ಈರುಳ್ಳಿಯನ್ನು ಸಾಕ್ಸ್‌ನಲ್ಲಿ ಯಾಕೆ ಇಡುತ್ತಾರೆ ಗೊತ್ತಾ?; ರಾತ್ರಿ ಹೀಗೆ ಮಾಡಿ ಮಲಗೋದ್ರಿಂದ ಏನೇನು ಉಪಯೋಗವಿದೆ?

By placing onions on your feet
Spread the love

ನ್ಯೂಸ್ ಆ್ಯರೋ: ಈರುಳ್ಳಿಗೂ ಆಯುರ್ವೇದಕ್ಕೂ ಬಹಳ ಹಳೆಯ ಸಂಬಂಧವಿದೆ. ಇದು ಫೈಬರ್, ರಂಜಕ, ಪೊಟ್ಯಾಷಿಯಮ್‌ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ, ದೇಹವನ್ನು ಆರೋಗ್ಯಕರವಾಗಿಡಲು ಅವಶ್ಯಕ. ಮಲಗುವ ಮೊದಲು 1 ಈರುಳ್ಳಿಯನ್ನು ಸಾಕ್ಸ್‌ನಲ್ಲಿ ಹಾಕಿ ಕಾಲಿಗೆ ಧರಿಸೋದರಿಂದ ಎಷ್ಟು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?

ಈರುಳ್ಳಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿದೆ. ಸಾಕ್ಸ್‌ನಲ್ಲಿ ಈರುಳ್ಳಿ ಹಾಕಿ ಅದೇ ಸಾಕ್ಸ್ ಧರಿಸಿ ಮಲಗೋದ್ರಿಂದ, ಈರುಳ್ಳಿ ಪಾದಗಳ ಮೇಲೆ ಒತ್ತಡ ಏರುತ್ತೆ, ಇದು ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ.

ಈರುಳ್ಳಿಯಲ್ಲಿ ಫಾಸ್ಪರಿಕ್ ಆಮ್ಲವಿದೆ. ಈ ಆಮ್ಲವು ಚರ್ಮದ ಮೂಲಕ ಹೀರಲ್ಪಟ್ಟಾಗ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಸಾಕ್ಸ್‌ನಲ್ಲಿ ಈರುಳ್ಳಿ ಹಾಕಿ ಮಲಗಿದ್ರೆ ರಕ್ತ ಶುದ್ದಿಯಾಗುತ್ತೆ.

ಈರುಳ್ಳಿ ತುಂಡುಗಳನ್ನು ಕತ್ತರಿಸಿ ಅವುಗಳನ್ನು ಸಾಕ್ಸಿನಲ್ಲಿ ತುಂಬಿಸಿ ನಂತರ ಅವುಗಳನ್ನು ಧರಿಸಿ. ಇದನ್ನು ಮಾಡುವುದರಿಂದ ನೀವು ಸಾಕಷ್ಟು ಆರಾಮವನ್ನು ಪಡೆಯುತ್ತೀರಿ. ಇದರೊಂದಿಗೆ, ಪಾದಗಳ ವಾಸನೆ ಸಹ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತೆ.

ಮಲಗುವ ಮೊದಲು ಈರುಳ್ಳಿಯನ್ನು ಸಾಕ್ಸ್ನಲ್ಲಿ ಹಾಕಿ ಅದನ್ನ ಕಾಲಿಗೆ ಹಾಕಿ ಮಲಗೋದು ಹೊಟ್ಟೆ ಮತ್ತು ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಬಳಸುವುದರಿಂದ ಹೃದಯಾಘಾತದಂತಹ ಸಮಸ್ಯೆಗಳನ್ನು ತೊಡೆದುಹಾಕಬಹುದು.

ಚಳಿಗಾಲದಲ್ಲಿ ನಿಮಗೆ ಶೀತ ಮತ್ತು ಕೆಮ್ಮಿನ ಸಮಸ್ಯೆ ಇದ್ದರೆ, ಈರುಳ್ಳಿಯನ್ನು ಸಾಕ್ಸ್ನಲ್ಲಿ ತುಂಬಿಸಿ ಅದನ್ನು ಧರಿಸಿ ಮಲಗಿ. ಇದು ಬೆಳಿಗ್ಗೆಯವರೆಗೆ ಶೀತ ಮತ್ತು ಕೆಮ್ಮಿನಿಂದ ನಿಮಗೆ ಸಾಕಷ್ಟು ಆರಾಮ ನೀಡುತ್ತದೆ. ನಿಮ್ಮ ದೇಹ ಮತ್ತು ನಿಮ್ಮ ಸುತ್ತಲಿನ ಗಾಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ವಚ್ಛವಾಗಿರಿಸುತ್ತದೆ. ಇದರಿಂದ ರಾತ್ರಿ ವೇಳೆ ಶುದ್ಧ ಗಾಳಿ ಪಡೆಯಲು ಸಹಾಯವಾಗುತ್ತೆ.

ಸಾಕ್ಸ್ ನಲ್ಲಿ ಈರುಳ್ಳಿ ಹಾಕುವುದು ಹೇಗೆ?:

ಈರುಳ್ಳಿಯನ್ನು ತುಂಡುಗಳಾಗಿ ಕತ್ತರಿಸಿ ಸಾಕ್ಸ್ ನಲ್ಲಿ ಹಾಕಿ, ಅದನ್ನು ಕಾಲಿಗೆ ಹಾಕಿ ಮಲಗಿ. ಇದಕ್ಕಾಗಿ, ನೀವು ಸಾವಯವ ಈರುಳ್ಳಿಯನ್ನು ಮಾತ್ರ ಬಳಸಬೇಕು. ಈರುಳ್ಳಿಯನ್ನು ಚಪ್ಪಟೆ ತುಂಡುಗಳಾಗಿ ಕತ್ತರಿಸಬೇಕು ಎಂಬುದನ್ನು ನೆನಪಿನಲ್ಲಿಡಿ.

Leave a Comment

Leave a Reply

Your email address will not be published. Required fields are marked *

error: Content is protected !!