತೂಹಲ ಸದಾ ಇದ್ದೇ ಇರುತ್ತದೆ. ಇದಕ್ಕಾಗಿ ಪ್ರತೀ ವರ್ಷ ಫೋರ್ಬ್ಸ್ ಮ್ಯಾಗಜೀನ್ ವಿಶ್ವದ ಬಿಲಿಯನೇರ್‌ಗಳ ಪಟ್ಟಿ ಯನ್ನು ಬಿಡುಗಡೆ ಮಾಡಿ ಅವರಿಗೆ ಶ್ರೇಯಾಂಕ ನೀಡುತ್ತದೆ. ಮೊದಲ ಬಾರಿಗೆ ಇದನ್ನು 1987 ರಲ್ಲಿ ಪ್ರಾರಂಭಿಸಲಾಯಿತು.

ಪ್ರತಿಯೊಬ್ಬರು ವರದಿ ಮಾಡಿದ ಆಸ್ತಿಗಳ ಆಧಾರದ ಮೇಲೆ ಅವರ ಒಟ್ಟು ನಿವ್ವಳ ಮೌಲ್ಯವನ್ನು ಡಾಲರ್ ನಲ್ಲಿ ಅಂದಾಜು ಮಾಡಲಾಗುತ್ತದೆ. ಇದರಲ್ಲಿ ಸಾಲ ಇನ್ನಿತರ ಅಂಶಗಳೂ ಸೇರಿರುತ್ತವೆ. ಇದರಲ್ಲಿ ಸರ್ವಾಧಿಕಾರಿಗಳನ್ನು ಸೇರಿಸಲಾಗುವುದಿಲ್ಲ. ಯಾಕೆಂದರೆ ಅವರು ಸಂಪತ್ತನ್ನು ತಮ್ಮ ಸ್ಥಾನದಿಂದ ಪಡೆದಿರುತ್ತಾರೆ.

ಈ ಬಾರಿ ಫೋರ್ಬ್ಸ್ ಮ್ಯಾಗಜೀನ್ ಪ್ರಕಟಿಸಿದ ಅತ್ಯಂತ ಶ್ರೀಮಂತ ಬಿಲಿಯನೇರ್ ಗಳಲ್ಲಿ ಎಲಾನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ. ಟ್ವಿಟರ್‌ ಸಿಇಓ ಹಾಗೂ ಉದ್ಯಮಿ ಎಲಾನ್ ಮಸ್ಕ್‌ 240.7 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಟೆಲ್ಸಾ ಮತ್ತು ಸ್ಪೇಸ್‌ಎಕ್ಸ್‌ನಿಂದ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. 2022 ರ ಅಕ್ಟೋಬರ್ ನಲ್ಲಿ ಇವರು 44 ಶತಕೋಟಿ ಡಾಲರ್ ಗೆ ಟ್ವಿಟರ್ ಅನ್ನು ಖರೀದಿಸಿ ಬಳಿಕ ಅದಕ್ಕೆ ಎಕ್ಸ್ ಎಂದು ನಾಮಕರಣ ಮಾಡಿದ್ದರು.

ಎಲಾನ್ ಮಸ್ಕ್ ಬಳಿಕ ಬರ್ನಾರ್ಡ್ ಅರ್ನಾಲ್ಟ್ ಅವರು ಸ್ಥಾನ ಗಳಿಸಿದ್ದಾರೆ. ಇವರು ವಿಶ್ವದ ಅತೀ ದೊಡ್ಡ ಐಷಾರಾಮಿ ಸರಕುಗಳ ಕಂಪೆನಿ ಮೊಯೆಟ್ ಹೆನ್ನೆಸ್ಸಿ ಲೂಯಿ ವಿಟಾನ್ ನ ಸಿಇಓ ಆಗಿದ್ದಾರೆ. 231.4 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಮೂರನೇ ಸ್ಥಾನವನ್ನು ಅಮೆಜಾನ್ ಸಂಸ್ಥಾಪಕರಾದ ಜೆಫ್ ಬೆಜೋಸ್ ಪಡೆದುಕೊಂಡಿದ್ದಾರೆ. ಇವರು ದಿ ವಾಷಿಂಗ್ಟನ್ ಪೋಸ್ಟ್ ಮತ್ತು ಬ್ಲೂ ಒರಿಜಿನ್ ಎಂಬ ಏರೋಸ್ಪೇಸ್ ಕಂಪೆನಿಯನ್ನು ಹೊಂದಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಸಾಫ್ಟ್‌ವೇರ್ ಒರಾಕಲ್‌ನ ಸಿಇಒ ಆಗಿದ್ದ ಲ್ಯಾರಿ ಎಲಿಸನ್ ಇದ್ದಾರೆ. ಲ್ಯಾರಿ ಎಲಿಸನ್ 146.1 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನ ಹೊಂದಿದ್ದು, ಸಾಫ್ಟ್‌ವೇರ್ ಒರಾಕಲ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ, ಅಧ್ಯಕ್ಷ ಮತ್ತು ಸಹ-ಸಂಸ್ಥಾಪಕರಾಗಿದ್ದಾರೆ. 2014 ರಲ್ಲಿ ಒರಾಕಲ್‌ನಲ್ಲಿ ಸಿಇಒ ಸ್ಥಾನವನ್ನು ತೊರೆದು ಬಳಿಕ 300 ಮಿಲಿಯನ್‌ ಡಾಲರ್ ಗೆ ಖರೀದಿ ಮಡಿದ ಹವಾಯಿಯನ್ ಐಲ್ಯಾಂಡ್ ಲಾನೈಗೆ ಸ್ಥಳಾಂತರಗೊಂಡರು.

ಬಿಲಿಯನೇರ್ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಐದನೇ ಸ್ಥಾನದಲ್ಲಿದ್ದಾರೆ.119.3 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿರುವ ಇವರಿಗೆ ಮೈಕ್ರೋಸಾಫ್ಟ್ ನಿಂದ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅತಿದೊಡ್ಡ ಕೃಷಿ ಭೂಮಿಯ ಮಾಲಕರಗಿರುವ ಬಿಲ್ ಗೇಟ್ಸ್ ಕೆನಡಿಯನ್ ನ್ಯಾಷನಲ್ ರೈಲ್ವೇ ಮತ್ತು ಆಟೋನೇಷನ್‌ನಂತಹ ವಿವಿಧ ಕಂಪೆನಿಗಳಲ್ಲಿ ಹೂಡಿಕೆಯನ್ನೂ ಮಾಡಿದ್ದಾರೆ.

ಅತ್ಯಂತ ನಿಪುಣ ಹೂಡಿಕೆದಾರರು ಎಂದೇ ಪರಿಗಣಿಸಲ್ಪಟ್ಟಿರುವ ವಾರೆನ್ ಬಫೆಟ್ ವಿಶ್ವದ ಆರನೇ ಅತ್ಯಂತ ಶ್ರೀಮಂತ ವ್ಯಕ್ತಿ. ಇವರು 117.4 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದು, ಬರ್ಕ್‌ಷೈರ್ ಹ್ಯಾಥ್‌ವೇ ನ ಮುಖ್ಯಸ್ಥರಾಗಿದ್ದಾರೆ. ವಿಮಾ ಪೂರೈಕೆದಾರ ಗೈಕೊ, ಬ್ಯಾಟರಿ ತಯಾರಕ ಡ್ಯುರಾಸೆಲ್ ಮತ್ತು ರೆಸ್ಟೋರೆಂಟ್ ಸರಪಳಿ ಡೈರಿ ಕ್ವೀನ್‌ನಂತಹ ಹಲವಾರು ಕಂಪೆನಿಗಳಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿ ಆದಾಯ ಗಳಿಸುತ್ತಿದ್ದಾರೆ.

ಅಮೇರಿಕನ್ ಬಿಲಿಯನೇರ್, ಕಂಪ್ಯೂಟರ್ ಪ್ರೋಗ್ರಾಮರ್, ಇಂಟರ್ನೆಟ್ ಉದ್ಯಮಿಯಾದ ಮಾರ್ಕ್ ಜುಕರ್‌ಬರ್ಗ್ ಏಳನೇ ಸ್ಥಾನದಲ್ಲಿದ್ದಾರೆ. ಇವರು 115.2 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಎಂಟನೇ ಸ್ಥಾನದಲ್ಲಿ ಅಮೆರಿಕದ ಬಿಲಿಯನೇರ್ ಉದ್ಯಮಿ ಎನಿಸಿಕೊಂಡಿರುವ ಲ್ಯಾರಿ ಪೇಜ್ ಇದ್ದಾರೆ. ಇವರು ಸೆರ್ಗೆನ್ ಬ್ರಿನ್ ಅವರೊಂದಿಗೆ ಗೂಗಲ್‌ನ ಸಹ-ಸಂಸ್ಥಾಪಕರಾಗಿದ್ದಾರೆ. 111.9 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಇವರು ಹೊಂದಿದ್ದಾರೆ.

ಒಂಬತ್ತನೇ ಸ್ಥಾನದಲ್ಲಿ ಲ್ಯಾರಿ ಪೇಜ್ ಜೊತೆಗೆ ಗೂಗಲ್‌ನ ಸಹ-ಸಂಸ್ಥಾಪಕರಾಗಿರುವ ಸೆರ್ಗೆ ಬ್ರಿನ್ ಇದ್ದಾರೆ. ಇವರು 106.2 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ನ ಲಾಸ್ ಏಂಜಲೀಸ್ ಕ್ಲಿಪ್ಪರ್ಸ್‌ನ ಮಾಲಕ ಸ್ಟೀವ್ ಬಾಲ್ಮರ್ ಅವರು ವಿಶ್ವದ ಶ್ರೀಮಂತ ನಾಯಕರ ಪೈಕಿ 10 ನೇ ಸ್ಥಾನದಲ್ಲಿದ್ದಾರೆ. ಇವರು 103.4 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇವರು 2000 ರಿಂದ 2014 ರವರೆಗೆ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *