ಆರ್ಡರ್ ವಿಚಾರಕ್ಕೆ ತಗಾದೆ; ಗ್ರಾಹಕ ಹಾಗೂ ಕೆ.ಎಫ್.ಸಿ ಸಿಬ್ಬಂದಿ ನಡುವೆ ಬಿಗ್ ಫೈಟ್

ನ್ಯೂಸ್ ಆ್ಯರೋ: ಆರ್ಡರ್ ವಿಚಾರವಾಗಿ ಕೆ.ಎಫ್.ಸಿ ಔಟ್‌ಲೆಟ್ ಸಿಬ್ಬಂದಿಗಳು ಮತ್ತು ಗ್ರಾಹಕನ ನಡುವೆ ಬಿಗ್ ಫೈಟ್ ಏರ್ಪಟ್ಟಿದ್ದು, ಈ ಕೆ.ಎಫ್.ಸಿ ಫೈಟ್ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಕೇರಳದಲ್ಲಿ ನಡೆದಿದ್ದು ಫುಡ್ ಆರ್ಡರ್ ವಿಚಾರಕ್ಕೆ ಕೆ.ಎಫ್.ಸಿ ಔಟ್‌ಲೆಟ್ ಸಿಬ್ಬಂದಿಗಳು ಮತ್ತು ಗ್ರಾಹಕನ ನಡುವೆ ಮಾರಾಮಾರಿ ನಡೆದಿದೆ. ವಾಗ್ವಾದಲ್ಲಿ ಆರಂಭಗೊಂಡ ಈ ಜಗಳ ದೈಹಿಕ ಹಲ್ಲೆಯವರೆಗೂ ಹೋಗಿದೆ.
ಹೌದು. . gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಗ್ರಾಹಕ ಹಾಗೂ ಕೆ.ಎಫ್.ಸಿ ಔಟ್‌ಲೆಟ್ ಸಿಬ್ಬಂದಿಗಳ ನಡುವೆ ಘೋರ ಜಗಳ ನಡೆಯುವ ದೃಶ್ಯವನ್ನು ಕಾಣಬಹುದು. ಗ್ರಾಹಕ ಕೋಪಗೊಂಡು ಅಲ್ಲಿನ ಸಿಬ್ಬಂದಿಯೋರ್ವನ ಮೇಲೆ ಕೈ ಮಾಡಲು ಬಂದ ಸಂದರ್ಭದಲ್ಲಿ ಸಿಬ್ಬಂದಿಗಳೆಲ್ಲರೂ ಜೊತೆ ಸೇರಿ ತಮ್ಮ ಸಹದ್ಯೋಗಿಯ ಮೇಲೆ ಕೈ ಮಾಡಲು ಬಂದ ಗ್ರಾಹಕನಿಗೆ ಸಿಬ್ಬಂದಿಗಳೆಲ್ಲಾ ಸೇರಿ ಸರಿಯಾಗಿ ಗೂಸಾ ಕೊಟ್ಟಿದ್ದಾರೆ.
ಅಕ್ಟೋಬರ್ 2 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
Leave a Comment