ಕೆ.ಎಲ್ ರಾಹುಲ್ ಕೈಬಿಟ್ಟ ಆರ್ಸಿಬಿ ಟೀಮ್; ತಂಡದ ವಿರುದ್ಧ ವಿರಾಟ್ ಕೊಹ್ಲಿ ಅಸಮಾಧಾನ
ನ್ಯೂಸ್ ಆ್ಯರೋ: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಕ್ತಾಯಗೊಂಡಿದೆ. ಈ ಬಾರಿ ಹರಾಜಿನಲ್ಲಿ ಆರ್ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್ಸಿಬಿ ಈ ಮೂಲಕ ಮುಂದಿನ ಸೀಸನ್ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ.
ಇನ್ನು ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ವಿರಾಟ್ ಕೊಹ್ಲಿ, ಯಶ್ ದಯಾಳ್ ಹಾಗೂ ರಜತ್ ಪಾಟಿದಾರ್ ರೀಟೈನ್ ಮಾಡಿಕೊಂಡಿತ್ತು. ಈಗ ನಡೆದ ಮೆಗಾ ಹರಾಜಿನಲ್ಲೂ 19 ಆಟಗಾರರನ್ನು ಖರೀದಿ ಮಾಡಿತು. ಅಚ್ಚರಿ ಎಂದರೆ ಆರ್ಸಿಬಿ ಯಾವುದೇ ಕ್ಯಾಪ್ಟನ್ ಆಗೋ ಸಾಮರ್ಥ್ಯ ಇರೋ ಆಟಗಾರನನ್ನು ಬಿಡ್ ಮಾಡದಿರುವುದು. ಹಾಗಾಗಿ ಕೊಹ್ಲಿಯೇ ಮುಂದಿನ ಕ್ಯಾಪ್ಟನ್ ಎಂದು ಹೇಳಲಾಗುತ್ತಿದೆ.
80ಕ್ಕೂ ಹೆಚ್ಚು ಕೋಟಿಯೊಂದಿಗೆ ಹರಾಜಿಗೆ ಬಂದ ಆರ್ಸಿಬಿ ಮೊದಲ ದಿನವೇ ಬರೋಬ್ಬರಿ 50 ಕೋಟಿ ಖರ್ಚು ಮಾಡಿತ್ತು. 2ನೇ ದಿನ ಉಳಿದ 30 ಕೋಟಿಯನ್ನು ಆಟಗಾರರ ಮೇಲೆ ಸುರಿಯಿತು. ಈ ಪೈಕಿ ಆರ್ಸಿಬಿ ಜೋಶ್ ಹೇಜಲ್ವುಡ್ಗೆ 12.50 ಕೋಟಿ, ಫಿಲ್ ಸಾಲ್ಟ್ಗೆ 11.50 ಕೋಟಿ ರೂ., ಜಿತೇಶ್ ಶರ್ಮಾಗೆ 11.00 ಕೋಟಿ ರೂ., ಭುವನೇಶ್ವರ್ ಕುಮಾರ್ಗೆ 10.75 ಕೋಟಿ ರೂ., ಲಿಯಾಮ್ ಲಿವಿಂಗ್ಸ್ಟೋನ್ಗೆ ಸುಮಾರು 8.75 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಈ ಬಗ್ಗೆ ಕೊಹ್ಲಿ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು, ಈ ಕುರಿತು ಮಾತಾಡಿರೋ ಆರ್ಸಿಬಿ ಡೈರೆಕ್ಟರ್ ಬೊಬಾಟ್ ಅವರು, ಮೊದಲ ದಿನದ ಆಕ್ಷನ್ ಬಳಿ ಕೊಹ್ಲಿ ಕೆಲವು ಮೆಸೇಜ್ಗಳನ್ನು ಕಳಿಸಿದ್ರು. ನಮ್ಮ ಆಕ್ಷನ್ ಸ್ಟಾಟರ್ಜಿ ಬಗ್ಗೆ ಖುಷಿ ಇರಲಿಲ್ಲ. ಕೊಹ್ಲಿ ಫೀಡ್ ಬ್ಯಾಕ್ ನಂತರ ನಮ್ಮ ಪ್ಲಾನ್ ಬದಲಿಸಿದೆವು ಎಂದರು. ಮೂಲಗಳ ಪ್ರಕಾರ ಕೆ.ಎಲ್ ರಾಹುಲ್, ಮೊಹಮ್ಮದ್ ಸಿರಾಜ್ ಅವರನ್ನು ಬಿಟ್ಟಿದ್ದಕ್ಕೆ ವಿರಾಟ್ ಕೊಹ್ಲಿ ಅಸಮಾಧಾನ ಹೊರಹಾಕಿದ್ರು ಎಂದು ತಿಳಿದು ಬಂದಿದೆ.
2025ರ ಐಪಿಎಲ್‌ಗೆ ಆರ್ಸಿಬಿ ತಂಡ ಹೀಗಿದೆ:
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಟಿದಾರ್, ದೇವದತ್ ಪಡಿಕ್ಕಲ್ , ಜಾಕೋಬ್ ಬೆಥೆಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಖ್ ಧಾರ್, ಜೋಶ್ ಹೇಜಲ್‌ವುಡ್, ಸುಯಶ್ ಶರ್ಮಾ, ಮನೋಜ್ ಭಾಂಡಗೆ, ಸ್ವಪ್ನಿಲ್ ಸಿಂಗ್, ರೊಮಾರಿಯೋ ಶೆಫರ್ಡ್, ಯಶ್ ದಯಾಳ್.
Leave a Comment