ಅದೇ ಇಡ್ಲಿ, ದೋಸೆ, ಚಿತ್ರಾನ್ನ ತಿಂದು ಬೇಜಾರ್ ಆಗಿದ್ಯಾ? ಹಾಗಾದ್ರೆ ಈ ಎಲೆಕೋಸಿನ ಪಲಾವ್ ಒಮ್ಮೆ ಟ್ರೈ ಮಾಡಿ

ಅದೇ ಇಡ್ಲಿ, ದೋಸೆ, ಚಿತ್ರಾನ್ನ ತಿಂದು ಬೇಜಾರ್ ಆಗಿದ್ಯಾ? ಹಾಗಾದ್ರೆ ಈ ಎಲೆಕೋಸಿನ ಪಲಾವ್ ಒಮ್ಮೆ ಟ್ರೈ ಮಾಡಿ

ನಿತ್ಯ ಬೆಳಗಿನ ತಿಂಡಿಗೆ ಏನ್ ಮಾಡೋದು ಅಂತ ಯೋಚನೆ ಮಾಡ್ತಿದ್ದಿರಾ? ಮನೆಯವರಿಗೆಲ್ಲಾ ಅದೇ ಇಡ್ಲಿ, ದೋಸೆ, ಚಿತ್ರಾನ್ನ ತಿಂದು ಬೇಜಾರ್ ಆಗಿದ್ಯಾ? ಹಾಗಾದ್ರೆ ಈ ಎಲೆಕೋಸಿನ ಪಲಾವ್ ಒಮ್ಮೆ ಟ್ರೈ ಮಾಡಿ, ಎಲೆಕೋಸು ಬ್ರಸ್ಸಿಕಾ ಕುಟುಂಬ ವರ್ಗಕ್ಕೆ ಸೇರಿರುವ ತರಕಾರಿಯಾಗಿದ್ದು ತಂಪಿನ ಹವಾಮಾನ ಇದರ ಕೃಷಿಗೆ ತಕ್ಕುದಾದುದು. ಎಲೆಗಳಿಂದ ಸಮೃದ್ಧವಾಗಿರುವ ತರಕಾರಿಯಾಗಿದ್ದು ಇದು ವಿಟಮಿನ್ ಕೆ, ವಿಟಮಿನ್ ಸಿ ಮತ್ತು ಕೊಬ್ಬನ್ನು ಕರಗಿಸುವ ಅಂಶಗಳನ್ನು ಒಳಗೊಂಡಿದೆ. ಇದು ವೈದ್ಯಕೀಯ ಅಂಶಗಳನ್ನು ಹೇರಳವಾಗಿ ಒಳಗೊಂಡಿದ್ದು ನ್ಯೂಟ್ರಿಶಿಯಸ್ ಅಂಶಗಳಿಂದ ಸಮೃದ್ಧ ತರಕಾರಿ ಎಂದೆನಿಸಿದೆ.

ಪಲಾವ್‌ಗೆ ಬೇಕಾಗುವ ಪದಾರ್ಥಗಳು:

  • ಅಕ್ಕಿ – 1 ಕಪ್
  • ಎಲೆ ಕೋಸು- 250 ಗ್ರಾಂ
  • ಈರುಳ್ಳಿ – 4 (ಸಣ್ಣಗೆ ಕತ್ತರಿಸಿದಂತಹುದು)
  • ಎಣ್ಣೆ – 1/2 ಕಪ್
  • ಉಪ್ಪು- ರುಚಿಗೆ ತಕ್ಕಷ್ಟು
  • ಕಪ್ ತೆಂಗಿನ ತುರಿ – 1/2 ಕಪ್
  • ಹುರಿಗಡಲೆ – 4 ಚಮಚ
  • ಮೆಣಸಿನಕಾಯಿ – 5 – 6
  • ಸ್ವಲ್ಪ ಶುಂಠಿ
  • ಕೊತ್ತಂಬರಿ – 1 ಚಮಚ
  • ಕರಿಬೇವು- 1 ಚಮಚ
  • ಸಾಸಿವೆ – 1 ಚಮಚ
  • ಕಡಲೆ ಬೇಳೆ – 1 ಚಮಚ
  • ಉದ್ದಿನ ಬೇಳೆ – 1 ಚಮಚ
  • ಜೀರಿಗೆ – 1/2 ಚಮಚ
  • ಗೋಡಂಬಿ – 7-8

