Health Tips: ಮುಖದ ಕಾಂತಿ ಹೆಚ್ಚಾಗಬೇಕಾ…? ಇಲ್ಲಿದೆ ಸುಂದರ ತ್ವಚೆಗೆ ಟಿಪ್ಸ್!
ನ್ಯೂಸ್ ಆ್ಯರೋ : ಹೆಣ್ಣು ಸೌಂದರ್ಯದ ಪ್ರತೀಕ ಎಂಬ ಮಾತು ಎಲ್ಲರಿಗೂ ತಿಳಿದಿರುವ ವಿಷಯ. ಎಲ್ಲರೂ ತಮ್ಮ ತ್ವಚೆಯು ಹೊಳೆಯಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ರಾಸಾಯನಿಕಯುಕ್ತ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ , ತಮ್ಮ ಮುಖ ಕಾಂತಿಯು ಕಳೆದುಕೊಳ್ಳುತ್ತಿದೆ. ಹೊಳೆಯುವ ತ್ವಚೆಯನ್ನು ಪಡೆಯಲು ಅನಗತ್ಯ ಸೌಂದರ್ಯವರ್ಧಕವನ್ನು ಬಳಸುವ ಬದಲು, ನಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿದ್ದರೂ ಎಲ್ಲರ ತ್ವಚೆಗೆ ಹೊಂದಿಕೆಯಾಗುವುದಿಲ್ಲ. ಅದಕ್ಕಾಗಿ ಕೆಲವು ಸೌಂದರ್ಯ ಸಲಹೆಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮುಖದ ಹೊಳಪನ್ನು ಹೆಚ್ಚಿಸುತ್ತದೆ. ಈ ಕೆಳಗೆ ಹೇಳಿರುವ ಅಂಶಗಳನ್ನು ಅನುಸರಿಸುವುದರಿಂದ ನಿಮ್ಮ ತ್ವಚೆ ಚಂದ್ರನಂತೆ ಹೊಳೆಯಲಿದೆ.
1. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ
ಪ್ರತಿನಿತ್ಯ ಸಾಕಷ್ಟು ನೀರು ಕುಡಿಯುವುದರಿಂದ ಆರೋಗ್ಯಕರ ಚರ್ಮ, ಹಸಿವಿನ ನಿಯಂತ್ರಣ ಮಾಡುತ್ತದೆ. ದೇಹದ ಆಂತರಿಕ ಹಾಗೂ ಬಾಹ್ಯ ಸೌಂದರ್ಯ ಎರಡಕ್ಕೂ ಬಹಳ ಮುಖ್ಯ. ಇದರೊಂದಿಗೆ ನೀರಿನಾಂಶ ಇರುವ ಆಹಾರ ಪದಾರ್ಥಗಳ ಸೇವನೆಯಿಂದ ತೇವಯುತ ತ್ವಚೆಯನ್ನು ನೀಡುತ್ತದೆ. ಅಲ್ಲದೇ ಮುಖದಲ್ಲಿರುವ ಸುಕ್ಕಿನ ಕಲೆಯನ್ನು ನಿವಾರಿಸುತ್ತದೆ.
2. ಚೆನ್ನಾಗಿ ನಿದ್ರಿಸಿ.
ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ದಿನದಲ್ಲಿ ಕನಿಷ್ಠ ೭ ರಿಂದ ೮ ಗಂಟೆ ನಿದ್ದೆ ಮಾಡಲೇಬೇಕು. ಇದು ದೇಹ ಹಾಗೂ ಮನಸ್ಸು ಎರಡಕ್ಕೂ ಬಹಳ ಮುಖ್ಯವಾಗಿದೆ. ನಿದ್ದೆಯ ಕೊರತೆಯಿಂದ ಮುಖವು ಕಾಂತಿಯನ್ನು ಕಳೆದುಕೊಳ್ಳುತ್ತದೆ. ಇದು ಮನಸ್ಸಿನ ಚಟುವಟಿಕೆ ಮತ್ತು ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ವಯಸ್ಸಿನ ಲಕ್ಷಣಗಳು ಎದ್ದು ಕಾಣಲು ಇದು ಒಂದು ಮುಖ್ಯ ಕಾರಣವಾಗುತ್ತದೆ. ಆದ್ದರಿಂದ ಪ್ರತಿದಿನ ಗುಣಮಟ್ಟದ ನಿದ್ದೆ ಮಾಡುವುದು ಬಹಳ ಅವಶ್ಯಕವಾಗಿದೆ.
