ಉಮಾಪತಿ, ಪ್ರಥಮ್ ವಿರುದ್ಧ ಕೊಲೆ ಬೆದರಿಕೆ – ದರ್ಶನ್ ಅಭಿಮಾನಿಯನ್ನು ರುಬ್ಬಿದ ಪೋಲಿಸರು, ಕ್ಷಮೆಯಾಚಿಸಿದ ಅಂದಾಭಿಮಾನಿ

ನ್ಯೂಸ್ ಆ್ಯರೋ : ನಟ ದರ್ಶನ್ ಬಂಧನವಾಗ್ತಿದ್ದಂಗೆ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಸಾಕಷ್ಟು ದರ್ಶನ್ ಫ್ಯಾನ್ಸ್ ದರ್ಶನ್ ಬಂಧನವನ್ನು ಖಂಡಿಸಿದ್ದರು. ಅಲ್ಲದೆ ಕೆಲವರು ಬೆದರಿಕೆಯನ್ನೂ ಹಾಕಿದ್ದರು. ಇದೀಗ ನಟ ಪ್ರಥಮ್, ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಯಂಬತೂರಿನ ಚೇತನ್ ಎಂಬಾತ ನಿರ್ಮಾಪಕ ಉಮಾಪತಿ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದ. ಅಲ್ಲದೇ ಇತರ ಅಭಿಮಾನಿಗಳನ್ನು ಕೆರಳಿಸುವ ರೀತಿಯ ಕಾಮೆಂಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ. ಈ ಹಿನ್ನಲೆಯಲ್ಲಿ ಉಮಾಪತಿ ಪೊಲೀಸ್ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಅಭಿಮಾನಿಯನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಅಲ್ಲದೇ ಆತ ಉಮಾಪತಿ ಅವರಿಗೆ ಕ್ಷಮೆ ಕೇಳಿದ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಕ್ಷಮೆ ಕೇಳಿದ ವೀಡಿಯೋದಲ್ಲಿ, ನಾನು ಚೇತನ್, ದರ್ಶನ್ ಅಭಿಮಾನಿ, ನಾನು ಉಮಾಪತಿ ಅವರಿಗೆ ಬೆದರಿಕೆ ಹಾಕಿರುವುದು ತಪ್ಪಾಗಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡಿದ್ದಾನೆ. ಸದ್ಯ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೊತೆಗೆ ಮತ್ತೊಬ್ಬ ಅಭಿಮಾನಿ ನಾಗೇಶ್ ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬೆದರಿಕೆ ಹಾಕಿದ ಅಭಿಮಾನಿಗಳ ಮೇಲೆ ಪಿ ಸಿ ಆರ್ ದಾಖಲು ಮಾಡಲಾಗಿದೆ. ಬಸವೇಶ್ವರ ನಗರ ಠಾಣೆಯಲ್ಲಿ ಕೋರ್ಟ್ ಸೂಚನೆಯಂತೆ ಎಫ್‍ಐಆರ್ ದಾಖಲು ಮಾಡಲಾಗಿದೆ.
Leave a Comment