
ವಿದೇಶದಲ್ಲಿ ಸ್ನೇಹಿತೆ ಜತೆ ಜಾಲಿ ಮೂಡ್‌ನಲ್ಲಿ ಮೋಹಕತಾರೆ ರಮ್ಯಾ – ಪದ್ಮಾವತಿಯ ಬಿಕಿನಿ ಲುಕ್‌ಗೆ ಪಡ್ಡೆ ಹುಡುಗರು ಫಿದಾ
- ಮನರಂಜನೆ
- August 26, 2023
- No Comment
- 85
ನ್ಯೂಸ್ ಆ್ಯರೋ : ಕೆಲ ವರ್ಷಗಳ ಬ್ರೇಕ್ ಬಳಿಕ ನಟಿ ರಮ್ಯಾ ಅವರು ಧನಂಜಯ್ ಅವರ ಅಭಿನಯದ ಉತ್ತರಾಖಂಡ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಮತ್ತೇ ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಡಾಲಿಗೆ ಜೋಡಿಯಾಗಿರುವ ರಮ್ಯಾ ಅವರು ಇದೀಗ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಇದಕ್ಕಾಗಿಯೇ ನಟಿ ವಿದೇಶಕ್ಕೆ ತೆರಳಿದ್ದಾರೆ ಎಂದು ಸುದ್ದಿಯಿದೆ.
ತನ್ನ ಸ್ನೇಹಿತೆ ಜತೆಗೆ ವಿದೇಶದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋವನ್ನು ರಮ್ಯಾ ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಬಿಸಿಲೆಗೆ ಬೋಟ್‌ನಲ್ಲಿ ಸುತ್ತಾಡುವ ಫೋಟೋ ಸೇರಿದಂತೆ 10 ಫೋಟೋವನ್ನು ಶೇರ್ ಮಾಡಿದ್ದಾರೆ.


ಬೀಚ್ನಲ್ಲಿ ಕ್ಲಿಕ್ ಮಾಡಿದ ಫೋಟೋವೊಂದರಲ್ಲಿ ಬ್ಲ್ಯಾಕ್ ಕಲರ್ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ರಮ್ಯಾ ಫೋಟೋಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
ಈಗಾಗಲೇ ಡಾಲಿ ಜೊತೆ ಮೋಹಕತಾರೆ ಅಭಿನಯದ ಉತ್ತರಾಖಂಡ ಚಿತ್ರದ ಫಸ್ಟ್ ಲುಕ್ ಟೀಸರ್ ವಿಡಿಯೋ ಬಿಡುಗಡೆಯಾಗಿದೆ. ಟೀಸರ್ನಲ್ಲಿ ಡಾಲಿ ಉತ್ತರ ಕರ್ನಾಟಕದ ಕರಾಬು ರೌಡಿ ರೀತಿ ಕಾಣಿಸಿಕೊಂಡಿದ್ದಾರೆ. ಇನ್ನು ಉತ್ತರಾಖಂಡ ಚಿತ್ರದಲ್ಲಿ ಶಿವರಾಜ್ ಕುಮಾರ್ ಆ್ಯಕ್ಟ್ ಮಾಡಬೇಕಿತ್ತು. ಆದ್ರೆ ಶಿವಣ್ಣನಿಗೆ ಈ ವರ್ಷ ಫುಲ್ ಬ್ಯುಸಿ ಇರೋದ್ರಿಂದ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಲ್ಲ ಎಂದು ಹೇಳಲಾಗಿದೆ. ಈ ಚಿತ್ರಕ್ಕೆ ರೋಹಿತ್ ಪಡಕಿ ಅವರು ಆ್ಯಕ್ಷನ್ ಕಟ್ ಹೇಳಿದ್ದು, ಕೆಆರ್ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾ ರೆಡಿಯಾಗುತ್ತಿದೆ.