‘ದರ್ಶನ್ ಕೇಸ್​ನಲ್ಲಿ ಪೊಲೀಸರೇ ಸುಳ್ಳಿನ ಕಥೆ ಕಟ್ಟಿದ್ರು’;ಕೋರ್ಟ್ ಎದುರು ಸಿವಿ ನಾಗೇಶ್ ವಾದ

pv nagesh and darshan
Spread the love

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಮಧ್ಯಂತರ ಜಾಮೀನು ಅವಧಿ ಮುಗಿಯುತ್ತಾ ಬಂದರೂ ಇನ್ನೂ ದರ್ಶನ್​ಗೆ ಯಾಕೆ ಸರ್ಜರಿ ಮಾಡಿಲ್ಲ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಇಂದು ಹೈಕೋರ್ಟ್​ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕೂಡ ನಡೆಯಿತು. ದರ್ಶನ್ ಪರ ವಕೀಲರು, ರೇಣುಕಾಸ್ವಾಮಿ ಕೊಲೆ ಕೇಸ್​ನ ತನಿಖಾ ಲೋಪಗಳ ಬಗ್ಗೆ ವಾದ ಮಾಡಿದ್ರು. ದರ್ಶನ್​ ಮನೆಯಲ್ಲಿ ಸೀಜ್ ಆದ ಹಣಕ್ಕೂ ಕೊಲೆ ಕೇಸ್​ಗೂ ಯಾವುದೇ ಸಂಬಂಧವಿಲ್ಲ, ಆದ್ರೂ ಪೊಲೀಸರು ಸಂಬಂಧ ಕಲ್ಪಿಸಿದ್ದಾರೆ ಎಂದು ಸಿವಿ ನಾಗೇಶ್ ಮಾಡಿದ್ದಾರೆ. ​

ದರ್ಶನ್ ಪರ ವಕೀಲರು ದರ್ಶನ್​ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಓದಿ ಹೇಳಿದ್ದಾರೆ. ನನ್ನನ್ನು ಕರ್ಕೊಂಡು ಹೋದ್ರೆ ಕೊಲೆಯಾದ ಸ್ಥಳದ ಬಗ್ಗೆ ಹೇಳ್ತೀನಿ. ವಿನಯ್​ಗೆ ಹಣ ನೀಡಿದ ಸ್ಥಳ ಕೂಡ ತೋರಿಸ್ತೀನಿ ಎಂದಿದ್ದಾರೆ. ನಾನು ಧರಿಸಿದ್ದ ಬಟ್ಟೆ ನಮ್ಮ ಮನೆ ಒಳಗೆ ಇದೆ ತೋರಿಸ್ತೀನಿ ಅಂದಿದ್ದಾರೆ. ಜೂನ್ 14ರಂದು ಐಡಿಯಲ್ ಹೋಂ ನ ಮನೆಯಲ್ಲಿ ಮಹಜರು ಮಾಡಿದ್ದಾರೆ. ದರ್ಶನ್​ ಜೂನ್ 11ರಂದು ಸ್ವಇಚ್ಚಾ ಹೇಳಿಕೆ ನೀಡಿದ್ರೇ ಜೂನ್​ 14ಕ್ಕೆ ಹೋಗಿದ್ದಾರೆ. ಯಾಕೆ ತಡ ಮಾಡಿದ್ರು, ಇವ್ರು ಎವಿಡೆನ್ಸ್​ಗಳನ್ನು ಸೃಷ್ಟಿ ಮಾಡಲು ತಡ ಮಾಡಿದ್ದಾರೆ ಎಂದು ಹೇಳಿದ್ರು.

ಚಪ್ಪಲಿ ಹಾಗೂ ಬಟ್ಟೆಗಳನ್ನು ತೋರಿಸ್ತೀನಿ ಅಂತ ದರ್ಶನ್ ಹೇಳಿದ್ರೆ, ಇವ್ರು ಶೂಗಳನ್ನು ಸೀಜ್ ಮಾಡಿದ್ದಾರೆ. ಯಾಕಂದರೆ ಆರೋಪಿ ಶೂನಲ್ಲಿ ಒದ್ದಿದ್ದಾರೆ ಅಂತ ಇವರೇ ಬರೆದುಕೊಂಡಿದ್ರಲ್ಲ ಹೀಗಾಗಿ ಚಪ್ಪಲಿ ಬದಲು ಶೂಗಳನ್ನು ಸೀಜ್ ಮಾಡಿದ್ದಾರೆ ಎಂದು ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ.

