ಹನುಮಂತನ ಬಗ್ಗೆ ಮಾತಾಡಿ ಟ್ರೋಲ್ ಆದ ತ್ರಿವಿಕ್ರಂ ತಾಯಿ; ಅಂಥದ್ದೇನ್ ಹೇಳಿದ್ರು ಗೊತ್ತಾ?

Bigg Bos
Spread the love

ನ್ಯೂಸ್ ಆ್ಯರೋ: ಕನ್ನಡದ ಬಿಗ್​ಬಾಸ್​ ಸೀಸನ್ 11ರ ವಿನ್ನರ್​ ಆಗಿ ಹನುಮಂತ ಹೊರ ಹೊಮ್ಮಿದ್ದಾರೆ. ರನ್ನರ್ ಅಪ್​ ಆಗಿ ತ್ರಿವಿಕ್ರಮ್​ ಹೊರ ಹೊಮ್ಮಿದ್ದಾರೆ. ಆದರೆ ಇದರ ಮಧ್ಯೆ ತ್ರಿವಿಕ್ರಮ್ ತಾಯಿ ಹನುಮಂತನ ಗೆಲುವಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತಾಡಿದ ತ್ರಿವಿಕ್ರಮ್​ ತಾಯಿ ವನಜಾಕ್ಷಿ, ನನಗೆ ಹನುಮಂತನಲ್ಲಿ ಬೇರೆ ಏನೂ ಕಾಣಿಸಲಿಲ್ಲ. ಅವನಿಗೆ ಬಿಟ್ಟು ಬೇರೆ ಯಾರಿಗಾದ್ರೂ ಸಿಕ್ಕಿದರೆ ನನಗೆ ಖುಷಿ ಆಗುತ್ತಿತ್ತು. ನನ್ನ ಮಗನಿಗೆ ಸಿಕ್ಕಿಲ್ಲ ಅಂತ ಬೇಸರ ಇಲ್ಲ, ಅಷ್ಟು ಜನರಲ್ಲಿ ಹನುಮಂತನಿಗೆ ಬಿಟ್ಟು ಬೇರೆಯವರಿಗೆ ಸಿಗಬೇಕಿತ್ತು ಎಂದಿದ್ದಾರೆ.

ಬಳಿಕ ಮಾತನಾಡಿದ ಅವರು, ಹನುಮಂತ ಗೆದ್ದಿದ್ದು ಕೂಡ ಒಂದು ರೀತಿಯಲ್ಲಿ ಖುಷಿ. ಆದರೆ ಅವರು ನಡುವಲ್ಲಿ ಬಿಗ್ ಬಾಸ್ ಮನೆಗೆ ಬಂದು ಟ್ರೋಫಿ ಗೆದ್ದರಲ್ಲ ಎಂಬುದು ಒಂದು ಬೇಜಾರು. ಮೊದಲಿಂದ ಇದ್ದವರು ಯಾರಾದರೂ ಗೆಲ್ಲಬೇಕಿತ್ತು ಇಂದು ಹೇಳಿದ್ದಾರೆ.

ಇದಕ್ಕೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಅವರು ಈ ರೀತಿಯ ಹೇಳಿಕೆ ನೀಡಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕಲವರು ‘ತ್ರಿವಿಕ್ರಂಗಿಂತ ಹನುಮಂತ ಉತ್ತಮವಾಗಿ ಆಡಿದ್ದಾರೆ’ ಎನ್ನುವ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಹನುಮಂತ ಉತ್ತಮವಾಗಿ ಆಡಿದ್ದಾರೆ ಎಂಬುದು ಅನೇಕರ ಅಭಿಪ್ರಾಯ. ಅವರಿಗೆ ಬಿದ್ದ ವೋಟ್​ಗಳ ಸಂಖ್ಯೆಯೇ ಇದ್ದಕ್ಕೆ ಸಾಕ್ಷಿ ಎಂದೂ ಹೇಳಿದ್ದಾರೆ.

Leave a Comment

Leave a Reply

Your email address will not be published. Required fields are marked *