ವೈರಲ್ ಆಯ್ತು ಸ್ಕೂಟರ್ ನಲ್ಲಿ ಮೊಸಳೆ ಹೊತ್ತೊಯ್ದ ವಿಡಿಯೋ; ಯುವಕರ ಸಾಹಸಕ್ಕೆ ಮೆಚ್ಚುಗೆ
ನ್ಯೂಸ್ ಆ್ಯರೋ : ರಾಜಸ್ಥಾನದ ವಡೋದರ ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಸಮಯದಲ್ಲಿ 40ಕ್ಕೂ ಹೆಚ್ಚು ಮೊಸಳೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದವು.
ಜನವಸತಿ ಪ್ರದೇಶಗಳಿಗೆ ನುಗ್ಗಿದ್ದ ಮೊಸಳೆಗಳನ್ನು ಹಾಗೂ ಇತರೆ ಪ್ರಾಣಿಗಳನ್ನು ರಕ್ಷಿಸುವ ಕಾರ್ಯವು ಅರಣ್ಯ ಇಲಾಖೆ ಹಾಗೂ ಎನ್‌ಜಿಒ ತಂಡಗಳಿಂದ ನಡೆಯುತ್ತಿದೆ.
ರಕ್ಷಣೆ ತಂಡದಲ್ಲಿದ್ದ ಸಂದೀಪ್ ಠಾಕೂರ್ ಮತ್ತು ರಾಜ್ ಭಾವಸರ್ ಎಂದು ಗುರುತಿಸಲಾದ ಇಬ್ಬರು ಯುವಕರು ಸ್ಕೂಟರ್ ನಲ್ಲಿ ಮೊಸಳೆಯನ್ನು ಹೊತ್ತೊಯ್ದ ವಿಡಿಯೋ ಸಖತ್ ವೈರಲ್ ಆಗಿದೆ. ಯುವಕರ ಸಾಹಸಕ್ಕೆ ಸಾರ್ವಜನಿಕರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದಾದ ಬಳಿಕ ಅವರು ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿ ಹಸ್ತಾಂತರಿಸಿದ್ದಾರೆ.
ಈ ವಿಷಯದ ಕುರಿತು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಗ್ನಿಶ್ವರ್ ವ್ಯಾಸ್ ಮಾತನಾಡಿ, ವಡೋದರದ ವಿಶ್ವಾಮಿತ್ರಿ ನದಿಯು ಮೊಸಳೆಗಳಿಗೆ ನೆಲೆಯಾಗಿದ್ದು, ಪ್ರವಾಹದಿಂದಾಗಿ ಅನೇಕ ಮೊಸಳೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದ್ದವು. ಈವರೆಗೆ 33 ಮೊಸಳೆಗಳನ್ನು ರಕ್ಷಿಸಿ, ವಾಪಸ್ ನದಿಗೆ ಬಿಡಲಾಗಿದೆ. ಇನ್ನುಳಿದ 5 ಮೊಸಳೆಗಳು ಪುನರ್ವಸತಿ ಕೇಂದ್ರದಲ್ಲಿದೆ. ಪ್ರವಾಹದಂತಹ ಸಮಯದಲ್ಲಿ ಎರಡು ಮೊಸಳೆಗಳು ಆಕಸ್ಮಿಕವಾಗಿ ಮೃತಪಟ್ಟಿವೆ ಎಂದು ಹೇಳಿದರು.
Leave a Comment