ಸಿಂಧೂ ನದಿಗೆ ಉರುಳಿದ ಬಸ್; ಮದುವೆ ಮನೆಯಿಂದ ಹೊರಟು ದುರಂತ ಸಾವು ಕಂಡ 26 ಮಂದಿ !

Bus
Spread the love

ನ್ಯೂಸ್ ಆ್ಯರೋ: ಮದುವೆ ಮನೆಯಿಂದ ಜನರನ್ನು ಹೊತ್ತು ಬರುತ್ತಿದ್ದ ಬಸ್ ಸಿಂಧೂ ನದಿಗೆ ಉರುಳಿದ ಪರಿಣಾಮ 26 ಮಂದಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಪಾಕಿಸ್ತಾನದ ಉತ್ತರ ಗಿಲ್ಗಿಟ್-ಬಾಲ್ಟಿಸ್ತಾನ್ (ಜಿಬಿ) ಪ್ರದೇಶದಲ್ಲಿ ಈ ಘಟನೆ ನಡೆದಿದೆ. 28 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್​ ಡೈಮರ್ ಜಿಲ್ಲೆಯ ಥಾಲಿಚಿ ಪ್ರದೇಶದಲ್ಲಿ ನದಿಗೆ ಬಿದ್ದಿದೆ ಎಂದು ಹೇಳಿದರು.

ಸ್ಥಳೀಯ ಜನರು ಮತ್ತು ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಇಬ್ಬರ ಜೀವ ಉಳಿಸುವಲ್ಲಿ ಯಶಸ್ವಿಯಾದರು. ರಕ್ಷಣಾ ತಂಡ 16 ಮೃತದೇಹಗಳನ್ನು ಮೊದಲು ಹೊರ ತೆಗೆದಿತ್ತು. ಅತಿಥಿಗಳು ಜಿಬಿ ಪ್ರದೇಶದ ಆಸ್ಟರ್ ಪ್ರದೇಶದಿಂದ ಈ ಬಸ್ ಮೂಲಕ ಪೂರ್ವ ಚಕ್ವಾಲ್ ಜಿಲ್ಲೆಗೆ ಹೋಗುತ್ತಿದ್ದರು.

ಈ ದುರಂತ ಘಟನೆಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ನಾಪತ್ತೆಯಾದವರ ಪತ್ತೆಗೆ ಎಲ್ಲ ರೀತಿಯ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Leave a Comment

Leave a Reply

Your email address will not be published. Required fields are marked *

error: Content is protected !!