ಮನೆಗೆಲಸದಾಕೆ ಬಟ್ಟೆಯನ್ನು ಸರ್ಫ್ ಪೌಡರ್ ಹಾಕಿ ಕುಕ್ಕಿ ಕುಕ್ಕಿ ಒಗೆದಿರೋದಾಗಿ ಹೇಳಿದ್ದಾರೆ. ಅಷ್ಟು ಜೋರಾಗಿ ಒಗೆದ ಮೇಲೆ ರಕ್ತದ ಕಲೆ ಸಿಗಲು ಹೇಗೆ ಸಾಧ್ಯ ಎಂದು ದರ್ಶನ್ ಪರ ವಕೀಲರು ವಾದ ಮಾಡಿದ್ರು. ಅಷ್ಟೇ ಅಲ್ಲದೇ ರೇಣುಕಾಸ್ವಾಮಿ ರಕ್ತ ಸಂಗ್ರಹಿಸಿ ಎಫ್ ಎಸ್ ಎಲ್ ಗೆ ಕಳುಹಿಸಿರೋ ಬಗ್ಗೆಯೇ ಅನುಮಾನ ಇದೆ ಎಂದು ವಾದ ಮಂಡಿಸಿದ್ದಾರೆ.

ದರ್ಶನ್ ಮನೆಯಲ್ಲಿ 37 ಲಕ್ಷ 40 ಸಾವಿರ ಹಣ ಸೀಜ್ ಮಾಡಿದ್ದಾರೆ. ಜೂನ್ 18ರಂದು ದರ್ಶನ್ ಮನೆಯಲ್ಲಿ ಹಣ ಸೀಜ್​ ಆಗಿದೆ. ನನಗೆ ಪರಿಚಯ ಇರುವ ಮೋಹನ್ ಅವರು ಈ ಹಣ ನೀಡಿದ್ದರು ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ. ಮೋಹನ್ ಅವರು ಮೇ ತಿಂಗಳ ಮೊದಲ ವಾರದಲ್ಲೇ ಹಣ ಕೊಟ್ಟಿದ್ದಾರೆ. ಈ ಹಣಕ್ಕೂ ಕೊಲೆ ಕೇಸ್​ಗೂ ಯಾವುದೇ ಸಂಬಂಧವಿಲ್ಲ. ಹಣವನ್ನ ಕೇಸ್​ ಲಿಂಕ್ ಮಾಡಿದ್ದು ಸರಿಯಲ್ಲ.

ಕೊಲೆ ಆಗುತ್ತೆ ಅಂತ ಮೊದಲೇ ತಿಳಿದು ಹಣ ತಂದು ಇಡಲು ಆಗುತ್ತಾ? ಈ ಕೇಸ್​ನಲ್ಲಿ ಸುಳ್ಳಿನ ಕಥೆ ಎಣೆದಿದ್ದಾರೆ ಎಂದು ಸಿವಿ ನಾಗೇಶ್ ಹೇಳಿದ್ರು. ಸುಳ್ಳು ಮಾಡೋಕೆ ಒಂದು ಲಿಮಿಟ್ ಇರಬೇಕು ಇಲ್ಲಿ ತನಿಖೆ ಹಾದಿ ಹಾದಿ ತಪ್ಪಿದೆ.

ಕೇಸ್​ಗೆ ಸಂಬಂಧಿಸಿದಂತೆ 1300 ಪುಟಗಳು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರಲ್ಲಿ 700 ಪುಟಗಳು ಕಾಲ್ ರೆಕಾರ್ಡ್ ಇದೆ. ನೋಡಿ ನನಗೆ ಶಾಕ್ ಆಯ್ತು ಎಂದು ಸಿವಿ ನಾಗೇಶ್ ಹೇಳಿದ್ರು. ಡ್ರೈವರ್, ಮ್ಯಾನೇಜರ್, ಗೆಳತಿ, ಮನೆ ಕೆಲಸದವರ ಬಳಿ ಯಾವಾಗಲೂ ದರ್ಶನ್ ಮಾತಾಡ್ತಾರೆ. ಅದರಲ್ಲಿ ಹೊಸದೇನು ಇಲ್ಲ ಎಂದಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!