
Bangalore : ಮನೆಗೆ ನುಗ್ಗಿ ಹಾಡಹಗಲೇ ಸರ್ಕಾರಿ ಮಹಿಳಾ ಅಧಿಕಾರಿಯ ಬರ್ಬರ ಹತ್ಯೆ – ಪಕ್ಕಾ ಪ್ಲ್ಯಾನ್ ಮಾಡಿ ಕೊಂದು ಪರಾರಿಯಾದ ಹಂತಕರು..!!
- ಕ್ರೈಂ ಸುದ್ದಿ
- November 5, 2023
- No Comment
- 107
ನ್ಯೂಸ್ ಆ್ಯರೋ : ಒಂಟಿಯಾಗಿ ವಾಸವಾಗಿದ್ದ ಗಣಿ-ಭೂ ವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಒಬ್ಬರನ್ನು ಭೀಕರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಟಿಯಾಗಿ ನೆಲೆಸಿದ್ದ ಗಣಿ-ಭೂ ವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಪ್ರತಿಮಾ (37) ಎಂಬವರನ್ನು ಚಾಕುವಿನಿಂದ ಇರಿದು ಕೊಂದ ಬಳಿಕ ಹಂತಕರು ಪರಾರಿಯಾಗಿದ್ದಾರೆ.
ಮನೆಯಲ್ಲಿ ಪ್ರತಿಮಾ ಅವರು ಒಬ್ಬರೇ ಇದ್ದ ವೇಳೆ ಹತ್ಯೆ ಮಾಡಲಾಗಿದ್ದು, ಮನೆಯ ಒಳಗಿ ನುಗ್ಗಿದ ಹಂತಕರು ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಡೆಪ್ಯುಟಿ ಡೈರಕ್ಟರ್ ಆಗಿದ್ದ ಪ್ರತಿಮಾ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ಪ್ರತಿಮಾ ಅವರು ತೆಗೆದಿದ್ದಾರೆ. ಈ ವೇಳೆ ಒಳ ನುಗ್ಗಿದ ಹಂತಕರು ಚಾಕುವಿನಿಂದ ಇರಿದಿದ್ದಾರೆ. ಆದರೆ ಈ ಹತ್ಯೆ ಯಾವ ಕಾರಣಕ್ಕೆ ನಡೆದಿದೆ ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ವೈಯಕ್ತಿಕ ಕಾರಣಕ್ಕೆ ಆಗಿದೆಯೋ ಅಥವಾ ಬೇರೆ ವಿಚಾರಕ್ಕೆ ಮರ್ಡರ್ ಆಗಿದೆಯೋ ಎಂಬ ಬಗ್ಗೆ ತನಿಖೆಯಿಂದ ಸತ್ಯ ಹೊರಬರಬೇಕಿದೆ.
ಪತಿಯಿಂದ ವಿಚ್ಚೇದನ ಪಡೆದು ಒಂಟಿಯಾಗಿ ಪ್ರತಿಮಾ ವಾಸ ಮಾಡುತ್ತಿದ್ದರು. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಪತಿ ಮತ್ತು ಮಗ ನೆಲೆಸಿದ್ದಾರೆ. ಪ್ರೀ ಪ್ಲ್ಯಾನ್ ಮಾಡಿ ಪ್ರತಿಮಾ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ವೈಯಕ್ತಿಕ ಕಾರಣಕ್ಕಾಗಿ ಏನಾದರೂ ಕೊಲೆ ನಡೆದಿರಬಹುದಾ ಎಂಬ ಆಯಾಮದಲ್ಲಿಯೂ ತನಿಖೆ ಮುಂದುವರಿಸಲಾಗಿದೆ.