ಪ್ರಧಾನಿ ಮೋದಿ ಸಿಂಗಾಪುರ ಪ್ರವಾಸ; ನಾಲ್ಕು ಒಪ್ಪಂದಕ್ಕೆ ಸಹಿ
ನ್ಯೂಸ್ ಆ್ಯರೋ : ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಲ್ಲಿನ ಪ್ರಧಾನಿ ಲಾರೆನ್ಸ್ ವಾಂಗ್ ಅವರನ್ನು ಭೇಟಿಯಾಗಿದ್ದಾರೆ.
ವಾಂಗ್ ಅವರ ಆಹ್ವಾನದ ಮೇರೆಗೆ ಸಿಂಗಾಪುರಕ್ಕೆ ತೆರಳಿರುವ ಪ್ರಧಾನಿ ಮೋದಿ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧ್ಯವದ ಕುರಿತು ಚರ್ಚೆ ನಡೆಸಿದ್ದಾರೆ. ಚರ್ಚೆಯ ಬಳಿಕ ಉಭಯ ರಾಷ್ಟ್ರದ ಪ್ರಧಾನಿಗಳು ನಾಲ್ಕು ಒಪ್ಪಂದಕ್ಕೆ ಸಹಿ ಹಾಕಿದರು.
ಈ ಮಾತುಕತೆಗೂ ಮುನ್ನ ಸಿಂಗಾಪುರ ಸಂಸತ್ ಭವನದಲ್ಲಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಮುಂದೆ ಪ್ರಧಾನಿ ಮೋದಿ ಅಲ್ಲಿನ ಸಂದರ್ಶಕರ ಪುಸ್ತಕಕ್ಕೆ ಸಹಿ ನೀಡಿ, ಅವರು ನೀಡಿದ ಕೇಸರಿ ಶಾಲುಗಳನ್ನೂ ಪಡೆದುಕೊಂಡರು.
ವಾಂಗ್ ಸಿಂಗಾಪುರ ಪ್ರಧಾನಿಯಾದ ಬಳಿಕ ಇದೇ ಮೊದಲು ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಉಭಯ ರಾಷ್ಟ್ರಗಳ ಸಭೆ ನಡೆಸಿರುವುದು. ಈ ಭೇಟಿಯು ಭಾರತ ಹಾಗೂ ಸಿಂಗಾಪುರದ ಸ್ನೇಹ ಸಂಬಂಧವನ್ನು ಹೆಚ್ಚಾಗಿಸಲಿದೆ ಎಂದು ಮೂಲಗಳು ತಿಳಿಸಿವೆ.
Leave a Comment