ಮಾಡುವ ವಿಧಾನ

  • ಮೊದಲಿಗೆ ಅನ್ನವನ್ನು ಉದುರುದುರಾಗಿ ಮಾಡಿಟ್ಟುಕೊಂಡು ಪೂರ್ಣ ತಣ್ಣಗಾಗಲು ಬಿಡಬೇಕು
  • ಇನ್ನು ಹಸಿರು ಮೆಣಸಿನಕಾಯಿ, ಶುಂಠಿ, ತೆಂಗಿನ ತುರಿ, ಹುರಿಗಡಲೆಯನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಬೇಕು.
  • ಪಾತ್ರೆಯೊಂದರಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಜೀರಿಗೆಯನ್ನು ಹಾಕಿ ಹುರಿಯಿರಿ
  • ಕತ್ತರಿಸಿದ ಈರುಳ್ಳಿಯನ್ನು ಬೆರೆಸಿ ಗರಿ ಗರಿಯಾಗುವಂತೆ ಹುರಿಯಬೇಕು.
  • ನಂತರ ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಂಡಿದ್ದ ಎಲೆ ಕೋಸನ್ನು ಹಾಕಿ ಬೇಯುವವರೆಗು ಹುರಿಯಿರಿ.
  • ತದನಂತರ ರುಬ್ಬಿಕೊಂಡ ಮಸಾಲೆಯನ್ನು ಇದಕ್ಕೆ ಬೆರೆಸಿ 10 ನಿಮಿಷ ಸಣ್ಣಗಿನ ಉರಿಯಲ್ಲಿ ಹುರಿಯಿರಿ
  • ಈಗ ಅನ್ನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ 5 ನಿಮಿಷ ಹುರಿಯಬೇಕು
  • ಕೊನೆಯಲ್ಲಿ ಕೊತ್ತಂಬರಿ, ಕರಿಬೇವು ಮತ್ತು ಹುರಿದ ಗೋಡಂಬಿಯನ್ನು ಅನ್ನದ ಮೇಲೆ ಉದುರಿಸಿದರೆ ಎಲೆಕೋಸಿನ ಪಲಾವ್ ಬ್ರೇಕ್ ಫಾಸ್ಟ್ ಗೆ ರೆಡಿಯಾಗಿರುತ್ತೆ

ಎಲೆಕೋಸಿನ ಪಲಾವ್ಗೆ ಮೊಸರು ಬಜ್ಜಿ

ಪಲಾವ್ ರಾಯ್ತ ಇಲ್ಲ ಎಂದ್ರೆ ಹೇಗೆ ಹೇಳಿ, ಮೊಸರು ಅರ್ಧ ಲೀಟರ್ ತೆಗೆದುಕೊಳ್ಳಿ , 2 ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಬಳಿಕ ಸ್ವಲ್ಪ ಕೊತ್ತಬರಿ ಸೊಪ್ಪನ್ನು ತೆಗೆದುಕೊಳ್ಳಿ ಒಂದು ಬಟ್ಟಲಿ ಮೊಸರು, ಈರುಳ್ಳಿ, ಕೊತ್ತಂಬರಿ, ಹಾಗೂ ಉಪ್ಪು ಹಾಕಿದ್ರೆ ಸಿಂಪಲ್ ರಾಯ್ತಾ ರೆಡಿಯಾಗುತ್ತೆ

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *