
ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿಗೆ ಹೆಚ್ಚಿದ ಜೀವ ಬೆದರಿಕೆ – ಮೆಸ್ಸಿಗೆ ಸಿಕ್ಕ ಹೊಸ ಬಾಡಿಗಾರ್ಡ್ ಅದೆಷ್ಟು ಬಲಿಷ್ಠ ಗೊತ್ತಾ..!?
- ಕ್ರೀಡಾ ಸುದ್ದಿ
- August 26, 2023
- No Comment
- 70
ನ್ಯೂಸ್ ಆ್ಯರೋ : ಕಳೆದ ಬಾರಿ ಅರ್ಜೆಂಟೀನಾ ತಂಡಕ್ಕೆ ಫಿಫಾ ವಿಶ್ವಕಪ್ ಗೆದ್ದುಕೊಟ್ಟ ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಲಿಯೊನೆಲ್ ಮೆಸ್ಸಿ ಅವರು ಮಾಜಿ ಸೈನಿಕನನ್ನು ತಮ್ಮ ಬಾಡಿಗಾರ್ಡ್ ಆಗಿ ನೇಮಿಸುವ ಮೂಲಕ ಸುದ್ದಿಯಾಗಿದ್ದಾರೆ.
ಜೀವ ಬೆದರಿಕೆ ಕರೆಗಳು ಹೆಚ್ಚಾಗಿದ್ದರಿಂದ ಲಿಯೊನೆಲ್ ಮೆಸ್ಸಿ ಅವರು ತಮ್ಮ ರಕ್ಷಣೆಗಾಗಿ ಎಂಎಂಎ ಫೈಟರ್ ಹಾಗೂ ಮಾಜಿ ಸೈನಿಕನನ್ನು ತಮ್ಮ ಭದ್ರತೆಗೆ ನೇಮಿಸಿದ್ದಾರೆ. ವಿಶೇಷ ಅಂದರೆ ಇಂಟರ್ ಮಿಯಾಮಿ ತಂಡವೇ ಈ ಅಂಗರಕ್ಷಕನನ್ನು ನೇಮಿಸಿರುವುದು.
ಬಾಡಿಗಾರ್ಡ್ ಯಾರು?
ಲಿಯೊನೆಲ್ ಮೆಸ್ಸಿಗೆ ಹಲವು ತಿಂಗಳಿಂದ ಜೀವ ಬೆದರಿಕೆಗಳು ಬರುತ್ತಿವೆ. ಅತ್ಯಂತ ಜನಪ್ರಿಯ ಆಟಗಾರ ಮೆಸ್ಸಿಯನ್ನು ಗುರಿಯಾಗಿಸಿಕೊಂಡು ಪ್ರಾಣ ಬೆದರಿಕೆ ಹಾಕಲಾಗುತ್ತಿದೆ. ಈ ಕಾರಣದಿಂದ ವೈಯಕ್ತಿಕ ಭದ್ರತೆಯನ್ನು ನೇಮಿಸಿಕೊಂಡಿದ್ದಾರೆ. ಮಾಜಿ ಸೈನಿಕ ಮತ್ತು ಎಂಎಂಎ ಫೈಟರ್ ಯಾಸಿನ್ ಚುಯೆಕೊ ಅವರನ್ನು ಬಾಡಿಗಾರ್ಡ್ ಆಗಿ ನೇಮಕ ಮಾಡಲಾಗಿದೆ.
ಇನ್ನೂ ಇಂಟರ್ ಮಿಯಾಮಿ ಪರ ಆಡುವಾಗ ಹೆಚ್ಚು ಸದ್ದು ಮಾಡಿದ್ದೇ ಮೆಸ್ಸಿ ಅವರ ಅಂಗರಕ್ಷಕ ಯಾಸಿನ್ ಅವರು. ರಕ್ಷಣೆ ದೃಷ್ಟಿಯಲ್ಲಿ ಮೆಸ್ಸಿ ಎಲ್ಲಿ ಓಡಿದರೂ ಅಲ್ಲಿ ಯಾಸಿನ್ ಅವರು ಓಡುತ್ತಿದ್ದರು. ಅದಲ್ಲದೆ ಯಾರನ್ನೂ ಮೆಸ್ಸಿ ಹತ್ತಿರಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ಹಾಗಾಗಿ ಎಲ್ಲರಿಗೂ ಕುತೂಹಲ ಹೆಚ್ಚಾಗಿತ್ತು.
ಯಾಸಿನ್ ಚುಯೆಕೊ ಅವರು ಅಮೆರಿಕದ ನೌಕಾಪಡೆಯ ಮಾಜಿ ಅಧಿಕಾರಿ ಹಾಗೂ ಫೈಟರ್ ಆಗಿ ಗುರುತಿಸಿಕೊಂಡಿದ್ದರು. ವೃತ್ತಿಪರ ಮಿಶ್ರ ಸಮರ ಕಲೆಯಲ್ಲಿ ಪರಿಣಿತರಾಗಿರುವ ಚುಯೆಕೊ ಅವರು, ಯುನೈಟೆಡ್ ಸ್ಟೇಟ್ಸ್ ಸೈನಿಕನಾಗಿ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ್ದಾರೆ.