20 ಸಾವಿರ ಜನಕ್ಕೆ ಊಟ ಹಾಕಿಸಿದ ಭಿಕ್ಷುಕ; 1.25 ಕೋಟಿ ರೂಪಾಯಿ ಖರ್ಚು ಮಾಡಿ ಸಮಾರಂಭ
ನ್ಯೂಸ್ ಆ್ಯರೋ: ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಭೀಕ್ಷುಕರನ್ನೆ ಸಾಕುತ್ತಿರುವ ಈ ಲೂಟಿಕೊರರ ದೇಶವು ಹಲವು ಭಾರಿ ಅಂತರರಾಷ್ಟ್ರೀಯ ಸಂಸ್ಥೆಗಳು ಅಥವಾ ಇತರೆ ದೇಶಗಳ ಬಳಿ ಕೈ ಚಾಚುವುದು ಸರ್ವೆ ಸಾಮಾನ್ಯವಾಗಿ ಕಂಡುಬರುತ್ತದೆ. ಇಂತಹ ಬಡ ಪಾಕಿಸ್ತಾನದಲ್ಲಿ ಭಿಕ್ಷುಕನೂ ಕೋಟ್ಯಾಧಿಪತಿ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ…
ಅಷ್ಟೇ ಅಲ್ಲ ಆ ಭೀಕ್ಷುಕ 20,000 ಜನರಿಗೆ ಯಾವ ಕೋಟ್ಯಾಧಿಪತಿಯೂ ಕೊಡದಂತಹ ರಾಜ ಔತಣವನ್ನು ನೀಡಿದ್ದಾನೆ… ಅದಕ್ಕಾಗಿ ಭಿಕ್ಷುಕ ಬರೋಬ್ಬರಿ 1.25 ಕೋಟಿ ಖರ್ಚು ಮಾಡಿದ್ದಾನೆ. ವಾಸ್ತವವಾಗಿ, ಈ ಸಂಪೂರ್ಣ ಪ್ರಕರಣವು ಪಾಕಿಸ್ತಾನದ ಗುಜ್ರಾವಾಲಾ ಪ್ರದೇಶದಲ್ಲಿ ನಡೆದಿದ್ದು, ಅಲ್ಲಿ ಭಿಕ್ಷುಕ ಕುಟುಂಬವು ನೀಡಿದ ರಾಜಮನೆತನದ ಹಬ್ಬವು ಪ್ರಪಂಚದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಈ ಭಿಕ್ಷುಕ ಕುಟುಂಬವು ಗುಜ್ರಾನ್‌ವಾಲಾದ ರಾಹ್ವಾಲಿ ರೈಲು ನಿಲ್ದಾಣದ ಬಳಿ ವಾಸಿಸುತ್ತಿದೆ. ಅವರ ಅಜ್ಜಿಯ ಮರಣದ ನಂತರ, ಅವರು 40 ನೇ ದಿನದಂದು ಈ ಹಬ್ಬವನ್ನು ನಡೆಸಿದರು. ಇದಕ್ಕಾಗಿ ಅವನು ಪಂಜಾಬ್ ಪ್ರಾಂತ್ಯದಾದ್ಯಂತ ಸಾವಿರಾರು ಜನರು ಸೇರಿದ್ದರು.
ಅಂದಾಜು ಸುಮಾರು 20,000 ಜನರ ಈ ಹಬ್ಬದಲ್ಲಿ ಸೇರಿದ್ದರು, ಅದಕ್ಕಾಗಿ ಆತ ಬರೋಬ್ಬರಿ 1.25 ಕೋಟಿಗೂ ಹೆಚ್ಚು ಪಾಕಿಸ್ತಾನಿ ರೂಪಾಯಿ ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 38 ಲಕ್ಷ ರೂಪಾಯಿ ಖರ್ಚಾಗಿದೆ. ಅಷ್ಟೇ ಅಲ್ಲ, ಆ ಕುಟುಂಬವು ಅತಿಥಿಗಳನ್ನು ಭೋಜನದ ಸ್ಥಳಕ್ಕೆ ಸಾಗಿಸಲು ಸುಮಾರು 2,000 ವಾಹನಗಳನ್ನು ಸಹ ನಿಯೋಜಿಸಲಾಗಿತ್ತು ಎಂದು.
ಅಷ್ಟೇ ಅಲ್ಲ ಆ ಕುಟುಂಬವು ರಾಜಮನೆತನದಂತೆ ಭಾರೀ ಹಬ್ಬದ ಮೆನು ಸಿದ್ದಪಡಿಸಿತ್ತು. ಹೌದು, ಹಬ್ಬದ ಮೆನುವಿನಿಂದ ನೀವು ಕೂಡ ಮಾರುಹೋಗುತ್ತೀರಿ. ಭಿಕ್ಷುಕ ಕುಟುಂಬದವರು ಮಧ್ಯಾಹ್ನದ ಊಟದಲ್ಲಿ ಅತಿಥಿಗಳಿಗಾಗಿ ಸಿರಿ ಪಾವ್, ಮುರಬ್ಬ ಮತ್ತು ಮಾಂಸದ ಹಲವಾರು ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಿದರು. ಊಟದಲ್ಲಿ ಅತಿಥಿಗಳಿಗಾಗಿ ಮಟನ್, ನಾನ್ ಮಟರ್ ಗಂಜ್ (ಸಿಹಿ ಅನ್ನ) ಮತ್ತು ವಿವಿಧ ಸಿಹಿತಿಂಡಿಗಳನ್ನು ಏರ್ಪಡಿಸಲಾಗಿತ್ತು. ಇದಕ್ಕಾಗಿ ಈ ಭೀಕ್ಷುಕ ರಾಜಮನೆತನವು ಬರೋಬ್ಬರಿ 250 ಮೇಕೆಗಳನ್ನು ಬಲಿ ನೀಡಲಾಯಿತು ಎಂದು ಹೇಳಲಾಗುತ್ತದೆ.
Leave a Comment