Bigg Boss Kannada : 11ನೇ ಆವೃತ್ತಿ ಆರಂಭಕ್ಕೆ ಮುಹೂರ್ತ ಫಿಕ್ಸ್ – ಈ ಬಾರಿ ಯಾರೆಲ್ಲ ಸ್ಪರ್ಧಿಗಳು? ಈ ಬಾರಿಯೂ ಒಟಿಟಿ ಇರುತ್ತಾ?
ನ್ಯೂಸ್ ಆ್ಯರೋ : ಕಿರುತೆರೆಯ ಟಾಪ್ ಟಿಆರ್’ಪಿ ಗಳಿಸುವ ಬಿಗ್ ಬಾಸ್ ಕನ್ನಡದ ಈ ಬಾರಿಯ ಸೀಸನ್ ಆರಂಭಕ್ಕೆ ಡೇಟ್ ಫಿಕ್ಸ್ ಆಗಿದ್ದು, ವೀಕ್ಷಕರ ಕುತೂಹಲ ಕೆರಳಿಸಿದೆ.
ಕಳೆದ ಬಾರಿ ನಟ ಕಾರ್ತಿಕ್ ಮಹೇಶ್ ಬಿಗ್ ಬಾಸ್ ನ ಚಾಂಪಿಯನ್ ಆಗಿದ್ದರೆ, ಡ್ರೋನ್ ಪ್ರತಾಪ್ ಎರಡನೇ ಸ್ಥಾನ ಪಡೆದಿದ್ದರು. ವಿವಾದಗಳಿಂದಲೇ ಸುದ್ದಿಯಾಗಿದ್ದ ಬಿಗ್ ಬಾಸ್ ಈ ಬಾರಿ ಮತ್ತೆ ಅಕ್ಟೋಬರ್ ಮೊದಲ ವಾರದಲ್ಲಿ ಆರಂಭವಾಗುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.
ಬಿಗ್ ಬಾಸ್ ಮುಗಿದು ಹತ್ತು ತಿಂಗಳುಗಳೇ ಕಳೆದಿದ್ದು ಈ ಬಾರಿಯ ಬಿಗ್ ಬಾಸ್ ಯಾವಾಗ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿತ್ತು. ಆದರೆ ಇನ್ನೊಂದು ತಿಂಗಳಲ್ಲಿ ಬಿಗ್ ಬಾಸ್ ಆರಂಭವಾಗಲಿದೆ ಎಂಬ ಮಾತು ಚಾಲ್ತಿಗೆ ಬಂದಿದೆ.
ಈ ಬಾರಿ ಹಾಸ್ಯ ನಟ ಚಿಕ್ಕಣ್ಣ, ನಟ ಅನಿರುದ್ಧ್, ತುಕಾಲಿ ಸಂತೋಷ್ ಅವರ ಪತ್ನಿ ಮಾನಸ, ಹಾಸ್ಯ ನಟ ರಾಘವೇಂದ್ರ, ಸುನೀಲ್ ರಾವ್, ಮೋಕ್ಷಿತಾ ಪೈ, ಭವ್ಯ ಗೌಡ, ವರುಣ್ ಆರಾಧ್ಯ, ವರ್ಷಾ ಕಾವೇರಿ, ಭೂಮಿಕಾ ಬಸವರಾಜ್, ರೀಲ್ಸ್ ರೇಷ್ಮಾ ಸೇರಿದಂತೆ ಕೆಲವರ ಹೆಸರು ಮುನ್ನೆಲೆಗೆ ಬಂದಿದೆ. ಹೀಗಾಗಿ ಈ ಸೀಸನ್‌ನಲ್ಲಿ ಏನು ವಿಶೇಷತೆ ಇರಲಿದೆ ಎಂಬ ಕುತೂಹಲವಿದೆ.
2022ರಲ್ಲಿ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ಪ್ರಸಾರ ಆಗಿತ್ತು. ಈ ಬಾರಿ ಬಿಗ್ ಬಾಸ್ ಒಟಿಟಿ ಇರೋದಿಲ್ವಂತೆ. ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದ ಬಗ್ಗೆ ಅಥವಾ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ಬಗ್ಗೆಯೂ ವಾಹಿನಿ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಎಂದಿನಂತೆ ಊ ಬಾರಿಯೂ ಕಿಚ್ಚ ಸುದೀಪ್ ಅವರು ಈ ಶೋ ನಿರೂಪಣೆ ಮಾಡುವ ನಿರೀಕ್ಷೆ ಇದೆ.
Leave a Comment