ಫುಟ್ಬಾಲ್ ದಿಗ್ಗಜ ಲಿಯೊನೆಲ್‌ ಮೆಸ್ಸಿಗೆ ಹೆಚ್ಚಿದ ಜೀವ ಬೆದರಿಕೆ – ಮೆಸ್ಸಿಗೆ ಸಿಕ್ಕ ಹೊಸ ಬಾಡಿಗಾರ್ಡ್ ಅದೆಷ್ಟು ಬಲಿಷ್ಠ ಗೊತ್ತಾ..!?

ಫುಟ್ಬಾಲ್ ದಿಗ್ಗಜ ಲಿಯೊನೆಲ್‌ ಮೆಸ್ಸಿಗೆ ಹೆಚ್ಚಿದ ಜೀವ ಬೆದರಿಕೆ – ಮೆಸ್ಸಿಗೆ ಸಿಕ್ಕ ಹೊಸ ಬಾಡಿಗಾರ್ಡ್ ಅದೆಷ್ಟು ಬಲಿಷ್ಠ ಗೊತ್ತಾ..!?

ನ್ಯೂಸ್‌ ಆ್ಯರೋ : ಕಳೆದ ಬಾರಿ ಅರ್ಜೆಂಟೀನಾ ತಂಡಕ್ಕೆ ಫಿಫಾ ವಿಶ್ವಕಪ್ ಗೆದ್ದುಕೊಟ್ಟ ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಲಿಯೊನೆಲ್ ಮೆಸ್ಸಿ ಅವರು ಮಾಜಿ ಸೈನಿಕನನ್ನು ತಮ್ಮ ಬಾಡಿಗಾರ್ಡ್‌ ಆಗಿ ನೇಮಿಸುವ ಮೂಲಕ ಸುದ್ದಿಯಾಗಿದ್ದಾರೆ.

ಜೀವ ಬೆದರಿಕೆ ಕರೆಗಳು ಹೆಚ್ಚಾಗಿದ್ದರಿಂದ ಲಿಯೊನೆಲ್ ಮೆಸ್ಸಿ ಅವರು ತಮ್ಮ ರಕ್ಷಣೆಗಾಗಿ ಎಂಎಂಎ ಫೈಟರ್‌ ಹಾಗೂ ಮಾಜಿ ಸೈನಿಕನನ್ನು ತಮ್ಮ ಭದ್ರತೆಗೆ ನೇಮಿಸಿದ್ದಾರೆ. ವಿಶೇಷ ಅಂದರೆ ಇಂಟರ್​ ಮಿಯಾಮಿ ತಂಡವೇ ಈ ಅಂಗರಕ್ಷಕನನ್ನು ನೇಮಿಸಿರುವುದು.

ಬಾಡಿಗಾರ್ಡ್​ ಯಾರು?

ಲಿಯೊನೆಲ್ ಮೆಸ್ಸಿಗೆ ಹಲವು ತಿಂಗಳಿಂದ ಜೀವ ಬೆದರಿಕೆಗಳು ಬರುತ್ತಿವೆ. ಅತ್ಯಂತ ಜನಪ್ರಿಯ ಆಟಗಾರ ಮೆಸ್ಸಿಯನ್ನು ಗುರಿಯಾಗಿಸಿಕೊಂಡು ಪ್ರಾಣ ಬೆದರಿಕೆ ಹಾಕಲಾಗುತ್ತಿದೆ. ಈ ಕಾರಣದಿಂದ ವೈಯಕ್ತಿಕ ಭದ್ರತೆಯನ್ನು ನೇಮಿಸಿಕೊಂಡಿದ್ದಾರೆ. ಮಾಜಿ ಸೈನಿಕ ಮತ್ತು ಎಂಎಂಎ ಫೈಟರ್‌ ಯಾಸಿನ್‌ ಚುಯೆಕೊ ಅವರನ್ನು ಬಾಡಿಗಾರ್ಡ್ ಆಗಿ ನೇಮಕ ಮಾಡಲಾಗಿದೆ.

ಇನ್ನೂ ಇಂಟರ್ ಮಿಯಾಮಿ ಪರ ಆಡುವಾಗ ಹೆಚ್ಚು ಸದ್ದು ಮಾಡಿದ್ದೇ ಮೆಸ್ಸಿ ಅವರ ಅಂಗರಕ್ಷಕ ಯಾಸಿನ್ ಅವರು. ರಕ್ಷಣೆ ದೃಷ್ಟಿಯಲ್ಲಿ ಮೆಸ್ಸಿ ಎಲ್ಲಿ ಓಡಿದರೂ ಅಲ್ಲಿ ಯಾಸಿನ್ ಅವರು ಓಡುತ್ತಿದ್ದರು. ಅದಲ್ಲದೆ ಯಾರನ್ನೂ ಮೆಸ್ಸಿ ಹತ್ತಿರಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ಹಾಗಾಗಿ ಎಲ್ಲರಿಗೂ ಕುತೂಹಲ ಹೆಚ್ಚಾಗಿತ್ತು.

ಯಾಸಿನ್ ಚುಯೆಕೊ ಅವರು ಅಮೆರಿಕದ ನೌಕಾಪಡೆಯ ಮಾಜಿ ಅಧಿಕಾರಿ ಹಾಗೂ ಫೈಟರ್‌ ಆಗಿ ಗುರುತಿಸಿಕೊಂಡಿದ್ದರು.​​ ವೃತ್ತಿಪರ ಮಿಶ್ರ ಸಮರ ಕಲೆಯಲ್ಲಿ ಪರಿಣಿತರಾಗಿರುವ ಚುಯೆಕೊ ಅವರು, ಯುನೈಟೆಡ್ ಸ್ಟೇಟ್ಸ್ ಸೈನಿಕನಾಗಿ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *