ಧನರಾಜ್​​ಗೆ ಬಿಗ್ ಶಾಕ್ ಕೊಟ್ಟ ಗೆಳೆಯ-ಗೆಳತಿ; ಫಿನಾಲೆ ಟಿಕೆಟ್​​ನಿಂದ ಔಟ್

dhanaraj
Spread the love

ನ್ಯೂಸ್ ಆ್ಯರೋ: ಬಿಗ್​ ಬಾಸ್​ ಕೊನೆ ಹಂತಕ್ಕೆ ಬಂದ ಹಿನ್ನೆಲೆಯಲ್ಲಿ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ವಾರದಿಂದ ವಾರಕ್ಕೆ ಸ್ಪರ್ಧಿಗಳ ಸಂಖ್ಯೆಯಲ್ಲಿ ಕಡಿಮೆ ಆಗಿದೆ. ಸದ್ಯ 9 ಸ್ಪರ್ಧಿಗಳಿದ್ದು ಈ ವಾರ ಇದರಲ್ಲಿ ಇನ್ನೊಬ್ಬರು ಅಥವಾ ಇಬ್ಬರು ಜಾಗ ಖಾಲಿ ಮಾಡಬಹುದು. ಇದರ ಬೆನ್ನಲ್ಲೇ ಸ್ಪರ್ಧಿಗಳಲ್ಲೇ ಫಿನಾಲೆಗೆ ಆಯ್ಕೆ ನಡೆಯುತ್ತಿದ್ದು ಚೈತ್ರಾ ಬೆನ್ನಲ್ಲೇ ಇದೀಗ ಧನರಾಜ್ ಅವರಿಗೂ ಬಿಗ್ ಶಾಕ್ ಕೊಡಲಾಗಿದೆ.

ಧನರಾಜ್ ಮೊದಲಿನಿಂದಲೂ ಮನೆಯಲ್ಲಿ ಎಲ್ಲರ ಜೊತೆ ಚೆನ್ನಾಗಿ ಆಟ ಆಡಿಕೊಂಡು, ನಗಿಸುತ್ತ, ಕೊಟ್ಟ ಟಾಸ್ಕ್​ಗಳನ್ನು ಆಡಿ ಯಶಸ್ವಿಯಾಗಿದ್ದರು. ಇದೀಗ ರಿಲೀಸ್ ಆಗಿರುವ ಪ್ರೋಮೋ ವಿಡಿಯೋದಲ್ಲಿ ಎಲ್ಲರೂ ಧನರಾಜ್ ಹೆಸರನ್ನು ಹೇಳಿದ್ದು ಫೈನಲ್​ಗೆ ಅನರ್ಹರು ಎಂದು ಸಹ ಆಟಗಾರರು ಹೇಳಿದ್ದಾರೆ. ಅಲ್ಲದೇ ಗೆಳೆಯ ಹನಮಂತು ಕೂಡ ‘ಎಷ್ಟು ಹೇಳಿದರು ಕೂಡ ನಿನಗೆ ಬುದ್ಧಿ ಬರಲಿಲ್ಲ’ ಎಂದು ಹಾಡು ಹಾಡಿ ಏನನ್ನೋ ಇನ್​​ಡೈರೆಕ್ಟ್ ಆಗಿ ಹೇಳಿದಂತೆ ಇದೆ.

ಫಿನಾಲೆ ಟಿಕೆಟ್​ನಲ್ಲಿ ಧನರಾಜ್ ಹರಕೆಯ ಕುರಿ ಆದ್ರಾ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಅಣ್ಣ, ತಂಗಿ ಎಂದು ಗುರುತಿಸಿಕೊಂಡ ಮಂಜು ಹಾಗೂ ಗೌತಮಿ ಇಬ್ಬರು ಫಿನಾಲೆ ಟಿಕೆಟ್​ನಿಂದ ಧನರಾಜ್​ ಅವರ ಹೆಸರನ್ನು ಸೂಚಿಸಿ ಹೊರಗಿಟ್ಟಿದ್ದಾರೆ. ಇದಕ್ಕೆ ಮಾರಿ ಹಬ್ಬ ಜಾತ್ರೆಯಲ್ಲಿ ಕುರಿನ ಬಲಿ ಕೊಟ್ಟಂತೆ ಎಂದು ಧನರಾಜ್​ಗೆ ಭವ್ಯ ಹೇಳಿ ನಕ್ಕಿದ್ದಾರೆ. ಇನ್ನು ಧನರಾಜ್ ಹೆಸರನ್ನು ಫಿನಾಲೆಯಿಂದ ಹೊರಗಿಡುವುದಕ್ಕೆ ಕಾರಣ ಕೊಟ್ಟ ಗೌತಮಿ, ಮಂಜು ಮೊದಲ ಎರಡು- ಮೂರು ವಾರ ಧನರಾಜ್ ಹಿಂಜರಿಯುತ್ತಿದ್ದರು, ಸರಿಯಾಗಿ ಆಡಿಲ್ಲ ಎಂದಿದ್ದಾರೆ.

ಇದಕ್ಕೆ ಮನೆಯ ಕ್ಯಾಪ್ಟನ್ ರಜತ್ ಮಾತನಾಡಿ, ಮೊದಲ ಮೂರು ವಾರ ಯಾಕೋ ಚೆನ್ನಾಗಿ ಆಡಿಲ್ಲ ಧನರಾಜ್ ಅಂತ ಕೇಳಿದ್ದಾರೆ. ಗೌತಮಿಗಿಂತ ಧನು ವೀಕ್ ಆ? ಎಂದು ರಜತ್ ಪ್ರಶ್ನೆ ಮಾಡುತ್ತಿದ್ದಂತೆ ಮಂಜು, ಇಲ್ಲಿ ಒಬ್ಬನೇ ಆಡುತ್ತಿರೋದು ರಜತ್, ಮತ್ತೊಬ್ಬರನ್ನು, ಇನ್ನೊಂದು ಮತ್ತೊಂದನ್ನು ಜೊತೆಗೆ ಕರೆದುಕೊಂಡು ಹೋಗುತ್ತಿಲ್ಲ ಎಂದು ಹೇಳಿದ್ದಾರೆ. ಅಂತೂ ಧನರಾಜ್ ಅವರನ್ನು ಫಿನಾಲೆ ಟಿಕೆಟ್​ನಿಂದ ಮಂಜು, ಗೌತಮಿ ಇಬ್ಬರು ಹೊರಗಿಟ್ಟಿದ್ದಾರೆ. ಇದರಿಂದ ಧನು ಮುಖದಲ್ಲಿ ಬೇಸರ ಆವರಿಸಿಕೊಂಡಿದೆ.

Leave a Comment

Leave a Reply

Your email address will not be published. Required fields are marked *

error: Content is protected !!