ರಾಮನಾಮ ಜಪಿಸುತ್ತಿರುವ ಶ್ವಾನ; ಕ್ಯೂಟ್‌ ವಿಡಿಯೋ ವೈರಲ್​​

Dog Saying Ram Ram
Spread the love

ನ್ಯೂಸ್ ಆ್ಯರೋ: ಮುದ್ದಾದ ಶ್ವಾನದ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹೌದು. . .ವಿಡಿಯೋದಲ್ಲಿ ಶ್ವಾನ ತನ್ನ ಮಾಲೀಕ ಹೇಳಿಕೊಟ್ಟಂತೆ ರಾಮ್​ ರಾಮ್ ಎಂದು ರಾಮನಾಮವನ್ನು ಜಪಿಸುತ್ತಿರುವುದನ್ನು ಕಾಣಬಹುದು.

“ರಾಮ” ಎನ್ನುವ ಎರಡಕ್ಷರ ಜಪಿಸಿದರೆ ಮನಸ್ಸು ಮತ್ತು ಹೃದಯ ಅಸಾಧಾರಣ ಸಂತೋಷಕ್ಕೆ ಒಳಗಾಗುವುದು. ಜೊತೆಗೆ ಸಾಕಷ್ಟು ಪಾಪಗಳು ತೊಳೆದು ಪುಣ್ಯ ಪ್ರಾಪ್ತಿಯಾಗುವುದು ಎಂಬ ನಂಬಿಕೆಯಿದೆ. ಅಂದರಂತೆ ಮನೆಯ ಹಿರಿಯರು ಮಕ್ಕಳಿಗೆ ರಾಮ ಮಂತ್ರವನ್ನು ಹೇಳಿಕೊಡುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬರು ತಮ್ಮ ಮನೆಯ ಸಾಕು ನಾಯಿ ರಾಮ ನಾಮ ಹೇಳಿಕೊಟ್ಟಿದ್ದಾರೆ. ಸದ್ಯ ಈ ಕುರಿತು ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.


ವೈರಲ್​ ಆಗಿರುವ ವಿಡಿಯೋದಲ್ಲಿ ಮಾಲೀಕ ಹೇಳಿಕೊಟ್ಟ ಹಾಗೇ ಶ್ವಾನ ಶ್ವಾನ ರಾಮ್​ ರಾಮ್​​ ಎಂದು ಹೇಳುತ್ತಿರುವುದನ್ನು ಕಾಣಬಹುದು. @ranvijayT90 ಎಂಬ ಹೆಸರಿನ ಟ್ವಟಿರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​​ ಆಗುತ್ತಿದೆ.

Leave a Comment

Leave a Reply

Your email address will not be published. Required fields are marked *