ಬೇರೊಬ್ಬನ ಜೊತೆ ಸುತ್ತಾಡಿದ ಪ್ರೇಯಸಿ; ನಡು ರಸ್ತೆಯಲ್ಲಿಯೇ ತಾನು ಗಿಫ್ಟ್ ಕೊಟ್ಟ ಸ್ಕೂಟಿ ಕಿತ್ತುಕೊಂಡ ಗೆಳೆಯ
ನ್ಯೂಸ್ ಆ್ಯರೋ: ಯಾರೋ ಹುಡುಗಿಗಾಗಿ ಪ್ರೀತಿಸಿದವಳಿಗೆ ಕೈ ಕೊಡುವಂತಹದ್ದು, ಒಬ್ಬನ ಜೊತೆ ಪ್ರೀತಿಯಲ್ಲಿ ಇದ್ರೂ ಇನ್ನೊಬ್ಬನ ಜೊತೆ ಸುತ್ತಾಟ ನಡೆಸುವಂತಹದ್ದು ಇದೆಲ್ಲಾ ನಡೆಯುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದೆ.
ಯುವತಿಯೊಬ್ಬಳು ಬಾಯ್‌ಫ್ರೆಂಡ್ ಕಣ್ತಪ್ಪಿಸಿ ಬೇರೊಬ್ಬ ಹುಡುಗನ ಜೊತೆ ಸುತ್ತಾಡುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಗರ್ಲ್‌ಫ್ರೆಂಡ್ ಮೋಸದಾಟ ತಿಳಿದು ಆ ಯುವಕ ಆಕೆಯನ್ನು ನಡು ರಸ್ತೆಯಲ್ಲಿಯೇ ಅಡ್ಡಗಟ್ಟಿ ತಾನು ಆಕೆಗೆ ಗಿಫ್ಟ್ ಕೊಟ್ಟಿದ್ದಂತಹ ಸ್ಕೂಟಿಯನ್ನು ಕಿತ್ತುಕೊಂಡು ಹೋಗಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಯುವಕನ ಈ ಧೈರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಯುವತಿ ತಾನು ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನಿಗೆಯೇ ಮೋಸ ಮಾಡಿ ಬೇರೊಬ್ಬ ಹುಡುಗನ ಜೊತೆ ಸ್ಕೂಟಿಯಲ್ಲಿ ಸುತ್ತಾಡುತ್ತಿರುವ ವೇಳೆ ಆಕೆ ಬಾಯ್‌ಫ್ರೆಂಡ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಈಕೆಯ ಮೋಸದಾಟದಿಂದ ಕೋಪಗೊಂಡ ಗೆಳೆಯ ಆಕೆಗೆ ಬೈದು, ಸ್ಕೂಟಿಯಿಂದ ಕೆಳಗಿಳಿಯುವಂತೆ ಹೇಳಿ ಕೊನೆಗೆ ತಾನು ಗಿಫ್ಟ್ ನೀಡಿದ್ದಂತಹ ಸ್ಕೂಟರ್ ಅನ್ನು ಆಕೆಯಿಂದ ಕಿತ್ತುಕೊಂಡು ಹೋಗಿದ್ದಾನೆ.
ಶೋನಿ ಕಪೂರ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಗರ್ಲ್‌ಫ್ರೆಂಡ್ ಬೇರೊಬ್ಬ ಯುವಕನ ಜೊತೆ ಸುತ್ತಾಡುತ್ತಿದ್ದಾಗ ಆಕೆಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿರುವ ದೃಶ್ಯವನ್ನು ಕಾಣಬಹುದು. ಆಕೆಯ ಸ್ಕೂಟಿಯನ್ನು ಅಡ್ಡಗಟ್ಟಿದ ಗೆಳೆಯ ಕೀ ಕಿತ್ತುಕೊಂಡು ಗಾಡಿಯಿಂದ ಎದ್ದೇಳೆ, ಅದು ನಾನು ನಿನಗೆ ಗಿಫ್ಟ್ ಕೊಟ್ಟಿದ್ದು ಎಂದು ರಂಪಾಟ ನಡೆಸಿ, ತಾನು ಗರ್ಲ್‌ಫ್ರೆಂಡ್‌ಗೆ ಗಿಫ್ಟ್ ಕೊಟ್ಟ ಸ್ಕೂಟಿಯನ್ನು ಆಕೆಯಿಂದ ಕಿತ್ತುಕೊಂಡು ಹೋಗಿದ್ದಾನೆ.
ನವೆಂಬರ್ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಯುವಕ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾನೆʼ ಎಂದು ಹೇಳಿದ್ದಾರೆ.
Leave a Comment