ಮೋದಿ ಬೆಂಗಳೂರಿಗೆ ಬಂದರೂ ರಾಜ್ಯ ಬಿಜೆಪಿ ನಾಯಕರಿಗೆ ನೋ ವಿಸಿಟ್ – ಬ್ಯಾರಿಕೇಡ್‌ನ ಹಿಂದೆ ನಿಂತ ಬಿಜೆಪಿ ನಾಯಕರನ್ನು ಕಿಚಾಯಿಸಿದ ಕಾಂಗ್ರೆಸ್‌

ಮೋದಿ ಬೆಂಗಳೂರಿಗೆ ಬಂದರೂ ರಾಜ್ಯ ಬಿಜೆಪಿ ನಾಯಕರಿಗೆ ನೋ ವಿಸಿಟ್ – ಬ್ಯಾರಿಕೇಡ್‌ನ ಹಿಂದೆ ನಿಂತ ಬಿಜೆಪಿ ನಾಯಕರನ್ನು ಕಿಚಾಯಿಸಿದ ಕಾಂಗ್ರೆಸ್‌

ನ್ಯೂಸ್‌ ಆ್ಯರೋ : ಚಂದ್ರಯಾನ 3ರ ಯಶಸ್ವಿಗೆ ಕಾರಣರಾದ ಇಸ್ರೋ ಜ್ಞಾನಿಗಳಿಗೆ ಶುಭಕೋರಲು ಪ್ರಧಾನಿ ಮೋದಿ ಅವರು ಗ್ರೀಸ್‌ ದೇಶದಿಂದ ಇಂದು ನೇರವಾಗಿ ಬೆಂಗಳೂರಿಗೆ ಬಂದಿಳಿದ್ದಾರೆ. ರಸ್ತೆ ಮಾರ್ಗದ ಮೂಲಕ ಪೀಣ್ಯ ಬಳಿಯಿರುವ ಇಸ್ರೋಗೆ ಭೇಟಿ ನೀಡಿದ್ದಾರೆ.

ಈ ವೇಳೆ ಮೋದಿಯನ್ನು ಸ್ವಾಗತಿಸಲು ರಸ್ತೆ ಬದಿಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ನಿಂತಿದ್ದರು. ರಸ್ತೆಯ ಬ್ಯಾರಿಕೇಡ್​ ಹಿಂದೆ ನಾಯಕರು ನಿಂತಿರೋ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ, ಬಿಜೆಪಿಯನ್ನು ಕಾಂಗ್ರೆಸ್​ ನಾಯಕರು ಗೇಲಿ ಮಾಡಿ ಕಾಲೇಳೆಯುತ್ತಿದ್ದಾರೆ

ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ, ಮಾಜಿ ಎಂಎಲ್‌ಸಿ ರಮೇಶ್ ಬಾಬು ಟ್ವೀಟ್ ಮಾಡಿ, ಇಂಥ ದುರಂತವನ್ನು ನೀವು ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ನೋಡಲು ಸಾಧ್ಯ. ಮೋದಿ ಭೇಟಿ ವೇಳೆ ರಾಜ್ಯ ಬಿಜೆಪಿ ನಾಯಕರನ್ನು ನಾಯಿಗಿಂತ ಕಡೆಯಾಗಿ ನೋಡಲಾಗಿದೆ. ಬಿಜೆಪಿ ಆರ್​ಎಸ್​ಎಸ್​ನಲ್ಲಿ ಆತ್ಮಾಭಿಮಾನ ಸಂಸ್ಕೃತಿ ಕಳೆದು ಹೋಗಿದೆ, ಜೈ ಮೋದಿ ಎಂದು ಅಪಹಾಸ್ಯ ಮಾಡಿ ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಕಾಂಗ್ರೆಸ್​ ಟ್ವೀಟ್ ಮಾಡಿ, ಬಿಜೆಪಿ ನಾಯಕರದ್ದು ಎಂತಹ ದುಸ್ಥಿತಿ.. ರಾಜ್ಯ ಬಿಜೆಪಿಯ ‘ದಂಡ’ ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ! ಬಿಜೆಪಿಯ ಹೈಕಮಾಂಡ್ ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ! ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ? ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Related post

ಕಿರುತೆರೆ ನಟಿ ಅಗ್ನಿಸಾಕ್ಷಿ ‘ವೈಷ್ಣವಿ ಗೌಡ’ ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಕಿರುತೆರೆ ನಟಿ ಅಗ್ನಿಸಾಕ್ಷಿ ‘ವೈಷ್ಣವಿ ಗೌಡ’ ಗೆ ದಂಡ ವಿಧಿಸಿದ ಟ್ರಾಫಿಕ್…

ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರಾ ಗುಳಿ ಕೆನ್ನೆ ಬೆಡಗಿ..! ನ್ಯೂಸ್ ಆರೋ: ಸಂಚಾರ ನಿಯಮವನ್ನು ಪಾಲಿಸದೇ ಇದ್ದುದ್ದಕ್ಕೆ  ಬೆಂಗಳೂರು ಸಂಚಾರಿ  ಪೊಲೀಸರು ಕನ್ನಡದ ಕಿರುತೆರೆ ನಟಿಯೊಬ್ಬರಿಗೆ ಶಾಕ್‌ ಕೊಟ್ಟಿದ್ದಾರೆ.…
ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಸಾಲ ತೆಗೆದುಕೊಳ್ಳಲು ಹೊರಟಿದ್ದರೆ ಮತ್ತು ಈ ಕೆಲಸದಲ್ಲಿ…

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…

Leave a Reply

Your email address will not be published. Required fields are marked *