
ಬೆಂಗಳೂರಿನ ಪೊಲೀಸರ ಜತೆ ಫೋಟೋಗೆ ಪೋಸ್ ಕೊಟ್ಟ ಕೊಹ್ಲಿ – ರನ್ ಮೆಷಿನ್ ಸರಳತೆಗೆ ಸೆಲ್ಯೂಟ್ ಹೊಡೆದ ಭದ್ರತಾ ಪಡೆ
- ಕ್ರೀಡಾ ಸುದ್ದಿ
- August 26, 2023
- No Comment
- 38
ನ್ಯೂಸ್ ಆ್ಯರೋ : ಭಾರತದ ರನ್ ಮಿಷನ್ ವಿರಾಟ್ ಕೊಹ್ಲಿ ಅವರು ಯೋ ಯೋ ಟೆಸ್ಟ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ನಗರದ ಪೊಲೀಸರೊಂದಿಗೆ ಫೋಟೋಗೆ ಫೋಸ್ ಕೊಡುವ ಮೂಲಕ ಸರಳತೆ ಮೆರೆದಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರು ಜತೆ ಪ್ರತಿಯೊಬ್ಬರು ಫೋಟೋವನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಆದರೆ ಅವರ ಪಕ್ಕ ನಿಂತುಕೊಳ್ಳಲು ಕೆಲವರಷ್ಟಿಗೆ ಮಾತ್ರ ಅವಕಾಶ ಸಿಗುತ್ತದೆ. ಇದೀಗ ನಗರದ ಪೊಲೀಸರ ಗ್ರೂಪ್ ಫೋಟೋಗೆ ವಿರಾಟ್ ಸಾಥ್ ನೀಡಿದ್ದು, ಭದ್ರತಾ ಪಡೆಗಳು ಫುಲ್ ಖುಷ್ ಆಗಿದ್ದಾರೆ.
ವಿರಾಟ್ ಅವರು ಫಿಟ್ನೆಸ್ ಟೆಸ್ಟ್ಗೆ ಒಳಪಡಲು ಬೆಂಗಳೂರಿಗೆ ಆಗಮಿಸಿದ್ದು, ಈ ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಆಗಿದ್ದಾರೆ. ಇವರು ಮುಂದಿನ ಏಷ್ಯಾ ಕಪ್ ಪಂದ್ಯಗಳಲ್ಲಿ ಆಟಲಿದ್ದಾರೆ.
ಆಗಸ್ಟ್ 30 ರಿಂದ ಏಷ್ಯಾ ಕಪ್ ಪಂದ್ಯಗಳು ನಡೆಯಲಿವೆ. ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಆಯೋಜನೆಗೊಳ್ಳುವ ಪಂದ್ಯದಲ್ಲಿ ವಿರಾಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಭಾರತ ತಂಡ ಹೀಗಿವೆ :
ರೋಹಿತ್ ಶರ್ಮಾ (ಕ್ಯಾಪ್ಟನ್), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ವೈಸ್ ಕ್ಯಾಪ್ಟನ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