ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್; ಮಸೂದೆ ಅಂಗೀಕರಿಸಿದ ಪಾರ್ಲಿಮೆಂಟ್

S Ocial Media
Spread the love

ನ್ಯೂಸ್ ಆ್ಯರೋ: 16 ವರ್ಷದ ಒಳಗಿನ ಮಕ್ಕಳು ಸಾಮಾಜಿಕ ಜಾಲಾತಾಣಗಳನ್ನು ಬಳಕೆ ಮಾಡುವುದನ್ನು ನಿಷೇಧ ಮಾಡಲಾಗುವುದು ಎಂದು ಆಸ್ಟ್ರೇಲಿಯಾ ಸರ್ಕಾರ ಈ ಮೊದಲು ಹೇಳಿತ್ತು. ಅದರಂತೆ ಇದೀಗ ಸಂಸತ್ತಿನ ಎರಡು ಸದನಗಳಲ್ಲಿಯು ಮಸೂದೆಯನ್ನು ಅಂಗೀಕರಿಸಲಾಗಿದೆ.

ಫೇಸ್​ಬುಕ್, ಟ್ವೀಟರ್, ಇನ್​ಸ್ಟಾ ಸೇರಿದಂತೆ ಇತರೆ ಸೋಶಿಯಲ್ ಮೀಡಿಯಾ ಖಾತೆಗಳನ್ನು 16 ವರ್ಷದ ಒಳಗಿನ ಮಕ್ಕಳು ಹೊಂದುವಂತಿಲ್ಲ. ಸಾಮಾಜಿಕ ಜಾಲಾತಾಣಗಳು ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತಿವೆ. ಇದರಿಂದ ಅವರ ಉತ್ತಮ ಭವಿಷ್ಯ ಮಧ್ಯೆದಲ್ಲೇ ಹಾಳುಗುತ್ತಿದೆ ಎನ್ನಲಾಗಿದೆ. ಹೀಗಾಗಿಯೇ ಆಸ್ಟ್ರೇಲಿಯಾದ ಸರ್ಕಾರ ಹೊಸ ಬಿಲ್ ಅನ್ನು ಪಾರ್ಲಿಮೆಂಟ್​​ನಲ್ಲಿ ಮಂಡಿಸಿತ್ತು.

ಸದ್ಯ ಇದಕ್ಕೆ ಕೆಳಮನೆ ಹಾಗೂ ಮೇಲ್ಮನೆ ಎರಡೂ ಒಪ್ಪಿಗೆ ಸೂಚಿಸಿವೆ. ಕಾನೂನು ಆಗುವುದು ಖಚಿತವಾಗಿದ್ದು ಶೀಘ್ರದಲ್ಲೇ ನಿಯಮಗಳು ಜಾರಿಗೆ ಬರುವ ಸಾಧ್ಯತೆ ಎಂದು ವರದಿಯಾಗಿದೆ. ಒಂದು ವೇಳೆ ಸರ್ಕಾರದ ನಿಯಮ ಮೀರಿ ಖಾತೆ ಹೊಂದಿದರೆ ಅವರಿಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.

ಫೋಷಕರು ಮಕ್ಕಳಿಗೆ ಫೋನ್ ಕೊಡುವುದು ಒಳ್ಳೆಯದಲ್ಲ. ಇದರ ಬಲಿಗೆ ಅವರನ್ನು ಹೊರಗಡೆ ಕರೆದುಕೊಂಡು ಹೋಗಬೇಕು. ಸ್ವಿಮ್ಮಿಂಗ್ ಪೂಲ್, ಕ್ರಿಕೆಟ್ ಆಡುವುದು, ಫುಟ್​ಬಾಲ್, ನೆಟ್​ ಬಾಲ್, ಥ್ರೋ ಬಾಲ್ ಇತರೆ ಆಟಗಳನ್ನು ಆಡಿಸಬೇಕು. ಅವರನ್ನು ಮೈದಾನದಲ್ಲಿ ಹೆಚ್ಚಿನ ಸಮಯ ಕಳೆಯುವಂತೆ ನೀವು ಮಾಡಬೇಕು ಎಂದು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!