ʼ1857ರ ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿʼ; ಪ್ರಶ್ನೆ ಪತ್ರಿಕೆ ಮೇಲೆ ಈ ರೇಂಜ್ ಗೆ ಬೆಳಕು ಚೆಲ್ಲಿದ ವಿದ್ಯಾರ್ಥಿ
ಪರೀಕ್ಷೆ ಅಂದಾಗ ಬಹುತೇಕ ಹೆಚ್ಚಿನ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳುತ್ತಾರೆ. ಲಾಸ್ಟ್ ಬೇಂಚ್ ಸ್ಟೂಡೆಂಟ್‌ಗಳು ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಆದ್ರೆ ಸಾಕಪ್ಪಾ ಎನ್ನುತ್ತಾ ಎಕ್ಸಾಮ್ ಪೇಪರ್ ಭರ್ತಿ ಮಾಡಿದ್ರೆ ಆಯ್ತು ಎಂದು ತರ್ಲೆ ಮತ್ತು ಅಸಂಬದ್ಧ ಉತ್ತರಗಳನ್ನು ಬರೆಯುತ್ತಾರೆ. ಇಂತಹ ತರ್ಲೆ ಉತ್ತರ ಪತ್ರಿಕೆಗಳಿಗೆ ಸಂಬಂಧಿಸಿದ ಕೆಲವು ಫೋಟೋಗಳು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.
ಇದೀಗ ಅಂತಹದ್ದೇ ಫೋಟೋವೊಂದು ಸಖತ್ ವೈರಲ್ ಆಗಿದ್ದು, ಹಿಂದಿ ಭಾಷೆಯಲ್ಲಿ 1857 ದಂಗೆಯ ಮೇಲೆ ಬೆಳಕು ಚೆಲ್ಲಿ ಎಂದು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ತರ್ಲೆ ಉತ್ತರವನ್ನು ಬರೆದಿದ್ದಾನೆ. ಈ ತರ್ಲೆ ಉತ್ತರಕ್ಕೆ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಇತಿಹಾಸ ವಿಷಯದ ಪರೀಕ್ಷೆಯಲ್ಲಿ ಹಿಂದಿಯಲ್ಲಿ 1857 ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂದು ಕೇಳಿದ ಪ್ರಶ್ನೆಗೆ ಲಾಸ್ಟ್ ಬೆಂಚ್ ವಿದ್ಯಾರ್ಥಿಯೊಬ್ಬ 1857 ರ ದಂಗೆ ಎಂದು ಬರೆದು ಅದರ ಕೆಳಗೆ ಬೆಳಕು ಚೆಲ್ಲುವಂತೆ ಟಾರ್ಚ್‌ನ ಚಿತ್ರ ಬಿಡಿಸಿದ್ದಾನೆ. ಈ ಫನ್ನಿ ವಿಡಿಯೋವನ್ನು kim_.taehyung_.7 ಹೆಸರಿನ ಇನ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ 1857 ರ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂದು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಬೆಳಕು ಚೆಲ್ಲುತ್ತದೆ ಎಂಬ ಅರ್ಥದಲ್ಲಿ ಟಾರ್ಚ್‌ನ ಚಿತ್ರ ಬಿಡಿಸಿದಂತ ದೃಶ್ಯವನ್ನು ಕಾಣಬಹುದು. ಪರೀಕ್ಷೆಯಲ್ಲಿ ವಿದ್ಯಾರ್ಥಿ ಬರೆದಂತಹ ಈ ಫನ್ನಿ ಉತ್ತರವನ್ನು ಕಂಡು ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
Leave a Comment