ಒಂದೇ ಪ್ರದೇಶದಲ್ಲಿ ಪತ್ತೆಯಾಯ್ತು ಸ್ವಾಮೀಜಿಗಳ 12 ಪಾದುಕೆ, 28ದಂಡ‌..!! – ಗ್ರಾಮಸ್ಥರಿಗೆ ಹೆಚ್ಚಿತು ಅನುಮಾನ, ಸ್ಥಳಕ್ಕೆ ಪೋಲಿಸರ ದೌಡು..

ಒಂದೇ ಪ್ರದೇಶದಲ್ಲಿ ಪತ್ತೆಯಾಯ್ತು ಸ್ವಾಮೀಜಿಗಳ 12 ಪಾದುಕೆ, 28ದಂಡ‌..!! – ಗ್ರಾಮಸ್ಥರಿಗೆ ಹೆಚ್ಚಿತು ಅನುಮಾನ, ಸ್ಥಳಕ್ಕೆ ಪೋಲಿಸರ ದೌಡು..

ನ್ಯೂಸ್ ಆ್ಯರೋ : ಅರಸೀಕೆರೆಯಲ್ಲಿ ಒಂದೇ ಪ್ರದೇಶದಲ್ಲಿ ಸ್ವಾಮೀಜಿಗಳ 12 ಪಾದುಕೆ ಹಾಗೂ 28 ದಂಡ ಪತ್ತೆಯಾಗಿದೆ.

ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹೊನ್ನಶೆಟ್ಟಿ ಗ್ರಾಮದ ಹೊರವಲಯದಲ್ಲಿ ಸ್ವಾಮೀಜಿಗಳ ಪಾದುಕೆ ಹಾಗೂ ದಂಡ ಪತ್ತೆಯಾಗಿದೆ.

ವಿಶಾಲ‌ ಪ್ರದೇಶದಲ್ಲಿ ಸರತಿ ಸಾಲಿನಲ್ಲಿ‌ ಪಾದುಕೆ ಹಾಗೂ ದಂಡಗಳನ್ನು ಜೋಡಿಸಲಾಗಿದ್ದು, ಯಾವುದಾದರೂ ಸ್ವಾಮೀಜಿಗಳ ತಂಡ ಬಿಟ್ಟು ಹೋಗಿದೆಯೋ ಅಥವಾ ಯಾವುದಾದರು ಪೂಜೆಗಾಗಿ ಹೀಗೆ ಮಾಡಲಾಗಿದೆಯೋ? ಎಂಬ ಅನುಮಾನಗಳು ಮೂಡಿದೆ.

ಗ್ರಾಮದ ಕೆಲವರು ಹಸು ಮೇಯಿಸಲು ಎಂದಿನಂತೆ ಬಂದಾಗ ಇವುಗಳು ಕಂಡಿವೆ. 12 ಜತೆ ಪಾದುಕೆ ಹಾಗೂ 28 ದಂಡಗಳ‌ ದಿಢೀರ್ ಪ್ರತ್ಯಕ್ಷದಿಂದಾಗಿ ಗ್ರಾಮಸ್ಥರಲ್ಲಿ ಆತಂಕಗೊಂಡಿದ್ದಾರೆ. ಹೀಗೆ ಹೊರವಲಯದಲ್ಲಿ ಸ್ವಾಮೀಜಿಗಳ ದಂಡ, ಪಾದುಕೆ ಪ್ರತ್ಯಕ್ಷದ ಸುದ್ದಿ ತಿಳಿಯುತ್ತಿದ್ದ ಹಾಗೇ ಒಬ್ಬರ ಹಿಂದೆ ಒಬ್ಬರು ಬಂದು ದೂರದಿಂದಲೇ ನೋಡಿಕೊಂಡು ಹೋಗುತ್ತಿದ್ದಾರೆ. ಹುತ್ತದ ಮುಂದೆ ಹೀಗೆ ಹತ್ತಾರು ಪಾದುಕೆ, ದಂಡ ಇರುವುದು ಅನುಮಾನ ಮೂಡಿಸಿದೆ.

ಈ ಸಂಬಂದ ಅರಸೀಕೆರೆ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *