ನಟ ರಾಮ್ ಪೋತಿನೇನಿ ಜತೆ ಹಸೆಮಣೆ ಏರಲಿದ್ದಾರಾ ‘ಪ್ರೇಮಂ’ ಸುಂದರಿ? – ಮದುವೆ ಸುದ್ದಿ ಬಗ್ಗೆ ನಟಿ ಅನುಪಮಾ ತಾಯಿ ಏನಂದ್ರು ಗೊತ್ತಾ?

ನಟ ರಾಮ್ ಪೋತಿನೇನಿ ಜತೆ ಹಸೆಮಣೆ ಏರಲಿದ್ದಾರಾ ‘ಪ್ರೇಮಂ’ ಸುಂದರಿ? – ಮದುವೆ ಸುದ್ದಿ ಬಗ್ಗೆ ನಟಿ ಅನುಪಮಾ ತಾಯಿ ಏನಂದ್ರು ಗೊತ್ತಾ?

ನ್ಯೂಸ್‌ ಆ್ಯರೋ : ಪ್ರೇಮಂ ಸಿನಿಮಾದ ಮೂಲಕ ಎಲ್ಲರ ಮನಸ್ಸನ್ನು ಕದ್ದ ನಟಿ ಅನುಪಮಾ ಪರಮೇಶ್ವರನ್ ಅವರು ತೆಲುಗಿನ ಖ್ಯಾತ ನಟನ ಜತೆ ಹಸೆಮಣೆ ಏರಲು ಸಜ್ಜಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ತೆಲುಗಿನ ಖ್ಯಾತ ನಟ ರಾಮ್ ಪೋತಿನೇನಿ ಜೊತೆ ಅನುಪಮಾ ಮದುವೆ ಆಗಲಿದ್ದಾರೆ ಎಂಬ ಗುಸು ಗುಸು ಟಾಲಿವುಡ್ ಅಂಗಳದಲ್ಲಿದೆ. 2018ರಲ್ಲಿ ‘ಹಲೋ ಗುರು ಪ್ರೇಮ ಕೋಸಮೆ’ ಎಂಬ ಸಿನಿಮಾದಲ್ಲಿ ಇವರಿಬ್ಬರು ಜೋಡಿಯಾಗಿ ನಟಿಸಿದ್ದರು. ಈ ವೇಳೆ ಪ್ರೀತಿಯಾಗಿದೆ. ಅದಲ್ಲದೆ ಸಾಕಷ್ಟು ವರ್ಷಗಳಿಂದ ಇವರಿಬ್ಬರು ಡೇಟಿಂಗ್‌ ಮಾಡ್ತಿದ್ದಾರೆ ಎನ್ನಲಾಗಿದೆ.

ಮಾಧ್ಯಮಗಳಲ್ಲಿ ಈ ರೀತಿ ಸುದ್ದಿ ಹರಿದಾಡುತ್ತಿದ್ದ ಹಾಗೇ ನಟಿ ಅನುಪಮಾ ಅವರ ತಾಯಿ ಸುನೀತಾ ಪರಮೇಶ್ವರನ್ ಅವರು ಸ್ಪಷ್ಟಣೆ ನೀಡಿದ್ದಾರೆ. ಇದು ಶುದ್ಧ ಸುಳ್ಳು ಸುದ್ದಿ. ಯಾವುದೇ ಮಾತುಕತೆಯಾಗಲಿ, ಮದುವೆ ವಿಚಾರವಾಗಲಿ ನಮ್ಮ ಕುಟುಂಬಗಳ ಮಧ್ಯೆ ನಡೆದಿಲ್ಲ. ರಾಮ್ ಹಾಗೂ ಅನುಪಮಾ ಮಧ್ಯೆ ಯಾವುದೇ ಪ್ರೇಮವಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಹೇಳಿಕೊಂಡಿದ್ದಾರೆ.

ಕಳೆದ ಬಾರಿ ಕ್ರಿಕೆಟರ್ ಜಸ್ಟ್ರಿತ್ ಬುಮ್ರಾ ಜೊತೆ ಅನುಪಮಾ ಮದುವೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ನಟಿ ಅನುಪಮಾ ಅವರು ಸ್ಪಷ್ಟನೆಯನ್ನು ನೀಡಿ, ನಮ್ಮಿಬ್ಬರ ಮಧ್ಯೆ ಆ ರೀತಿಯ ಸಂಬಂಧವಿಲ್ಲ ಎಂದಿದ್ದರು. ಇದೀಗ ತೆಲುಗು ಹೀರೋ ರಾಮ್ ಪೋತಿನೇನಿ ಜೊತೆ ನಟಿ ಅನುಪಮಾ ಹೆಸರು ತಳುಕು ಹಾಕಿಕೊಂಡಿದೆ.

ಇನ್ನೂ ಇವರಿಬ್ಬರ ಮದುವೆಗೆ ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬುದು ಲೇಟೆಸ್ಟ್‌ ಸುದ್ದಿಯಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *