Health Tips: ನಿಮಗೂ ಸ್ಲಿಮ್ ಆಗ್ಬೇಕು ಅಂತ ಆಸೆ ಇದ್ಯಾ…? ಹಾಗಾದರೆ ಮಲಗುವ ಮುನ್ನ ಇದನ್ನು ಕುಡಿಯಿರಿ…..

20240905 155156
Spread the love

ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೊರಗಡೆ ಸಿಗುವ ಜಂಕ್ ಫುಡ್ ಮತ್ತು ಎಣ್ಣೆ ಖಾದ್ಯಗಳು ದೇಹದ ತೂಕವನ್ನು ದಿನೇ ದಿನೇ ಹೆಚ್ಚಿಸುತ್ತದೆ.

ಕೆಲವರಂತೂ ದಿನ ಇಡೀ ಏನಾದ್ರೂ ತಿಂತಾನೆ ಇರ್ತಾರೆ. ಖಾದ್ಯ ಪ್ರಿಯರಿಗಂತು ಬಾಯಿ ಚಪಲನೂ ನಿಲ್ಲೋದಿಲ್ಲ, ಅತ್ತ ಸಣ್ಣನೂ ಆಗುವುದಿಲ್ಲ ಅಂತ ಚಿಂತೆಯಲ್ಲೇ ಕುಳಿತಿರುತ್ತಾರೆ. ಇಂಥವರಿಗೆ ಇಲ್ಲಿದೆ ಸುಲಭೋಪಾಯ….

ನಿಮ್ಮ ತೂಕ ಇಳಿಸಲು ಕೆಲವೊಂದು ಪಾನೀಯಗಳು ಸಹಾಯ ಮಾಡುತ್ತದೆ. ಈ ಪಾನೀಯಗಳನ್ನೂ ರಾತ್ರಿ ಮಲಗುವ ಮುನ್ನ ಕುಡಿಯಬೇಕು.

ಬಿಸಿ ನೀರಿನೊಂದಿಗೆ ನಿಂಬೆರಸ ಸೇರಿಸಿ ಕುಡಿಯಿರಿ
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಇದು ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ.

ಅರಿಶಿಣ ನೀರು ಕುಡಿಯಿರಿ
ಅರಿಶಿಣ ನೀರು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಊಟದ ನಂತರ ಅರಿಶಿನ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯು ಸುಧಾರಣೆಯಾಗುತ್ತದೆ.

ಗ್ರೀನ್ ಟೀ ಕುಡಿಯಿರಿ
ಈ ಗ್ರೀನ್ ಟೀ ಆಧುನಿಕ ಜನರಿಗೆ ಚಿರಪರಿಚಿತ. ಇತ್ತೀಚೆಗಂತೂ ಎಲ್ಲರೂ ಈ ಗ್ರೀನ್ ಟೀಯನ್ನೇ ಅವಲಂಬಿಸಿಕೊಂಡಿದ್ದಾರೆ. ರಾತ್ರಿ ಹೊತ್ತು ಈ ಗ್ರೀನ್ ಟೀ ಕುಡಿಯುವುದರಿಂದ ನಿಮ್ಮ ದೇಹದಲ್ಲಿರುವ ಕೊಬ್ಬಿನಾಂಶವನ್ನು ಕರಗಿಸುತ್ತದೆ.

20240905 1552368802352659508410873

ನಿಂಬೆ-ಶುಂಠಿ ಟೀ ಕುಡಿಯಿರಿ
ನಿಂಬೆ ಮತ್ತು ಶುಂಠಿ ಟೀ ಅತ್ಯುತ್ತಮ ಗಿಡಮೂಲಿಕಾ ಪಾನೀಯವಾಗಿದೆ. ಇದು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಹಸಿವನ್ನು ನಿಯಂತ್ರಿಸುವ ಉತ್ತಮ ಗುಣವನ್ನು ಹೊಂದಿದೆ.

ಈ ಮೇಲ್ಕಂಡ ಪಾನೀಯಗಳನ್ನ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ನಿಮ್ಮ ದೇಹದಲ್ಲಿರುವ ಕೊಬ್ಬು ಕರಗುತ್ತದೆ. ಇದರಿಂದ ನೀವು ಸುಲಭವಾಗಿ ಸ್ಲಿಮ್ ಮತ್ತು ಫಿಟ್ ಆಗಿ ಕಾಣುತ್ತೀರಿ.

Leave a Comment

Leave a Reply

Your email address will not be published. Required fields are marked *

error: Content is protected !!