3. ದಿನನಿತ್ಯ ವ್ಯಾಯಾಮ ಮಾಡಿ.
ವ್ಯಾಯಾಮ ಎಂದರೆ ತೂಕ ಇಳಿಸುವುದು ಮಾತ್ರವಲ್ಲದೇ ದೇಹವನ್ನು ಆಕಾರಕ್ಕೆ ತರುವುದರ ಜೊತೆಗೆ ಮುಖದ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಮನಸ್ಸನ್ನು ಸಂತೋಷಪಡಿಸುತ್ತದೆ. ವ್ಯಾಯಾಮದ ಸಮಯದಲ್ಲಿ ದೇಹದಿಂದ ಬೆವರು ಹೊರಹೋಗಿ ತ್ವಚೆಯ ಕೊಳೆ ಹೊರಬರುತ್ತದೆ. ಅಷ್ಟೇ ಅಲ್ಲದೆ ದೇಹ ಸುಸ್ತಾಗುತ್ತದೆ ಮತ್ತು ನಿದ್ದೆ ಬರುವಂತೆ ಮಾಡುತ್ತದೆ. ಇದು ಮುಖದ ತ್ವಚೆಯು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಪ್ರತಿದಿನ ಕೇವಲ ೫ ನಿಮಿಷಗಳ ಕಾಲ ವ್ಯಾಯಾಮ ಮಾಡಿದರೆ, ಸುಕ್ಕುಗಳು ಸಹ ಮಾಯವಾಗುತ್ತವೆ ಮತ್ತು ಮುಖವು ಹೊಳೆಯುತ್ತದೆ.
4. ಮಲಗುವ ಮುನ್ನ ಚೆನ್ನಾಗಿ ಮುಖ ತೊಳೆಯಿರಿ.
ಮುಖಕ್ಕೆ ಹಚ್ಚುವ ಮೇಕಪ್, ಹೊರಗಿನ ಧೂಳಿನ ಕಣಗಳು ಮುಖದ ರಂಧ್ರಗಳನ್ನು ಸೇರುತ್ತವೆ. ಈ ಕೊಳೆ ನಿಮ್ಮ ಚರ್ಮಕ್ಕೆ ಸಾಕಷ್ಟು ಹಾನಿ ಮಾಡುತ್ತದೆ. ಆದ್ದರಿಂದ ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ ನಿದ್ರಿಸಬೇಕು. ಮನೆಗೆ ಬಂದ ತಕ್ಷಣ ಮುಖದ ಮೇಕಪ್ ತೆಗೆದು ಚೆನ್ನಾಗಿ ಮುಖ ತೊಳೆದ ನಂತರ ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ ಮಲಗುವುದು ಉತ್ತಮ.
5. ಹೆಚ್ಚು ಹಸಿ ತರಕಾರಿಯನ್ನು ಸೇವಿಸಿ.
ನಮ್ಮ ದಿನನಿತ್ಯ ಆಹಾರ ಪದ್ಧತಿಯಲ್ಲಿ ತಾಜಾ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದು ನಮ್ಮ ಚರ್ಮಕ್ಕೆ ಪ್ರೋಟೀನ್, ವಿಟಮಿನ್, ಖನಿಜಗಳು ಇತ್ಯಾದಿಗಳನ್ನು ನೀಡುತ್ತದೆ. ಹಸಿ ತರಕಾರಿಗಳಾದ ಕ್ಯಾರೆಟ್, ಸೌತೆಕಾಯಿ ಮತ್ತು ಹಣ್ಣುಗಳಾದ ಸೇಬು, ಕಿತ್ತಳೆ ಇತ್ಯಾದಿಗಳನ್ನು ಕಡ್ಡಾಯವಾಗಿ ಸೇವಿಸಬೇಕು.
ಈ ರೀತಿ ನಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸುವುದರಿಂದ ಕಾಂತಿಯುತ ಮುಖವನ್ನು ಪಡೆಯಲು ಸಾಧ್ಯ.
Leave a Comment