ʼದಳಪತಿ 69ʼ ಗೆ ಕನ್ನಡದ ಹೆಮ್ಮೆಯ ಪ್ರೊಡಕ್ಷನ್ ಹೌಸ್; ವಿಜಯ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ನ್ಯೂಸ್ ಆ್ಯರೋ: ಕಾಲಿವುಡ್ ಸ್ಟಾರ್ ಹೀರೋ ದಳಪತಿ ವಿಜಯ್ ಹೊಸ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ದಳಪತಿ ವಿಜಯ್ ಅವರ 69ನೇ ಸಿನಿಮಾಗೆ ಕನ್ನಡದ ಹೆಮ್ಮೆಯ ಪ್ರೊಡಕ್ಷನ್ ಹೌಸ್ KVN ನಿರ್ಮಾಣ ಮಾಡುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಮೊದಲ ತಮಿಳು ಸಿನಿಮಾ ಇದಾಗಿದೆ.
KVN ಪ್ರೊಡಕ್ಷನ್ಸ್ ಸಂಸ್ಥೆಯ ಜೊತೆಗೆ ನಟ ದಳಪತಿ ವಿಜಯ್ ಅವರ 69ನೇ ಸಿನಿಮಾ ತಯಾರಾಗುತ್ತಿದೆ. ಈಗಾಗಲೇ ಈ ಸಿನಿಮಾದ ಅದ್ದೂರಿ ಮುಹೂರ್ತ ಚೆನ್ನೈನಲ್ಲಿ ನಡೆದಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ಕೆ. ನಾರಾಯಣ್ ಅವರು ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ಮಾಡಲು ಜವಾಬ್ದಾರಿ ಹೊತ್ತಿದ್ದಾರೆ.
ದಳಪತಿ ವಿಜಯ್ ಅವರ ವೃತ್ತಿ ಜೀವನದ ಕೊನೆಯ ಸಿನಿಮಾ ಇದು ಅಂತ ಹೇಳಲಾಗ್ತಿದೆ. ರಾಜಕೀಯ ರಂಗ ಪ್ರವೇಶದ ಕಾರಣದಿಂದ ಸಿನಿಮಾದಿಂದ ದೂರ ಉಳಿಯಲು ವಿಜಯ್ ತೀರ್ಮಾನಿಸಿದ್ದಾರೆ. ದಳಪತಿ 69 ಸ್ಟೋರಿಯಲ್ಲೂ ರಾಜಕೀಯ ಐಡಿಯಾಲಜಿ ಇರಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ತಾತ್ಕಾಲಿಕವಾಗಿ ವಿಜಯ್ ಅವರ ಸಿನಿಮಾಗೆ ದಳಪತಿ 69 ಎಂದು ಹೆಸರಿಸಲಾಗಿದೆ.
ಮುಖ್ಯವಾಗಿ ಈ ಸಿನಿಮಾಗಾಗಿ ವಿಜಯ್ ಸುಮಾರು 275 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ. ಈ ದಳಪತಿ 69 ಸಿನಿಮಾವನ್ನು ಹೆಚ್. ವಿನೋತ್ ನಿರ್ದೇಶಿಸುತ್ತಿದ್ದಾರೆ.ಇದೇ ಸಿನಿಮಾದಲ್ಲಿ ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರು ವಿಜಯ್ಗೆ ನಾಯಕಿಯಾಗಿದ್ದಾರೆ. ಬೀಸ್ಟ್ ಬಳಿಕ ಎರಡನೇ ಬಾರಿಗೆ ಈ ಜೋಡಿ ಮತ್ತೆ ಒಂದಾಗುತ್ತಿದೆ.
Leave a Comment