
ನೀವು ಭಾನುವಾರ ದಿನ ಹುಟ್ಟಿದವರಾಗಿದ್ದರೆ ನಿಮ್ಮ ಸ್ವಭಾವ ಹೀಗೆ ಇರುತ್ತಂತೆ..!…
- ಧಾರ್ಮಿಕ
- November 5, 2023
- No Comment
- 76
ವ್ಯಕ್ತಿಯ ಭವಿಷ್ಯವನ್ನು ಅವರು ಹುಟ್ಟಿದ ದಿನಾಂಕ, ವಾರ, ತಿಥಿ ಮೇಲೆ ವಿಶ್ಲೇಷಣೆ ನಡೆಸಲಾಗುವುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ದಿನಗಳಂದು ಹುಟ್ಟಿದವರ ಗುಣ ಸ್ವಭಾವ ಹೀಗಿರಲಿದೆ ಎಂಬ ವಿಶ್ಲೇಷಣೆ ಕೂಡ ನಡೆಸಲಾಗುವುದು. ಅದರಂತೆ ಭಾನುವಾರ ಹುಟ್ಟಿದವರ ಹೀಗಿರುತ್ತಾರೆ ಎಂಬ ಕುರಿತು ಇಲ್ಲಿ ತಿಳಿಸಲಾಗಿದೆ.
-ಭಾನುವಾರದಂದು ಜನಿಸಿದವರು ಜೀವನ ತುಂಬಾ ಚೆನ್ನಾಗಿರುತ್ತದೆ. ಇವರು ಪ್ರಪಂಚದಾದ್ಯಂತ ಪ್ರಸಿದ್ಧಿಯಾಗುತ್ತಾರೆ. ಕಷ್ಟಕ್ಕಿಂತ ಉತ್ತಮ ಫಲಿತಾಂಶ ಪಡೆಯುತ್ತಾರೆ. ವಿಶೇಷವಾಗಿ ಅವರು ತಮ್ಮ ಸ್ವಂತ ಪ್ರತಿಭೆಯಿಂದ ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ಒಬ್ಬರ ಕೆಳಗೆ ವಾಸಿಸಲು ಇಷ್ಟಪಡುವುದಿಲ್ಲ. ಭಾನುವಾರ ಜನಿಸಿದವರು ಯಶಸ್ಸು ಮತ್ತು ವೈಫಲ್ಯವನ್ನು ಸಮಾನವಾಗಿ ತೆಗೆದುಕೊಳ್ಳುತ್ತಾರೆ.
- ಈ ದಿನ ಹುಟ್ಟಿದವರು ರಾಜಕೀಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ರಫ್ತು ಮತ್ತು ಆಮದು ವ್ಯವಹಾರದಲ್ಲಿ ಉತ್ತಮ ಯಶಸ್ಸು ಪಡೆಯುತ್ತಾರೆ. ಹಣ ಚೆನ್ನಾಗಿ ಗಳಿಸುತ್ತಾರೆ. ಹೆಚ್ಚು ಮಾತನಾಡುವವರಾಗಿರುತ್ತಾರೆ. ಏಕೆಂದರೆ ಅವರ ಮೇಲೆ ಸೂರ್ಯನ ಪ್ರಭಾವ ಹೆಚ್ಚಾಗಿರುತ್ತದೆ. ಅವರು ಪ್ರತಿದಿನ ಆನಂದಿಸುತ್ತಾರೆ.
ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಗೆಳೆಯರು ಎಂದರೆ ಇವರಿಗೆ ಜೀವಕ್ಕಿಂತ ಮಿಗಿಲಾಗಿರುತ್ತಾರೆ. ನಾಳೆ ಏನು ಮಾಡಬೇಕೆಂದು ಇಂದು ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. . ಹಳದಿ ಇವರಿಗೆ ಅದೃಷ್ಟ ಬಣ್ಣವಾದರೆ, ಅದೃಷ್ಟ ಸಂಖ್ಯೆ 1. - ಈ ದಿನ ಜನಿಸಿದವರು ಶೇ.70ರಷ್ಟು ಮಂದಿಗೆ ಸರ್ಕಾರಿ ಉದ್ಯೋಗಾವಕಾಶಗಳಿವೆ. ಅವರು ವೃತ್ತಿಯಲ್ಲಿ ಮೇಲಿರಲು ಬಯಸುತ್ತಾರೆ. ಜೀವನದಲ್ಲಿ ಗುರಿಯಲ್ಲಿ ಏನು ಸಾಧನೆ ಮಾಡಲಾಗುವುದಿಲ್ಲ ಎಂಬ ಮಾತು ಇವರಿಂದ ಬರುವುದಿಲ್ಲ.
- ಈ ದಿನ ಜನಿಸಿದರು ರಿಯಲ್ ಎಸ್ಟೇಟ್‌ನಲ್ಲಿ ಯಶಸ್ಸು ಕಾಣುತ್ತಾರೆ. ಧನಾತ್ಮಕ ಚಿಂತನೆ ಇವರಲ್ಲಿ ಹೆಚ್ಚಾಗಿರುತ್ತದೆ. ಹಾಗಾಗಿ ಆರೋಗ್ಯ ಸಮಸ್ಯೆ ಇರುವುದಿಲ್ಲ.